ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ನೂತನ ಅಧ್ಯಕ್ಷರಾಗಿ ಅರ್ಜುನ ಗಂ ಲಮಾಣಿ ಆಯ್ಕೆಯಾಗಿದ್ದಾರೆ.
ಅದರಂತೆ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಹಣಮಂತ ಬ. ಕೊಣದಿ, ಉಪಾಧ್ಯಕ್ಷರಾಗಿ ಬಿ ಎಸ್ ಶೆಖಣ್ಣವರ, ಹಾಗೂ ಶ್ರೀಮತಿ ಆರ್ ಎಸ್ ಗಿಡ್ಡಪ್ಪಗೋಳ, ಖಜಾಂಚಿಯಾಗಿ ಸುನೀಲ ಯಳಮೇಲಿ, ಸಹಕಾರ್ಯದರ್ಶಿಯಾಗಿ ಎಂ ಎಂ ಮುಲ್ಲಾ ಹಾಗೂ ಶ್ರೀಮತಿ ಜ್ಯೋತಿ ಎಸ್ ಹಿಪ್ಪರಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ ಆರ್ ಕೊಕಟನೂರ ಹಾಗೂ ಶ್ರೀಮತಿ ಭಾರತಿ ಚಿಮ್ಮಲಗಿ ಆಯ್ಕೆಯಾಗಿದ್ದಾರೆ.
ಇವರ ಆಯ್ಕೆಯನ್ನು ರಾಜ್ಯ ಚುನಾವಣಾ ಅಧಿಕಾರಿಗಳಿಂದ ಅನುಮೋದನೆ ಪಡೆದು ಜಿಲ್ಲಾ ಸಂಘದ ಪದಾಧಿಕಾರಿಗಳ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಬಿ ಮೆಡೆಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

