ಸಿಂದಗಿ: ಪಕ್ಷ ಎಂಬುದು ನನಗೆ ತಾಯಿಯ ಸಮಾನ. ಟಿಕೇಟ್ ಸಿಗಲಿಲ್ಲ ಎಂಬ ಅಸಮಾಧಾನ ಇದೆ. ಬಂಡಾಯ ಸ್ಪರ್ಧೆ ಮಾಡುವುದಿಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಯ ಉದರ ಕೊಯ್ದಂತೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೋಳೂರ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಸಿಂದಗಿ ಹಾಗೂ ಆಲಮೇಲ ತಾಲೂಕಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಿಂದಗಿ ಕಾಂಗ್ರೆಸ್ ಅಭ್ಯರ್ಥಿಯಾದ ಅಶೋಕ್ ಮನಗೂಳಿ ಮೂಲ ಕಾಂಗ್ರೆಸ್ ಪದಾಧಿಕಾರಿಗಳ, ಕಾರ್ಯಕರ್ತರ ವಿಶ್ವಾಸ ತೆಗೆದುಕೊಂಡು ಚುನಾವಣೆಯನ್ನು ಎದುರಿಸಬೇಕು. ಕಾಂಗ್ರೆಸ್ ಪಕ್ಷ ಎಂಬುದು ಕಾರ್ಯಕರ್ತರು ನೀರು ಉಣಿಸಿ ಬೆಳೆಸಿದ ಮರ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನೆನೆಗುದಿಗೆ ಬಿದ್ದಿತ್ತು. ನಾನು ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿದ್ದೇನೆ. ಟಿಕೆಟ್ ದೊರಕದಿದ್ದಕ್ಕೆ ನೋವಾದರೂ ಸಹ ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನಾತ್ಮಕವಾಗಿ ಕಾರ್ಯೋನ್ಮುಖನಾಗುತ್ತೇನೆ ಎಂದು ಕೋಳೂರ ಹೇಳಿದರು.
ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ ಮಾತನಾಡಿ, ಪಕ್ಷ ಸಂಘಟನೆ ಮಾಡಿ ತಾಲೂಕಿನಲ್ಲಿ ಕಾಂಗ್ರೆಸ್‌ನ್ನು ಬಲಿಷ್ಠ ಮಾಡಿದ ಕೀರ್ತಿ ವಿಠ್ಠಲ ಕೋಳೂರ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಹೈಕಮಾಂಡ್ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಬೇಕು ಎಂದರು.
ಎಸ್ಸಿಎಸ್ಟಿ ಘಟಕದ ತಾಲೂಕು ಅಧ್ಯಕ್ಷರಾದ ವಿರೇಶ್ ಕೋಟರಗಸ್ತಿ,
ಮುಖAಡರಾದ ಶ್ರೀಮಂತ ಮಲ್ಲೇದ ಮಾತನಾಡಿದರು.
ಈ ವೇಳೆ ಯೂತ್ ಅಧ್ಯಕ್ಷ ಇರ್ಫಾನ್ ಆಳಂದ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಾಂತೇಶ್ ಅಮ್ಮಾಗೋಳ, ಕಿಸಾನ್ ಘಟಕ ಅಧ್ಯಕ್ಷ ಸಿದ್ಧಲಿಂಗ ಗುಂಡಾಪೂರ, ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಪೂಜಾರಿ, ಎಸ್ಟಿ ಘಟಕದ ಅಧ್ಯಕ್ಷ ವಿಠ್ಠಲ್ ಖೇಡಗಿ, ಕಾಮೇಶ್ ಉಕ್ಕಲಿ, ಎನ್‌ಎಸ್‌ಯುಐ ಅಧ್ಯಕ್ಷ ರಾಘೂ ಪೂಜಾರಿ, ಭೀಮು ವಾಲೀಕಾರ, ಪ್ರಧಾನ ಕಾರ್ಯದರ್ಶಿ ಭೀಮು ಕೆರಕಿ, ಸಿದ್ದು ಮಲ್ಲೇದ, ಲಕ್ಷಣ ಜೇವರ್ಗಿ, ಕಂಟೆಪ್ಪ ಪೂಜಾರಿ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
ಟಿಕೆಟ್ ಸಿಗದ್ದಕ್ಕೆ ನೋವಾದರೂ ಕಾಂಗ್ರೆಸ್ ಗೆಲುವಿಗೆ ಬದ್ಧ :ಕೋಳೂರ
Related Posts
Add A Comment