Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘದ ಜಿಲ್ಲಾ ಆದ್ಯಕ್ಷರಾಗಿ ಪೀರಗೊಂಡ ಮಲಕಪ್ಪ ಗದ್ಯಾಳ (ಮೂರನೇ ಬಾರಿ) ಹಾಗೂ ಉಪಾಧ್ಯಕ್ಷರಾಗಿ ಮಲ್ಲಪ್ಪ ರಾಮಣ್ಣಾ ತುಂಗಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತ ಮಂಡಳಿ ನಿರ್ದೇಶಕರಾಗಿ ಸುರೇಶ ಬಿರಾದಾರ, ಮಲ್ಲಪ್ಪ ಬಂಡಿ, ಪ್ರಕಾಶ ಚಿನಗುಂಡಿ, ಮಹಾವೀರ ಕುಸನಾಳ, ಇಂದಿರಾಬಾಯಿ ಪಾಟೀಲ, ಶಾಂತಾಬಾಯಿ ಹಿರೇಮಠ, ಭೀಮರಾಯ ಹಂಗರಗಿ, ಯಲ್ಲಪ್ಪ ಹೊನಕಟ್ಟಿ, ಸಂಜಯ ಬಸನಗೌಡ ಪಾಟೀಲ, ವಿಠ್ಠಲ ಪೂಜಾರಿ, ಚನ್ನಪ್ಪ ದಯಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಆರ್.ಎನ್.ಆಳೂರ ಪ್ರಕಟಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಯಾಣಿಕರ ಬೇಡಿಕೆಯಂತೆ, ವಿಜಯಪುರ-ಬೆಂಗಳೂರ ಮಾರ್ಗದ ಕಲ್ಯಾಣ ರಥ ವೊಲ್ಲೋ ಮಲ್ಟಿ ಎಕ್ಸಲ್ ಎಸಿ ಸ್ಲಿಪರ್ ಬಸ್ ಪ್ರಯಾಣ ದರದಲ್ಲಿ ರೂ.100 ಅಂದರೆ, ಶೇ 6% ರಷ್ಟು ರಿಯಾಯಿತಿ ನೀಡಲಾಗಿದೆ.ವಿಜಯಪುರ-ಬೆಂಗಳೂರ ಕಲ್ಯಾಣ ರಥ ಬಸ್ಸಿನ ದರ ರೂ. 1,399 ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ಈ ರಿಯಾಯತಿ ದರದ ಉಪಯೋಗ ಪಡೆದುಕೊಳ್ಳುವಂತೆಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

