ಉದಯರಶ್ಮಿ ದಿನಪತ್ರಿಕೆ
ಇಂಡಿ: ಗೋಳಸಾರದ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ಇಂಡಿ ನಗರದ ಎಸ್.ಎಸ್. ಪ್ಯಾರಾ ಮೆಡಿಕಲ್ ಕಾಲೇಜು ಆವರಣದಲ್ಲಿ ತಾಲೂಕಾ ಆರೋಗ್ಯ ಇಲಾಖೆ ಹಾಗೂ ಸ್ಪಂದನಾ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷ ಎಸ್.ಬಿ ಕೆಂಬೋಗಿ ತಿಳಿಸಿದರು.
ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಉಚಿತ ಹಲ್ಲಿನ ಸೆಟ್ಟು ಜೋಡಣೆ ( ದಂತಪಂಕ್ತಿ) ಶಿಬಿರ ಆಯೋಜಿಸಿದ್ದು ೪೫ ವರ್ಷ ಮೇಲ್ಪಟ್ಟವರಿಗೆ ಬಿಪಿಎಲ್ ಕಾರ್ಡ್ ಹೊಂದಿದವ ರಿಗೆ ಹಲ್ಲಿನ ಸೆಟ್ ಜೋಡಿಸಲಾಗುವುದು ಎಂದು ತಿಳಿಸಿದರು.
ಅಂದು ಉಚಿತವಾಗಿ ಬಿ.ಪಿ, ಶುಗರದ, ಈಸಿಜಿ ಸೇರಿದಂತೆ ಇನ್ನಿತರ ಆರೋಗ್ಯ ತಪಾಸಣೆ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸ್ಪಂದನಾ ಆಸ್ಪತ್ರೆಯ ಡಾ. ಲಕ್ಷ್ಮೀಕಾಂತ ಮೇತ್ರಿ ಮಾತನಾಡಿ, ಮನುಷ್ಯನಿಗೆ ಎಷ್ಟೇ ದುಡ್ಡು, ಆಸ್ತಿ ಇದ್ದರೂ ಶರೀರ ಆರೋಗ್ಯದಿಂದ ಇರದೆ ಇದ್ದರೆ ಏನಿದ್ದರೂ ವ್ಯರ್ಥ. ಹೀಗಾಗಿ ಪ್ರತಿಯೊಬ್ಬರೂ ಸಹ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ಸಾನಿಧ್ಯವನ್ನು ರೋಡಗಿ ವಿರಕ್ತ ಮಠದ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಕಾರ್ಯಕ್ರಮದ ಉದ್ಘಾಟನೆಯನ್ನು ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿಯವರು, ಕಾರ್ಯಕ್ರಮದ ಜ್ಯೋತಿಯನ್ನು ತಹಸೀಲ್ದಾರ ಬಿಎಸ್ ಕಡಕಬಾವಿ ಅವರು ಬೆಳಗಿಸಲಿದ್ದು, ಅಧ್ಯಕ್ಷತೆಯನ್ನು ಎಸ್.ಎಸ್. ಪ್ಯಾರಾ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಕೆಂಬೋಗಿ ವಹಿಸಿಕೊಳ್ಳಲಿದ್ದಾರೆ. ಫೋಟೋ ಪೂಜೆಯನ್ನು ಇಂಡಿ ಶಹರ ಸಿಪಿಐ ಪ್ರದೀಪ ಭಿಸೆ, ವಿಶೇಷ ಆಹ್ವಾನಿತರಾಗಿ ತಾಲೂಕ ಆರೋಗ್ಯ ಅಧಿಕಾರಿ ಡಾ. ಆರ್.ಟಿ. ಕೋಳೆಕರ, ಮುಖ್ಯ ಅತಿಥಿಗಳಾಗಿ ಸ್ಪಂದನ ಆಸ್ಪತ್ರೆಯ ಡಾ. ಲಕ್ಷ್ಮಿಕಾಂತ ಮೇತ್ರಿ, ಡಾ. ಕೆ.ಎಸ್. ಜಾದವ, ಡಾ. ಪ್ರಶಾಂತ ಧೂಮಗೊಂಡ, ಡಾ. ರವಿ ಭತಗುಣಕಿ, ಹಿರಿಯ ಪತ್ರಕರ್ತ ಎ.ಸಿ. ಪಾಟೀಲ, ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

