ದೇವರಹಿಪ್ಪರಗಿ: ಬಿಜೆಪಿಯ ಎಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಟ್ಟಣದ ಮಡಿವಾಳ ಮಾಚಿದೇವ ದೇವಸ್ಥಾನದ ಹತ್ತಿರ ಮಂಗಳವಾರ
ಸಭೆ ಜರುಗಿಸಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷ ಡಾ.ಆರ್.ಆರ್.ನಾಯಿಕ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಜೀವ ಗುತ್ತೇದಾರ, ಜಿಲ್ಲಾ ಮಾಜಿ ಕಾರ್ಯದರ್ಶಿ ಪ್ರಮೋದ ನಾಡಗೌಡ ಮಾತನಾಡಿ, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದರೂ, ನಮ್ಮ ಮತಕ್ಷೇತ್ರದಲ್ಲಿ ಬಿಜೆಪಿ ಎಂಬುದು ಪ್ರೆöÊವೇಟ್ ಪಾರ್ಟಿಯಾಗಿ ಪರಿವರ್ತನೆಯಾಗಿದೆ. ಯಾವೊಬ್ಬ ಕಾರ್ಯಕರ್ತನಿಗೂ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಬಹುತೇಕ ಕಾರ್ಯಕರ್ತರು ಅತ್ಯಂತ ನೋವಿನಿಂದ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಇನ್ನು ಮೇಲೆ ಕಾರ್ಯಕರ್ತರು ಯಾವ ಪಕ್ಷಕ್ಕಾದರೂ ಸೇರಬಹುದು ಈ ಬಾರಿ ಬಿಜೆಪಿಗೆ ಮಾತ್ರ ನಮ್ಮ ಬೆಂಬಲವಿಲ್ಲ ಎಂದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜು ಮೆಟಗಾರ, ರೈತಮೋರ್ಚಾ ಅಧ್ಯಕ್ಷ ಮಹಾಂತೇಶ ವಂದಾಲ, ಮಹೇಶ ಬುದ್ನಿ, ದಿನೇಶ ಪಾಟೀಲ, ವಿನೋದ ಪಾಟೀಲ, ಶರಣು ಕಕ್ಕಸಗೇರಿ, ಬಾಬುಗೌಡ ಯಳಕೋಟಿ, ವಿಜಯಕುಮಾರ ಹಿರೇಮಠ, ರಮೇಶ ಮಾಳನೂರ, ಗುರು ಜಡಗೊಂಡ, ನಿಂಗು ನಾಗರಾಳ, ಸಿದ್ದು ಕೋಟಿನ, ರವಿ ಮಿಂಚನಾಳ, ಸಂಗು ಹಳಿಮನಿ, ಕಾಸು ರಾಮಗೊಂಡ, ಬಸವರಾಜ ಹೀರಾಪುರ, ಮಲ್ಲು ಹಳಿಮನಿ, ಸದಾನಂದ ಮಣೂರ, ಪ್ರಕಾಶ ಪಾಟೀಲ, ಮಹೇಶ ಅಳ್ಳಗಿ, ಚಿದಾನಂದ ಗೊಳಸಾರ ಇದ್ದರು.
ರಾಜೀನಾಮೆ ಸ್ವೀಕಾರಕ್ಕೆ ಜಿಲ್ಲಾ ಹಾಗೂ ಮಂಡಲ ಅಧ್ಯಕ್ಷರಿಗೆ ಕರೆ ಮಾಡಿದರೂ ಯಾರೊಬ್ಬರೂ ಬರದ ಕಾರಣ ಬಿಜೆಪಿ ಪ್ರಚಾರ ಕಚೇರಿಯಲ್ಲಿ ರಾಜೀನಾಮೆ ಪತ್ರಗಳನ್ನು ಇಟ್ಟು ತೆರಳಿದರು.
Subscribe to Updates
Get the latest creative news from FooBar about art, design and business.
ದೇವರಹಿಪ್ಪರಗಿ: ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ ; ಪ್ರಮುಖರ ರಾಜಿನಾಮೆ
Related Posts
Add A Comment