Read More

ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು | ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಂಡನೆ ಬೆಳಗಾವಿ: ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.ಈ ಮಸೂದೆಯು ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡುತ್ತದೆ.ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಮಂಡಿಸಿದ್ದು, ಅದರಲ್ಲಿ 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಿದ್ದಾರೆ.ಮಸೂದೆಯಲ್ಲಿ ಯಾವುದೇ ವ್ಯಕ್ತಿ, ಕುಟುಂಬದೊಂದಿಗೆ ವ್ಯವಹರಿಸಲು ನಿರಾಕರಿಸುವುದು, ಅವರ ಕೆಲಸ ಮಾಡಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು; ಸೇವೆಗಳನ್ನು ನಿರಾಕರಿಸಿದರೆ ಜೈಲು ಶಿಕ್ಷ ಗ್ಯಾರಂಟಿ ಎಂದು ಹೇಳಲಾಗಿದೆ.ರಾಜ್ಯದ ವಿವಿಧ ಸಮುದಾಯಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದು, ಜಾತಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೬ನೇ ತರಗತಿ ಪ್ರವೇಶಕ್ಕಾಗಿ ಡಿ.೧೩. ಶನಿವಾರದಂದು ಬೆಳಿಗ್ಗೆ ೧೧ ರಿಂದ ೧:೩೦ಗಂಟೆಯವರೆಗೆ ಜರುಗುವ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯು ಸಿಂದಗಿ ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಜಿ.ಪಿ.ಪೋರವಾಲ ಕಾಲೇಜು, ಹೆಚ್.ಜಿ ಪದವಿ ಪೂರ್ವ ಕಾಲೇಜ್, ಸಿ.ಎಮ್.ಮನಗೂಳಿ ಪದವಿ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಅಂಜುಮನ್ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಲೈಟ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನಭಾರತಿ ಪ್ರೌಢ ಶಾಲೆ, ಶ್ರೀ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಸೇರಿದಂತೆ ೧೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ತಿಳಸಿದ್ದಾರೆ.ಈ ಪರೀಕ್ಷೆಗೆ ಒಟ್ಟು ೩೦೪೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರ ಹಾಗೂ ತಮ್ಮ ಆಧಾರ ಕಾರ್ಡಿನೊಂದಿಗೆ ಬೆಳಿಗ್ಗೆ ೧೦ಗಂಟೆಗೆ ಹಾಜರಿರಬೇಕು ಎಂದು ಪರೀಕ್ಷೆಯ ನೋಡಲ್ ಅಧಿಕಾರಿಂ ಎಸ್.ಎಂ.ಕಪನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವನಿಗೆ ಆಕಸ್ಮಿಕ ಸಮಯದಲ್ಲಿ ತುರ್ತಾಗಿ ಅವಶ್ಯವಾಗಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ ಎಂದು ಯಂಕಂಚಿ ಶ್ರೀಮಠ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ಸಿಂದಗಿ ಮತಕ್ಷೇತ್ರದ ಮಂಗಳೂರು ಗ್ರಾಮದಲ್ಲಿ ಸಮರ್ಥ ಸದ್ಗುರು ಶ್ರೀ ಭೀಮಾಶಂಕರ ಮಹಾರಾಜರ ೭೧ನೇ ಜಾತ್ರಾ ಮಹೋತ್ಸವದ ನಿಮಿತ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ಮಾತನಾಡಿದ ಅವರು, ಸಾಮಾಜದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು. ರಕ್ತದಾನ ಮಾಡಿದರೆ ತಮ್ಮ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೊಸ ರಕ್ತ ಉತ್ಪತ್ತಿಯಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರ, ಬಮ್ಮನಹಳ್ಳಿ ಶ್ರೀಮಠದ ಶ್ರೀ ಸದ್ಗುರು ನರಸಿಂಹ ಮಹಾರಾಜರು, ಐನಾಪುರ ಶ್ರೀಮಠದ ಉಪಮನ್ಯು ಶಿವಾಚಾರ್ಯರ ಸಮ್ಮುಖದಲ್ಲಿ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಸಿಂದಗಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ ನೂಲಾನವರ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಸಿದ್ದಣ್ಣ ಕಡಗಂಚಿ ಅವರಿಗೆ ಯಂಕಂಚಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಶ್ರೀನಿವಾಸ್ ನಂದಶೆಟ್ಟಿ ಇತನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಜರುಗಿದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಆಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂದು ನಮ್ಮ ದೇಶದ ಹಳ್ಳಿಗಳಲ್ಲಿ ಮಾತ್ರ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯ ಉಳಿದಿವೆ. ಅದನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಚೌಡಾಪುರ ಮಹಾಂತೇಶ ಮಠದ ವೀರ ಮಹಾಂತ ಶ್ರೀಗಳು ಹೇಳಿದರು.ಪಟ್ಟಣದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗಿಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯ ಹೊಸ್ತಿಲ ಪೂಜಾ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡಿದರು.ದೇಶದ ಪ್ರತಿ ಹಳ್ಳಿಯಲ್ಲೂ ಕನಿಷ್ಠ ೧೦ ರಿಂದ ೨೦ ದೇವಸ್ಥಾನಗಳು ಸಿಗುತ್ತವೆ. ಅದಕ್ಕೆ ಅವರದೇ ಆದ ಸಂಪ್ರದಾಯ ಮತ್ತು ಆಚರಣೆ ನಡೆಯುತ್ತಿರುತ್ತವೆ. ಆ ದೇವಸ್ಥಾನಗಳಿಗೆ ಉತ್ಸವ ಜಾತ್ರೆಗಳು ಸಹ ನಡೆಯುತ್ತವೆ. ಅದಕ್ಕೆಲ್ಲ ಅಪಾರ ಜನಸ್ತೋಮ ಸೇರುವದು. ದೇವರು ಧರ್ಮ ಸಂಪ್ರದಾಯದ ಮೇಲೆ ಇರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.ಮಡಿವಾಳೇಶ್ವರ ಶ್ರೀಗಳು ಮಾತನಾಡಿ ದೇವರು ಹಲವು ದೈವತ್ವ ಒಂದೇ, ನಾಮಗಳು ಹಲವು ಅದರ ಹಿಂದೆ ಇರುವ ಭಕ್ತಿ ಒಂದೇ. ನಮ್ಮದೇ ಆದ ಸಂಸ್ಕೃತಿ ಸಂಪ್ರದಾಯ ಎಲ್ಲವೂ ನಮ್ಮವೇ,ನಾವೆಲ್ಲರೂ ಆಸ್ತಿಕರಾಗಿ ಬದುಕಬೇಕು ಎಂದರು.ಬಿಜೆಪಿ ಧುರೀಣ ಸುರೇಶ ಬಿರಾದಾರ ಮಾತನಾಡಿ…

