ಉದಯರಶ್ಮಿ ದಿನಪತ್ರಿಕೆ
ಅಥಣಿ: ಜೂನ್ 3 ರಂದು ರಚನೆಯಾಗಲಿರುವ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಡಾ. ಡಿ.ಜಿ. ಸಾಗರ ಅವರ ಆದೇಶದ ಮೇರೆಗೆ ಸೋಮವಾರ ಅಥಣಿ ನಗರದ ಜತ್ತ ರಸ್ತೆಯ ಜ್ಯೋತಿಭಾ ಫುಲೆ ವೃತ್ತದಲ್ಲಿ ದಸಂಸ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ ಹಾಗೂ ಸಂಜಯ ತಳವಲಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಡಾ. ಎಚ್.ಸಿ. ಮಹಾದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ದಲಿತ ಹಿಂದುಳಿದ ವರ್ಗಗಳ ಪರವಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹೀಗಾಗಿ ಹೊಸ ಸಂಪುಟದಿಂದ ಅವರನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.
ದಸಂಸ ಅಥಣಿ ಸಂಚಾಲಕ ರವಿ ಕಾಂಬಳೆ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಂಡುರಂಗ ಕಾಂಬಳೆ, ಸಂತೋಷ ಗಸ್ತಿ, ರಮೇಶ ತಳಕೇರಿ, ದತ್ತು ಕಾಂಬಳೆ, ತುಕಾರಾಮ ಭಜಂತ್ರಿ ನೀಲಕಂಠ ಕಾಂಬಳೆ, ಮಹಾದೇವ ಮಾದರ, ಬಸವರಾಜ ಮಾದರ, ಅಶೋಕ ಚೌಗಲಾ, ಮಂಜುನಾಥ ಪಟ್ಟಣ, ಸಂಜು ಗಸ್ತಿ, ಅಲಿಯಾ ಸನದಿ, ಲಕ್ಕಪ್ಪ ಕಾಂಬಳೆ, ಮುತ್ತುರಾಜ ಹರಿಜನ, ಅಜಯ ಮರಡಿ, ಮಹೇಶ ಮರಡಿ, ಬೀರಪ್ಪ ಕಾಂಬಳೆ, ರವಿ ಸಿಂಗೆ, ಶಂಕರ ಕಾಂಬಳೆ ಸೇರಿದಂತೆ ಸಂಘಟನೆಯ ಹಲವು ಮುಖಮಡರು ಭಾಗವಹಿಸಿದ್ದರು.

