Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಆರ್ಟ್ಸ್ ಮತ್ತು ಕೆ.ಸಿ.ಪಿ. ಸೈನ್ಸ್ ಕಾಲೇಜು “ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್”ಖೇಲೋ ಇಂಡಿಯಾ ಸಂವಾದ ಆಯೋಜಿಸಲು ವಿಜಯಪುರದ ಕಾಲೇಜು ಆಯ್ಕೆಯಾಗಿದೆ.ಖೇಲೋ ಇಂಡಿಯಾ ಸಂವಾದ – “ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್”ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 10:00 ಗಂಟೆಗೆ ಆಯೋಜಿಲಾಗಿದ್ದು,ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಕ್ರೀಡಾ ಮನೋಭಾವ, ದೈಹಿಕ ಕ್ಷಮತೆ, ಶಿಸ್ತು, ತಂಡಭಾವನೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಭಾಗವಹಿಸಲು ಈ ಕಾರ್ಯಕ್ರಮವು ಉತ್ತಮ ಅವಕಾಶವನ್ನು ಒದಗಿಸಲಿದೆ.ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಸಂಯೋಜಿತ ಕಾಲೇಜುಗಳು ತಮ್ಮ ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವಿಜಯಪುರದ ಭೂತನಾಳ ಕೆರೆಯಲ್ಲಿ ನಡೆದ ಹೃದಯವಿದ್ರಾವಕ ದುರ್ಘಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆದರ್ಶನಗರ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ 6 ಜನರು ನೀರಲ್ಲಿ ಮುಳುಗಿ ಮರಣ ಹೊಂದಿದ ಹೃದಯವಿದ್ರಾವಕ ದುರ್ಘಟನೆ ಜರುಗಿದೆ.ಬುಧವಾರ ಕೆರೆಯ ಅಂಚಿನಲ್ಲಿ ಶವಗಳು ತೇಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.ಮೃತರು ನಗರದ ಹೊರವಲಯದ ತೊರವಿ ಗ್ರಾಮದ ಶಾಂತಿ ನಗರದ ನಿವಾಸಿಗಳಾಗಿದ್ದು ಶೋಭಾ ಗಂ. ಮಲ್ಲಿಕಾರ್ಜುನ ಜಾಲಗೇರಿ (35) ಎಂಬ ಮಹಿಳೆ ತನ್ನ ಐದು ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ (12), ಸಾನಿಕಾ (10) ಮತ್ತು ವಿಕಾಶ (6) ಎಂದು ತಿಳಿದುಬಂದಿದೆ.ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಘಟನೆಯ ಕುರಿತು ತನಿಖೆ ಮುಂದುವರೆದಿದೆ. ಮೃತಳ…
ಡಿ.13 ರಂದು ವಿಜಯಪುರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2026 | ಪೂರ್ವಭಾವಿ ಸಭೆಯಲ್ಲಿ ಡಾ.ಮಹಾಂತೇಶ ಬಿರಾದಾರ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ವರ್ಷದಿಂದ ವೃಕ್ಷಥಾನ್ ಹೆರಿಟೇಜ್ ರನ್ 42 ಕಿ.ಮಿ ಫುಲ್ ಮ್ಯಾರಾಥಾನ್ ನಡೆಸಲು ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.ಬುಧವಾರ ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2026 ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಎನ್.ಇ.