Read More

ಕಾರ್ಯನಿರತ ಪತ್ರಕರ್ತರ ಸಂಘ ತಾಳಿಕೋಟಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಗಳ ನೇಮಕ ಮಾಡಲಾಯಿತು.ತಾಳಿಕೋಟಿ ಪ್ರವಾಸಿ ಮಂದಿರದಲ್ಲಿ ನಡೆದ ತಾಳಿಕೋಟಿ ತಾಲೂಕಿನ ೨೦೨೫-೨೮ರ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಚುನಾವಣಾಧಿಕಾರಿಯಾಗಿ ಉಸ್ತುವಾರಿಗಳಾಗಿ ಆಗಮಿಸಿದ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮತ್ತು ಜಿಲ್ಲಾ ಖಜಾಂಚಿ ರಾಹುಲ ಆಪ್ಟೆ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತಾಳಿಕೋಟಿ ತಾಲೂಕಿನ ಅಧ್ಯಕ್ಷರನ್ನಾಗಿ ಉದಯವಾಣಿ ವರದಿಗಾರ ಮೈಬೂಬಸುಬಾನಿ ಸಿರಸಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಶಿವಾನಂದ ಎಮ್. ಸಜ್ಜನ ಮತ್ತು ಉಪಾಧ್ಯಕ್ಷರಾಗಿ ಸಂಜಯಸಿಂಗ್ ರಜಪೂತ, ಕಾರ್ಯದರ್ಶಿಯಾಗಿ ಯಲಗೂರಪ್ಪ ವಡವಡಗಿ ಹಾಗೂ ಖಜಾಂಚಿಯಾಗಿ ಸಂತೋಷ ಶಹಾಪೂರ ಅವರನ್ನು ಎಲ್ಲ ಕಾನಿಪ ಸದಸ್ಯರ ಸಹಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಈ ವೇಳೆ ಕಾನಿಪ ಸದಸ್ಯರಾದ ಶ್ರೀಶೈಲ ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ೨೦೦೦-೨೦೦೭ ರವರೆಗೆ ಇಲ್ಲಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಆರನೇ ವರ್ಗದಿಂದ ಪಿಯುಸಿ ವರೆಗೆ ಕಲಿತಿದ ವಿದ್ಯಾರ್ಥಿಗಳು ಪ್ರವೇಶ ಪಡೆದು ೨೫ ವರ್ಷದ ಸ್ಮರಣೆಗಾಗಿ ಎಲ್ಲಾ ಹಳೆ ವಿದ್ಯಾರ್ಥಿಗಳು “ಸ್ನೇಹಯಾನ ೨ಕೆ೨೫’ ಎಂಬ ಬೆಳ್ಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.ಭಾನುವಾರ ನಡೆದ ಈ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ದೇಶದ ನಾನಾ ಕಡೆ ಕಾರ್ಯನಿರ್ವಹಿಸುತ್ತಿರುವ ಆ ಬ್ಯಾಚ್ ನ ೭೦ ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಸೇರಿದ್ದರು.ಈ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರಾಘವನ್ ಕಾವಲನ್, ನಿವೃತ್ತ ಉಪಪ್ರಾಚಾರ್ಯ ಎಸ್.ಆರ್. ಅಂಗಡಿ ಮತ್ತೀತರರು ಮಾತನಾಡಿ ಈಚೆಗೆ ಮನುಷ್ಯನಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗುತ್ತಿದ್ದು, ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿವೆ. ಜಂಜಾಟಮಯದ ಬದುಕಿನಲ್ಲಿ ಯಾರಿಗೂ ಪುರಸೊತ್ತಿಲ್ಲ ಎಲ್ಲರೂ ಒಂದೊಂದು ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಆಧುನಿಕತೆಯ ಸ್ಪರ್ಶದ ಸೋಗಿನಲ್ಲಿ ಯುವಜನತೆ ಮಮತೆ, ಸಹಾನುಭೂತಿ, ದಯೆ, ಕರುಣೆ, ಕನಿಕರ, ಸುವಿಚಾರ, ಸೌಜನ್ಯ ಮಾನವೀಯತೆ ಮರೆಯುತ್ತಲಿದ್ದಾರೆ. ಇಂಥ ವಾತಾರಣದಲ್ಲಿ ೨೫ ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳೆಲ್ಲಾ ಸೇರಿ ಕಲಿಸಿದ ಶಿಕ್ಷಕರನ್ನು ಕರೆಯಿಸಿ ಸನ್ಮಾನಿಸಿದ್ದು…

