ಉದಯರಶ್ಮಿ ದಿನಪತ್ರಿಕೆ
ವಿಜಯಪುರ : ಅದಾನಿ ಸಂಸ್ಥೆಯ ಭಾಗವಾಗಿರುವ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಪರಿಹಾರ ಒದಗಿಸುವ ಕಂಪನಿಯಾದ ಎಸಿಸಿ, ಗುತ್ತಿಗೆದಾರರಿಗೆ ತಾಂತ್ರಿಕ ಪರಿಣತಿ, ವಿನೂತನ ಸೇವೆಗಳು ಮತ್ತು ನಿರಂತರ ಸೈಟ್ ಸಮಾಲೋಚನಾ ಮಾರ್ಗದರ್ಶನ ಒದಗಿಸುವ ಮೂಲಕ ಕರ್ನಾಟಕದಾದ್ಯಂತ ಇರುವ ಗುತ್ತಿಗೆದಾರರ ಜೊತೆಗಿನ ಸಂಬಂಧವನ್ನು ಬಲಪಡಿಸಿಕೊಳ್ಳುತ್ತಿದೆ. ವಿಜಯಪುರದಲ್ಲಿ, ನಿರ್ಮಾಣ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಗುತ್ತಿಗೆದಾರ ಮಹೇಶ್ ಬಿರಾದಾರ್ ಅವರು, ಎಸಿಸಿಯೊಂದಿಗೆ ಕೈಜೋಡಿಸಿದ ನಂತರ ಲಭಿಸಿದ ಪ್ರಯೋಜನಗಳ ಕಾರಣದಿಂದ ತಮ್ಮ ಕೆಲಸದ ವಿಧಾನಗಳನ್ನು ಹೊಸ ರೂಪಕ್ಕೆ ತಂದಿದ್ದಾರೆ.
ಹಲವು ವರ್ಷಗಳಿಂದ ಮಹೇಶ್ ಅವರು ಒಂದೇ ಸಿಮೆಂಟ್ ಬ್ರ್ಯಾಂಡ್ ಅನ್ನು ಅವಲಂಬಿಸಿದ್ದರು ಮತ್ತು ಅದು ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಈ ಸಮಯದಲ್ಲಿ, ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಎಸಿಸಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಮುಂದಾಯಿತು. ಎಸಿಸಿ ತಂಡವು ಅವರಿಗೆ ಐಎಂಪಿ (ಇನ್ ಸ್ಟಾಂಟ್ ಮಿಕ್ಸ್ ಪ್ರೊಪೋರ್ಷನ್), ಎಸಿಟಿ (ಎಸಿಸಿ ಸರ್ಟಿಫೈಡ್ ಟೆಕ್ನಾಲಜಿ) ಮತ್ತು ‘ನೀವ್ ಅಭಿಯಾನ್’ ಕಾರ್ಯಾಗಾರಗಳಂತಹ ಹಲವು ಸೇವೆಗಳನ್ನು ಪರಿಚಯಿಸಿತು. ಇದರೊಂದಿಗೆ ‘ರಿವಾರ್ಡ್ ಕನೆಕ್ಟ್’ ಲಾಯಲ್ಟಿ ಪ್ರೋಗ್ರಾಂ ಮತ್ತು ಅದರ ವಿಮೆ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಿತು. ಕಾಲಕ್ರಮೇಣ ಇವೆಲ್ಲಾ ಯೋಜನೆಗಳು ಪರಿಣಾಮ ಬೀರಲು ಆರಂಭಿಸಿದ್ದು, ಸ್ಲ್ಯಾಬ್ ಗಳ ಫಿನಿಶಿಂಗ್, ಸಿಮೆಂಟ್ ಸೆಟ್ ಆಗುವ ನಿಖರ ಸಮಯ ಮತ್ತು ನಿರ್ಮಾಣದ ಗುಣಮಟ್ಟದಲ್ಲಿ ಆದ ಒಟ್ಟಾರೆ ಸುಧಾರಣೆಯನ್ನು ಮಹೇಶ್ ಗಮನಿಸಲು ಪ್ರಾರಂಭಿಸಿದರು. ಅವರ ಗ್ರಾಹಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಈ ಫಲಿತಾಂಶಗಳಿಂದ ಉತ್ತೇಜಿತರಾದ ಅವರು, ಒಂದು ಸಣ್ಣ ಯೋಜನೆಯಲ್ಲಿ ಎಸಿಸಿಯ ‘ಕಾಂಕ್ರೀಟ್ ಪ್ಲಸ್’ ಅನ್ನು ಬಳಸಿದರು ಮತ್ತು ಅದು ಅದ್ಭುತ ಯಶಸ್ಸನ್ನು ಒದಗಿಸಿದ್ದರಿಂದ ಸಂತೋಷಗೊಂಡರು.
ಇಂದು, ಅವರು ತಮ್ಮ ಎಲ್ಲಾ ಯೋಜನೆಗಳಿಗೆ ಕಾಂಕ್ರೀಟ್ ಪ್ಲಸ್ ಅನ್ನು ಮಾತ್ರ ಬಳಸುತ್ತಿದ್ದಾರೆ ಮತ್ತು ಕಳೆದ ನಾಲ್ಕು ವರ್ಷಗಳಿಂದ ಎಸಿಸಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅಂದಿನಿಂದ ಅವರು 110 ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ 18 ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ತಂಡದಲ್ಲಿ 40 ಅನುಭವಿ ಮೇಸ್ತ್ರಿಗಳು ಮತ್ತು ಕಾರ್ಮಿಕರಿದ್ದಾರೆ. ಅವರು ಹಲವಾರು ಐಎಂಪಿ ಮತ್ತು ಎಸಿಟಿ ಸೇವೆಗಳ ಪ್ರಯೋಜನ ಪಡೆದಿದ್ದಾರೆ ಹಾಗೂ ಎಸಿಸಿ ಎಂಜಿನಿಯರ್ ಗಳು ಅವರ ಎಲ್ಲಾ ಯೋಜನೆಗಳಲ್ಲಿ ತಾಂತ್ರಿಕ ಬೆಂಬಲವನ್ನು ನೀಡುತ್ತಿದ್ದಾರೆ. ಮಹೇಶ್ ಬಿರಾದಾರ್ ಅವರಿಗೆ ಎಸಿಸಿ ಕೇವಲ ಉತ್ಪನ್ನ ಸರಬರಾಜುದಾರ ಮಾತ್ರವೇ ಆಗಿ ಉಳಿದಿಲ್ಲ, ಬದಲಿಗೆ ಗುಣಮಟ್ಟದ ನಿರ್ಮಾಣ ಕಾರ್ಯ ಮಾಡುವಲ್ಲಿ ಮತ್ತು ಭದ್ರವಾದ ಭವಿಷ್ಯವನ್ನು ನಿರ್ಮಿಸುವಲ್ಲಿ ಒಬ್ಬ ವಿಶ್ವಾಸಾರ್ಹ ಪಾಲುದಾರನಾಗಿದೆ.