ಬಿ (NEB) ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 42 ಕಿ. ಮಿ. ಫುಲ್ ಮ್ಯಾರಾಥಾನ್ ಸಂಘಟಿಸುವ ಸಂಸ್ಥೆಯೊಂದಿಗೆ ವೃಕ್ಷಥಾನ್ ಹೆರಿಟೇಜ್ ರನ್ ಆಯೋಜನೆ ಸಮಿತಿ ಫುಲ್ ಮ್ಯಾರಾಥಾನ್ ನಡೆಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 2027ರಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಫುಲ್ ಮ್ಯಾರಾಥಾನ ನಡೆಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳುವಂತೆ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.ಈ ಬಾರಿ ಡಿಸೆಂಬರ್ 13 ರಂದು ವೃಕ್ಷಥಾನ್ ಹೆರಿಟೇಜ್ ರನ್- 2026 ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್…
ಬಳ್ಳೊಳ್ಳಿಯಲ್ಲಿ ಬಸ್‌ಗಳ ನಿಲುಗಡೆಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಿಂದಿನ ಸರ್ಕಾರದ ಸಾರಿಗೆ ಸಚಿವರಾಗಿದ್ದ ಶ್ರಿರಾಮುಲು ಅವರು ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಸಾರಿಗೆ ಇಲಾಖೆಯ ಎಲ್ಲ ಘಟಕಗಳ ಬಸ್‌ಗಳು ನಿಲುಗಡೆ ಮಾಡುವಂತೆ ಆದೇಶ ನೀಡಿದ್ದರೂ, ಸಾರಿಗೆ ಇಲಾಖೆ ಮಾತ್ರ ಆದೇಶವನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಬಳ್ಳೊಳ್ಳಿ ಗ್ರಾಮಕ್ಕೆ ವಿಜಯಪುರ ಘಟಕದ ಕೆಲವೇ ಕೆಲವು ಬಸ್‌ಗಳು ಮಾತ್ರ ಸೇತುವೆ ಕೆಳಗಡೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಆದರೆ ಚಿತ್ರದುರ್ಗ, ಹಳಿಯಾಳ, ಬೆಳಗಾವಿ ಸೇರಿದಂತೆ ವಿವಿಧ ಘಟಕಗಳ ಬಸ್‌ಗಳು ಗ್ರಾಮದ ಸೇತುವೆ ಕೆಳಗಡೆ ಬಂದು ನಿಲ್ಲಿಸುತ್ತಿಲ್ಲ. ಕೆಲ ಬಸ್‌ಗಳು ಸೇತುವೆ ಮೇಲೆ ಪ್ರಯಾಣಿಕರು ನಿಂತರೂ ಕಂಡು ಕಾಣದಂತೆ ಬಸ್ ನಿಲ್ಲಿಸದೆ ಪ್ರಯಾಣಿಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಬಳ್ಳೊಳ್ಳಿ ಗ್ರಾಮವು ಹೋಬಳಿ ಮಟ್ಟದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ನಾಡಕಚೇರಿ, ಸರ್ಕಾರಿ ಶಾಲೆಗಳು, ಕಾಲೇಜು, ರಾಷ್ಟ್ರೀಕೃತ ಬ್ಯಾಂಕ್, ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳಿವೆ.…
ಉದಯರಶ್ಮಿ ದಿನಪತ್ರಿಕೆ ಅಥಣಿ: ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ದೈಹಿಕ ಸಾಮರ್ಥ್ಯ ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ೨೦೨೬-೨೭ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಅಥಣಿ ತಾಲೂಕಾ ಮಟ್ಟದ ಕ್ರೀಡಾಕೂಟ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಆ.೨೭ರಂದು ಬೆಳಿಗ್ಗೆ ೯:೩೦ಕ್ಕೆ ನಗರದ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯಲಿದೆ.