ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯೋಗವು ಭಾರತೀಯ ಪಾರಂಪರಿಕವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮೀಕ ಅಭ್ಯಾಸವಾಗಿದೆ ಎಂದು ಯೋಗಪಟು ಪಂಚಾಕ್ಷರಿ ಮಿಂಚನಾಳ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಶ್ವ ಯೋಗಾ ದಿನಾಚರಣೆಯ ಅಂಗವಾಗಿ ಭಾನುವಾರ ಸಾಮೂಹಿಕ ಯೋಗಾಭ್ಯಾಸದ ಮಾಹಿತಿ ಹಾಗೂ ತರಬೇತಿ ನೀಡಿ ಮಾತನಾಡಿದರು. ಯೋಗವನ್ನು ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಿಂದ ಅಳವಡಿಸಿಕೊಂಡು ಮುಂದುವರೆಸಿದ್ದೇಯಾದರೆ ಸದೃಡ ಶರೀರದೊಂದಿಗೆ ಸದೃಡ ಮನಸ್ಸನ್ನು ಹೊಂದಿ ಭವ್ಯ ಭವಿಷ್ಯದ ರೂವಾರಿಗಳಾಗಿವುದರಲ್ಲಿ ಸಂದೇಹವಿಲ್ಲ. ಯೋಗ ಆರೋಗ್ಯಕರ ಜೀವನಕ್ಕೆ ಬುನಾದಿ ಒದಗಿಸುತ್ತದೆ ಆದ್ದರಿಂದ ಯೋಗವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೇ ಜೀವಿತದ ಅವಧಿಯವರೆಗೂ ಪಾಲಿಸಬೇಕೆಂದು ಕರೆ ನೀಡಿದರು.
ನಂತರ ತಾಡಾಸನ, ಬಸ್ತಿಕಾ ಪ್ರಾಣಾಯಾಮ, ಅನುಲೋಮ ವಿಲೋಮ, ಬ್ರಾಮರಿ, ವೃಕ್ಷಾಸನ, ಶಾಂತಿಮಂತ್ರ, ಧ್ಯಾನ ಸೇರಿದಂತೆ ಯೋಗದ ವಿವಿಧ ಆಸನಗಳ ತರಬೇತಿ ನೀಡಿದರು.
ಸಂಸ್ಥೆಯ ಮುಖ್ಯಸ್ಥ ವ್ಹಿ.ಕೆ.ಪಾಟೀಲ, ಯೋಗ ಉತ್ಸವ ಸಮಿತಿಯ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಆಡಳಿತಾಧಿಕಾರಿ ಕೆ.ಪಿ.ಮಾಲಿಪಾಟೀಲ, ಎಂ.ಆರ್.ಮಠ, ಸಂಗಪ್ಪಣ್ಣ ತಡವಲ್, ನರೇಂದ್ರ ನಾಡಗೌಡ, ಶಾಂತಪ್ಪ ಪಡನೂರ, ಆನಂದ ಜಡಿಮಠ, ರವಿ ಕೋಟಿನ್, ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಐದನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

