Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್

ಹಸಿವು ನೀಗಿಸುವ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ :ಆಪ್ಟೆ

ಬಡವರನ್ನು ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ :ನ್ಯಾ.ಕಾಂಬಳೆ ಆಕ್ರೋಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಡವರನ್ನು ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ :ನ್ಯಾ.ಕಾಂಬಳೆ ಆಕ್ರೋಶ
(ರಾಜ್ಯ ) ಜಿಲ್ಲೆ

ಬಡವರನ್ನು ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ :ನ್ಯಾ.ಕಾಂಬಳೆ ಆಕ್ರೋಶ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶಿರಹಟ್ಟಿ ಯುಕೆಪಿ ಪುನರ್ವಸತಿ ಕೇಂದ್ರದ ಸ್ಥಳದಲ್ಲಿ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ನೋಟಿಸ್ ನೀಡದೆ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ಕ್ರಮಕ್ಕೆ ವಿರೋಧ | ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಉದಯರಶ್ಮಿ ದಿನಪತ್ರಿಕೆ

ಅಥಣಿ: ತಾಲೂಕಿ ಶಿರಹಟ್ಟಿ ಗ್ರಾಮದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ಸ್ವಾಧೀನದಲ್ಲಿರುವ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ಶಿರಹಟ್ಟಿ ಗ್ರಾಮಸ್ಥರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಬಹುಜನ ಸಮಾಜ ಪಕ್ಷಕ ಬೆಳಗಾವಿ ವಲಯ ಉಸ್ತುವಾರಿ ಹಾಗೂ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಮಾತನಾಡಿ, ಆರ್, ಸಿ, ನಂ.1 ರ ನಿವಾಸಿಗಳು ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಮನೆ ಕಟ್ಟಿಕೊಂಡು ಮಕ್ಕಳನ್ನು ಬೆಳೆಸಿ ಮತದಾರರ ಪಟ್ಟಿ ರೇಷನ್ ಕಾರ್ಡ್ ವಿದ್ಯುತ್ ಬಿಲ್ ಎಲ್ಲವನ್ನೂ ಇಲ್ಲಿಯೇ ಹೊಂದಿದ್ದಾರೆ. ಇಷ್ಟೆಲ್ಲ ದಾಖಲೆಗಳಿದ್ದರೂ ಗುರುವಾರ ಮಧ್ಯಾಹ್ನ 1 ಗಂಟೆಗೆ ಅಧಿಕಾರಿಗಳು ಏಕಾಏಕಿ ಬಂದು ಯಾವುದೇ ಪೂರ್ವ ನೋಟಿಸ್ ನೀಡದೆ ಕಾನೂನು ಪ್ರಕ್ರಿಯೆ ಅನುಸರಿಸದೆ ಜಾಗ ಖಾಲಿ ಮಾಡಿ, ಖಾಲಿ ಮಾಡದಿದ್ದರೆ ಲಾಠಿ ಚಾರ್ಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕುವುದು ಕಾನೂನು ಬಾಹಿರ, ಮಾನವೀಯತೆಗೆ ವಿರುದ್ಧವಾದ ನಡೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹೆಸರಿನಲ್ಲಿ ಬಡವರನ್ನು ಮತ್ತೆ ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ ಇದಾಗಿದೆ. 500ಕ್ಕೂ ಹೆಚ್ಚು ಕುಟುಂಬಗಳು, ಮಹಿಳೆಯರು, ಮಕ್ಕಳು, ವೃದ್ಧರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಎಷ್ಟೋ ಸಲ ಸ್ಥಳಿಯ ಶಾಸಕರಿಗೂ ಹಾಗೂ ಜನ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಅಮಾನವೀಯ ತೆರವು ಕಾರ್ಯಾಚರಣೆ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟದ ಜೊತೆಗೆ ಉಗ್ರ ಪ್ರತಿಭಟನೆಗೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಥಣಿ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಗೀತಾ ಕಾಂಬಳೆ, ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ ಕಾಂಬಳೆ, ರಾಜು ಕಾಂಬಳೆ, ಮಹಾವೀರ ಕಾಂಬಳೆ, ಮುರುಗೇಶ ಅಥಣಿ ಸೇರಿದಂತೆ ಶಿರಹಟ್ಟಿ ಗ್ರಾಮದ ನಿವಾಸಿಗಳು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್

ಹಸಿವು ನೀಗಿಸುವ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ :ಆಪ್ಟೆ

ನಮ್ಮ ಮಕ್ಕಳ ಆಹಾರ ಹೀಗಿರಲಿ

ದೇಶದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್
    In ವಿಶೇಷ ಲೇಖನ
  • ಹಸಿವು ನೀಗಿಸುವ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ :ಆಪ್ಟೆ
    In (ರಾಜ್ಯ ) ಜಿಲ್ಲೆ
  • ಬಡವರನ್ನು ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ :ನ್ಯಾ.ಕಾಂಬಳೆ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ನಮ್ಮ ಮಕ್ಕಳ ಆಹಾರ ಹೀಗಿರಲಿ
    In ವಿಶೇಷ ಲೇಖನ
  • ದೇಶದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು
    In (ರಾಜ್ಯ ) ಜಿಲ್ಲೆ
  • ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಅರ್ಥಪೂರ್ಣ ಆಚರಣೆ
    In (ರಾಜ್ಯ ) ಜಿಲ್ಲೆ
  • ಶಿಕ್ಷಣದಿಂದ ವಂಚಿತರಾಗುವ ಅವಕಾಶ ಕಳೆದುಕೊಳ್ಳದಿರಿ :ಉಟಗಿ
    In (ರಾಜ್ಯ ) ಜಿಲ್ಲೆ
  • ಡಾ.ಆನಂದ ಅಂಬಲಿ ಅವರ ಆರೋಗ್ಯ ಸಂಬಂಧಿ ಕೃತಿ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಬಾಲ ಕಾರ್ಮಿಕ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ವಸತಿ ನಿಲಯ: ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.