ಎನ್ ಬಿ ಸಾಮಂತ ಪದವಿ ಪೂರ್ವ ಕಾಲೇಜು ರಡ್ಡೇರಹಟ್ಟಿ ಇವರ ನೇತೃತ್ವದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸಹಕಾರ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಮ್ ಎ ಚನ್ನಾಪೂರ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಲಿಂಗರಾಜು ಎನ್ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಪ ಪೂ ಚಿಕ್ಕೋಡಿ ಸಿದ್ದರಾಯ್ ಭೋಸಗಿ ತಹಶೀಲ್ದಾರ ಅಥಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಮಂದಿಯ ಶವಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಬಾಲಕರು ಸೇರಿದ್ದಾರೆ.ಕೆರೆ ವೀಕ್ಷಣೆಗೆ ಬಂದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆರೆಯ ಅಂಚಿನಲ್ಲಿ ಶವಗಳು ತೇಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.ಮೃತರ ಹೆಸರು ಹಾಗೂ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಮೃತರ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಒಟ್ಟು ೪೫೦೦ ಕೋಟಿ ರೂ. ಮೊತ್ತದ ಯೋಜನೆ | ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಳಿಕೋಟೆ, ಯಾದಗೀರ ಸುತ್ತಮುತ್ತಲಿನ ಜನತೆಯ ಅನೇಕ ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ ಯಾದಗೀರ ರೈಲ್ವೇ ಮಾರ್ಗಕ್ಕೆ ಸಂಬಂಧಿಸಿದಂತೆ ೪.೫ ಕೋಟಿ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಲಮಟ್ಟಿಯಿಂದ ಯಾದಗೀರಿ ೧೬೨ ಕೀ.ಮೀ. ದೂರದ ರೈಲ್ವೇ ಮಾರ್ಗಕ್ಕೆ ಈಗ ಪ್ರಥಮ ಹಂತವಾಗಿ ಸರ್ವೇ ಕಾರ್ಯಕ್ಕೆ ೪.೫ ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ, ಇದು ಒಟ್ಟು ೪೫೦೦ ಕೋಟಿ ರೂ. ಮೊತ್ತದ ಯೋಜನೆಯಾಗಿದೆ ಎಂದು ಜಿಗಜಿಣಗಿ ಮಾಹಿತಿ ನೀಡಿದ್ದಾರೆ.ಬ್ರಿಟಿಷರ ಕಾಲದಿಂದಲೂ ಈ ರೈಲ್ವೇ ಮಾರ್ಗದ ಬೇಡಿಕೆ ಇತ್ತು. ತಾಳಿಕೋಟೆ, ಯಾದಗೀರಿ ಸೇರಿದಂತೆ ಅನೇಕ ಭಾಗದ ಜನರು ಈ ರೈಲ್ವೇ ಮಾರ್ಗಕ್ಕೆ ಬೇಡಿಕೆ ಇರಿಸಿದ್ದರು, ಅನೇಕ ಹಂತದ ಹೋರಾಟ ಸಹ ನಡೆಸಿದ್ದರು. ಅನೇಕ ಗ್ರಾಮಗಳ…
ಕಾಗದದ ಮೇಲೆ ಭದ್ರಕೋಟೆ, ಸ್ಥಳದಲ್ಲಿ ಮಾತ್ರ ಬರೀ ಬಯಲು | ಸುಮಾರು ರೂ.3 ಲಕ್ಷ ಗುಳುಂ ಮಾಡಿದ ನುಂಗಣ್ಣರು | ಕ್ರಮಕ್ಕೆ ಗ್ರಾಮಸ್ಥರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿಅಫಜಲಪುರ: ’ಕೊಡಗನ ಕೋಳಿ ನುಂಗಿತ್ತ.. ನೋಡವ್ವ ತಂಗಿ..’ ಎಂಬ ಶರೀಫಜ್ಜನ ಹಾಡನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ಅದಕ್ಕಿಂತ ರೋಚಕವಾದ ಕಳ್ಳಾಟದ ಪವಾಡ ನಡೆದಿದೆ.ಪುಟ್ಟ ಮಕ್ಕಳು ಆಟವಾಡುವ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ರಕ್ಷಣೆ ನೀಡಬೇಕಿದ್ದ ಕಾಂಪೌಂಡ್ ಗೋಡೆಯನ್ನೇ ಗುತ್ತಿಗೆದಾರ ಮತ್ತು ಇಂಜಿನಿಯರ್ ಸೇರಿ ನುಂಗಿ ನೀರು ಕುಡಿದಿದ್ದಾರೆ!ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹3 ಲಕ್ಷ ಅನುದಾನವನ್ನು, ಸ್ಥಳದಲ್ಲಿ ಒಂದು ಇಟ್ಟಿಗೆಯನ್ನೂ ಇಡದೆ, ಕಾಮಗಾರಿ ಸಂಪೂರ್ಣ ಮುಗಿದಿದೆ ಎಂದು ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಿಕೊಂಡಿರುವ ಕರ್ಮಕಾಂಡ ಬಯಲಾಗಿದೆ.