Read More

ಅಧ್ಯಕ್ಷರಾಗಿ ಮಹಾಂತೇಶ ನೂಲಾನವರ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶೇಖ ಅವಿರೋಧ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಹಾಂತೇಶ ನೂಲಾನವರ, ಉಪಾಧ್ಯಕ್ಷರಾಗಿ ಭೀಮು ಕೆಂಭಾವಿ, ಅಂಬರೀಷ ಸುಣಗಾರ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶೇಖ ಅವಿರೋಧವಾಗಿ ಆಯ್ಕೆಯಾದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾನಿಪ ಸಂಘ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.ಕಳೆದ ತಿಂಗಳು ಜಿಲ್ಲಾ ಘಟಕದ ಕಾನಿಪ ಚುನಾವಣೆ ಜರುಗಿದ ಬಳಿಕ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಲಾಗಿತ್ತು. ಇದರಂತೆ ಡಿ.೧೦ರಂದು ಸಿಂದಗಿ ಘಟಕದ ಕಾನಿಪ ಪತ್ರಕರ್ತರ ಚುನಾವಣೆ ನಿಗದಿಯಾಗಿತ್ತು.ಈ ಚುನಾವಣೆಯಲ್ಲಿ ನೂತನ ಘಟಕದ ಪದಾಧಿಕಾರಿಗಳಾಗಿ ಮಹಾಂತೇಶ ನೂಲಾನವರ (ಅಧ್ಯಕ್ಷ), ಭೀಮರಾಯ ಕೆಂಭಾವಿ, ಅಂಬರೀಷ ಸುಣಗಾರ (ಉಪಾಧ್ಯಕ್ಷ), ಇಸ್ಮಾಯಿಲ್ ಶೇಖ್ (ಪ್ರಧಾನ ಕಾರ್ಯದರ್ಶಿ), ವಿಕಯಕುಮಾರ ಪತ್ತಾರ (ಖಜಾಂಚಿ), ನವೀನ ಶೆಳ್ಳಗಿ (ಕಾರ್ಯದರ್ಶಿ) ಕಾರ್ಯಕಾರಿಯಾಗಿ ಸಿದ್ದಣ್ಣ ಕಡಗಂಚಿ, ರಣಜೀತಸಿಂಗ್ ರಜಪೂತ, ವಿನಯಕುಮಾರ ಅಗಸರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ…

Read More