ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸರಕಾರಿ ಐಟಿಐ ಸಂಸ್ಥೆಯಲ್ಲಿ ೨೦೨೬ನೇ ಸಾಲಿನ ಪ್ರತಿಷ್ಠಿತ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್ಸೆಸ್ಸೆಲ್ಸಿ ಫೇಲಾದ ಅರ್ಹ ಅಭ್ಯರ್ಥಿಗಳಿಗೆ ಎನ್ ಸಿವಿಟಿ ನವದೆಹಲಿಯಿಂದ ಸಂಯೋಜನೆಯಾದ ಎರಡು ಹೊಸದಾಗಿ ಟಾಟಾ ಉದ್ಯೋಗದಡಿ ಪ್ರಾರಂಭ ಮಾಡಲಾಗುವ ಪ್ರತಿಷ್ಟಿತ ಕೊರ್ಸಗಳ ಪ್ರವೇಶಕ್ಕಾಗಿ ಆಫ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಖುದ್ದಾಗಿ ಕಾಲೇಜಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ವಿಶೇಷವಾಗಿ ಪ್ರಸ್ತುತ ಸಾಲಿನಿಂದ ಉಚಿತವಾಗಿ ಪ್ರವೇಶ ಒದಗಿಸಲಾಗುವುದು ಎಂದು ಪ್ರಭಾರಿ ಪ್ರಾಚಾರ್ಯ ಪೂಜಪ್ಪ ಪೂಜಾರಿ ತಿಳಿಸಿದ್ದಾರೆ.
ಎರಡು ವರ್ಷ ಅವಧಿಯ ಎಲೆಕ್ಟ್ರೀಸಿಯನ್ ಕೋರ್ಸ್ಗೆ ೨೦ ಸೀಟುಗಳು, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಕೋರ್ಸ್ಗೆ ೪೮ ಸೀಟಿಗಳು, ಟಾಟಾ ಟೆಕ್ನಾಲಾಜಿ ಉದ್ಯೋಗ ಟ್ರೇಡ್ಸ್ ನಲ್ಲಿರುವ ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಮ್ಯಾನ್ಯೂಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಅಟೋಮೇಶನ್, ಇಂಡಸ್ಟ್ರೀಯಲ್ ರೊಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನ್ಯೂಫ್ಯಾಕ್ಚರಿಂಗ್ ಟೆಕ್ನಿಸಿಯನ್, ವರ್ಚುಲ್ ಅನಾಲಿಸಿಸ್ ಮತ್ತು ಡಿಸೈನರ್, ಸಿಎನ್‌ಸಿ ಮಶಿನಿಂಗ್ ಟೆಕ್ನಿಶಿಯನ್, ಎಂಜಿನೀಯರಿಂಗ್ ಡಿಸೈನ್ ಟೆಕ್ನಿಸಿಯನ್ (ಇಡಿಟಿ) ಕೋರ್ಸ್ಗಳ ಸೀಟುಗಳಿವೆ.
ಕೋರ್ಸ್ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಅಂಕ ಪತ್ರ ೧, ಟಿಸಿ ೩, ೧ರಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕ್ಷೇತ್ರ ಶಿಕ್ಷಣಾಧಿಕಾರಿ ದೃಢೀಕರಿಸಿದ ೧ ರಿಂದ ೧೦ನೇ ತರಗತಿಯವರೆಗೆ ಗ್ರಾಮೀಣ ವ್ಯಾಸಂಗ ಹಾಗೂ ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ೪ ಪಾಸ್ ಪೋರ್ಟ್ ಸೈಜ್ ಭಾವಚಿತ್ರಗಳು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ., ಕನಿಷ್ಠ ೫ ವರ್ಷಗಳವರೆಗೆ ಕರ್ನಾಟದಲ್ಲಿ ಅಧ್ಯಯನ ಮಾಡಿದ ವ್ಯಾಸಂಗ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ವೆಬ್ ಸೈಟ್: ತಿತಿತಿ.ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ. ಹೆಚ್ಚಿನ ಮಾಹಿತಿಗಾಗಿ ನಾಲತವಾಡ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆಗಳು:೯೯೮೬೧೨೩೮೯೩, ೯೦೦೮೬೯೨೨೭೮, ೯೯೦೨೮೩೫೬೨೬, ೯೯೮೦೨೩೦೭೧೦, ೮೯೦೪೧೭೧೨೬೧ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