ದಾಖಲೆಯಲ್ಲಿ ಭದ್ರಗೋಡೆ, ಸ್ಥಳದಲ್ಲಿ ಶೂನ್ಯ! ಕಾಗದದಲ್ಲೇ ಮುಗಿದ ಕೆಲಸಇಲಾಖೆಯ ಕಡತಗಳ ಪ್ರಕಾರ ಅಂಗನವಾಡಿಗೆ ಸುತ್ತಲೂ ಸುಭದ್ರ ಕಾಂಪೌಂಡ್ ಗೋಡೆ ಎದ್ದು ನಿಂತಿದೆ, ಬಣ್ಣ ಬಳಿಯಲಾಗಿದೆ. ಆದರೆ ಸ್ಥಳಕ್ಕೆ ಹೋಗಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ದಿನಾಲೂ ರಾತ್ರಿ ಮುಂಜಾನೆ ೫ ಗಂಟೆಗೆ ಏಳಬೇಕೆಂದು ಅಲಾರಾಂ ಇಡುತ್ತೇವೆ. ಅಲಾರಾಂ ಹೊಡೆದಾಗ, ಅದನ್ನು ‘ಸ್ನೂಜ್’ ಮಾಡಿ ಮತ್ತೊಂದು ಮುಸುಕು ಹೊದ್ದು ಮಲಗುವುದು ನಮ್ಮ ಮನಸ್ಸಿಗೆ ತುಂಬಾ ಇಷ್ಟ. ಆದರೆ, ಅ ಆಲಸ್ಯವನ್ನು ಬದಿಗಿಟ್ಟು ಎದ್ದು ಓದುವುದು ಯಶಸ್ಸಿಗೆ ಇಷ್ಟ. ನಾಲಿಗೆಗೆ ರುಚಿ ಕೊಡುವ ಜಂಕ್ ಫುಡ್ ತಿನ್ನುವುದು ನಮಗೆ ಇಷ್ಟ, ಆದರೆ ಆರೋಗ್ಯ ಮತ್ತು ಫಿಟ್‌ನೆಸ್ ಎಂಬ ಯಶಸ್ಸಿಗೆ ಪ್ರತಿದಿನ ಕಹಿ ಕಷಾಯ ಕುಡಿಯುವುದು ಮತ್ತು ಹಸಿರು ತರಕಾರಿ ತಿನ್ನುವುದು ಇಷ್ಟ. ಪರೀಕ್ಷೆಯ ಸಮಯದಲ್ಲಿ ಕೈಯಲ್ಲಿರುವ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುತ್ತಾ ಕೂರುವುದು ನಮಗೆ ಇಷ್ಟ, ಆದರೆ ಆ ಮೊಬೈಲ್ ಪಕ್ಕಕ್ಕಿಟ್ಟು ಕಣ್ಣು ಕೆಂಪಾಗುವಂತೆ ಕಠಿಣ ವಿಷಯಗಳನ್ನು ಓದುವುದು ಯಶಸ್ಸಿಗೆ ಇಷ್ಟ.ಇಷ್ಟವಿಲ್ಲದ್ದುನಮಗೆ ಇಷ್ಟವಿಲ್ಲದ್ದು ಯಶಸ್ಸಿಗೆ ಇಷ್ಟ: “ಯಶಸ್ಸಿನ ರಹಸ್ಯವು ನೀವು ಇಷ್ಟಪಡದ ಕೆಲಸಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಲ್ಲಿದೆ.” ಈ ಮಾತು ಕೇವಲ ಒಂದು ವಾಕ್ಯವಲ್ಲ; ಇದು ಜಗತ್ತಿನ ಪ್ರತಿಯೊಬ್ಬ ಮಹಾನ್…
ವಿವಿಧ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಮತ್ತೊಂದು ಹೊಡೆತ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಬಾಗಲಕೋಟೆ: ಮಳೆ-ಹವಾಮಾನ ವೈಪರೀತ್ಯದ ಪರಿಣಾಮ ಬೆಳೆಗಳ ಮೇಲೆ ಒಂದೆಡೆ ಹೊಡೆತ ಬೀಳುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಅಡುಗೆ ಮನೆಯ ಅವಿಭಾಜ್ಯ ವಸ್ತುವಾಗಿರುವ ಈರುಳ್ಳಿಯ ದರವೂ ಏರಿಕೆಯ ಹಾದಿ ಹಿಡಿದಿದ್ದು, ಗ್ರಾಹಕರು ಈರುಳ್ಳಿ ಕೊಳ್ಳುವಾಗಲೇ ಬೆಲೆ ನೋಡಿ ಕಣ್ಣೀರು ಹಾಕುವಂತಾಗಿದೆ.ಜಮಖಂಡಿ ಸೇರಿದಂತೆ ಸುತ್ತಮುತ್ತಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿ ದರದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬರುತ್ತಿದೆ. ಗುಣಮಟ್ಟ, ಗಾತ್ರ ಹಾಗೂ ಮಾರುಕಟ್ಟೆಗೆ ಆಗಮಿಸುವ ಪ್ರಮಾಣದ ಆಧಾರದ ಮೇಲೆ ದರದಲ್ಲಿ ವ್ಯತ್ಯಾಸವಿದ್ದರೂ, ಕೆಲವೆಡೆ ಕೆಜಿಗೆ 45ರಿಂದ 55ರ ಆಸುಪಾಸಿಗೆ ಈರುಳ್ಳಿ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ.ಈರುಳ್ಳಿ ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ತರಕಾರಿ, ಬೇಳೆ, ಎಣ್ಣೆ ಸೇರಿದಂತೆ ವಿವಿಧ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ…
