ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು ಇರುವುದು ಖಚಿತ. ಅದರಲ್ಲಿ ೩೩ ಜನರನ್ನು ನಾವೇ ಪೋಲಿಸರಿಗೆ ಒಪ್ಪಿಸಿದ್ದೇವೆ ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಆಕ್ರೋಶದ ಮಾತುಗಳನ್ನಾಡಿದರು.
ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಝಾದ್ ಯುವ ವೇದಿಕೆಯ ವತಿಯಿಂದ ಹಮ್ಮಿಕೊಂಡ ಧರ್ಮಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಹಿಂದೂಗಳು ಜಾಗೃತಗೊಳ್ಳದಿದ್ದರೆ ೨೦೪೭ರ ಹೊತ್ತಿಗೆ ಭಾರತ ಇಸ್ಲಾಮ್ ರಾಷ್ಟçವಾಗುತ್ತದೆ. ಜಗತ್ತಿನಲ್ಲಿ ೧೫೦೦ ಭಯೋತ್ಪಾದಕ ಇಸ್ಲಾಮ್ ಸಂಘಟನೆಗಳಿವೆ ಅವುಗಳ ಮೂಲ ಉದ್ದೇಶ ಸನಾತನ ರಾಷ್ಟçದ ಮೇಲೆ ಯುದ್ದ ಸಾರುವುದು ಇದಕ್ಕೆ ಪಾಕಿಸ್ತಾನ, ಚೈನಾ ಹಾಗೂ ಅಮೇರಿಕಾದಂತಹ ದೇಶಗಳ ಕುಮ್ಮಕಿದೆ. ಕಾರಣ ನಾವೆಲ್ಲಾ ಜಾತಿ-ಮತ-ಪಂಥ ಮರೆತು ಒಗ್ಗಟ್ಟಾಗಿ ರಾಷ್ಟಾçಭಿಮಾನದ ಜತೆಗೆ ಧರ್ಮವನ್ನು ರಕ್ಷಣೆ ಮಾಡಬೇಕಿದೆ ಎಂದರು.
ನಮ್ಮ ರಾಷ್ಟ್ರ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ನಮ್ಮ ಧರ್ಮದಲ್ಲಿ ನಾರಿಯರ ಪಾತ್ರ ದೊಡ್ಡದ್ದು ರಾಣಿ ಚನ್ನಮ್ಮ, ಜೀಜಾಬಾಯಿಯಂತೆ ದಿಟ್ಟ ಮಹಿಳೆಯರಾಗಿ ಲವ್ ಜಿಹಾದ್‌ನ್ನು ಮೆಟ್ಟಿ ನಿಲ್ಲಬೇಕು ವಿದೇಶಿ ಸಂಸ್ಕೃತಿಯನ್ನು ದಿಕ್ಕರಿಸಿ ಧರ್ಮ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಚುನಾವಣೆ ಹೆಸರಲ್ಲಿ ನಕಲಿ ಹಿಂದುತ್ವದ ಮುಖವಾಡ ಹಾಕಿ ಬರುವ ರಾಜಕಾರಣಿಗಳನ್ನು ನಂಬಬೇಡಿ ಧರ್ಮ ರಕ್ಷಣೆಗೆ ನಿಲ್ಲುವ ಪಕ್ಷಕ್ಕೆ ನನ್ನ ಮತ ಎಂದು ಸಂಕಲ್ಪ ಮಾಡಿ ಎಂದರು.
ಈ ವೇಳೆ ಹಿಂದೂ ಜಾಗೃತಿ ವೇದಿಕೆ ಸಮನ್ವಯಕ ಯಮನಪ್ಪ ಭಜಂತ್ರಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಬ್ರಿಟಿಷರಿಂದ ನಮ್ಮ ದೇಶ ಧರ್ಮ ಶಿಕ್ಷಣದಿಂದ ವಂಚಿತವಾಗಿದೆ. ಗತಕಾಲದಲ್ಲಿ ಗುರುಕುಲ ಶಿಕ್ಷಣದ ಬೇರು ಗಟ್ಟಿಯಾಗಿತ್ತು. ಪರಂಗಿಗಳ ದಾಸ್ಯದಿಂದ ಮುಕ್ತಿ ಸಿಕ್ಕರೂ ಅವರು ಬಿಟ್ಟು ಹೋದ ಸಂಸೃತಿ ಧರ್ಮ ಶಿಕ್ಷಣಕ್ಕೆ ಎರವಲಾಗಿದೆ. ಈಗ ನಮ್ಮ ಎಲ್ಲಾ ಪೀಳಿಗೆಗೆ ಸನಾತನ ಸಂಸೃತಿ ಸಂಸ್ಕಾರದ ಅಗತ್ಯವಿದೆ. ಹಿಂದೂ ಧರ್ಮಕ್ಕೆ ಯಾವುದೇ ಸೃಷ್ಟಿ, ಸ್ಥಿತಿ, ಲಯ ಮೂಲವಿಲ್ಲ ಆದಿ ಅಂತ್ಯವಿಲ್ಲ ಯಾರೊಬ್ಬ ಸೃಷ್ಠಿಕರ್ತನಿಲ್ಲ ಇಂತಹ ಧರ್ಮದಲ್ಲಿ ಹುಟ್ಟಿದ ಪ್ರತಿ ಹಿಂದೂ ಧರ್ಮ ಶಿಕ್ಷಣ ಪಡೆದು ಕೃತಿಶಾಸ್ತç ಮಾಡಬೇಕು. ಎಂದು ಹಿಂದೂ ಧರ್ಮದ ಪಾಲನೆ ಹಾಗೂ ಆಚರಣೆ ಕುರಿತಾದ ಮಹತ್ವಗಳನ್ನು ತಿಳಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ಡಾ.ಅನೀಲ ನಾಯಕ್ ಮಾತನಾಡಿದರು. ಯಂಕAಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆರ್ಶೀವಚನ ನೀಡಿದರು. ಅಶೋಕ ಅಲ್ಲಾಪೂರ, ನಂದು ಗಡಗಿ, ಸಿದ್ದಣ್ಣ ಬೀರಗೊಂಡ, ಅಶೋಕ ನೆಗಿನಾಳ, ವಿನೋದ ಬಡಿಗೇರ, ಶಂಕ್ರಯ್ಯ ಹಿರೇಮಠ, ಪ್ರಕಾಶ ಅಲ್ಲಾಪೂರ, ಅಭಿಷೇಕ ಕಲಶೆಟ್ಡಿ ಸೇರಿದಂತೆ ಹಲವರಿದ್ದರು.
