Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮೋರಟಗಿ: ರಕ್ತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಮಿಗಿಲು ಎಂದು ಜೇರಟಗಿ ವಿರಕ್ತ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.ಮೋರಟಗಿ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಆವರಣದಲ್ಲಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗೆ ಕೂಡಿ ಆಡಿ ನಲಿದು ಕುಪ್ಪಳಿಸಿ ಸ್ನೇಹದ ಗಟ್ಟಿತನ ಉಳಿಸಿಕೊಂಡು ತಮಗೆ ವಿದ್ಯಾಜ್ಞಾನ ಉಣಬಡಿಸಿದ ಶಿಕ್ಷಕ ವೃಂದಕೆ ಗೌರವ ಸಮರ್ಪಿಸಲು ಸೇರಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಗಮ ನೋಡಲು ಆನಂದ ತಂದಿದೆ ಎಂದ ಅವರು, ಬಾಲ್ಯದ ಆಟ ಪಾಠಗಳನ್ನು ಮೆಲುಕು ಹಾಕಿ ಇಂದು ಬೆಳೆದು ದೊಡ್ಡವರಾಗಿ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಂಡು ಸಮಯದ ಅಭಾವದಲ್ಲಿ ಬಿಡುವು ಮಾಡಿಕೊಂಡು, ಸ್ನೇಹಿತರು ಸೇರಿ ಶಿಕ್ಷಕರಿಗೆ ಗೌರವ ನೀಡುವ ಭಾವ ಮೆಚ್ಚುವಂತದು ಎಂದರು.ನಂತರ ಮಾತನಾಡಿದ ಗ್ರಾಮದ ಹಿರಿಯರಾದ ಎನ್.ಎನ್.ಪಾಟೀಲ, ಈ ಸಂಸ್ಥೆಯಲ್ಲಿ ನಾನು ಕೂಡಾ ಸೇವೆ ಸಲ್ಲಿಸಿರುವೆ. ಹಿಂದಿನ ದಿನ ಮಾನಗಳಲ್ಲಿ ತಾವು ಚಿಕ್ಕ ಪ್ರಾಯದ ವಿದ್ಯಾರ್ಥಿಗಳು ಇಂದು ಬೆಳೆದು ದೊಡ್ಡವರಾಗಿ ಸಮಾಜದ…
ವಿದ್ಯಾರ್ಥಿ ನಿಧಿ ರಾಮಾಪುರವೆಂಬ ಊರಿನ ಮಧ್ಯೆ ಭಾಗದಲ್ಲಿ ವಿಶಾಲವಾಗುವಂತಹ ಮಾವಿನಮರ ಬೆಳೆದಿತ್ತು. ಆ ಮರದ ಕೆಳಗೆ ಆ ಊರಿನ ಗ್ರಾಮಸ್ಥರು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಗುವಂತಹ ಗ್ರಾಮಸ್ಥರು ಮಾರ್ಗಯಾಸ ಪರಿಹಾರ ಮಾಡಿಕೊಳ್ಳಲು ಇದೇ ಮರದ ಕೆಳಗೆ ಕೆಲಕಾಲತಂಗಿ ಮುಂದೆ ಹೋಗುತ್ತಿದ್ದರು. ಹೀಗೆ ಈ ವಿಶಾಲವಾದಂತಹ ಮಾವಿನಮರ ನೂರಾರು ಪಕ್ಷಿಗಳಿಗೆ ಜಾನುವಾರುಗಳಿಗೆ, ಜನರಿಗೆ ಆಶ್ರಯ ತಾಣವಾಗಿ ನಿಂತಿತ್ತು. ಹೀಗಿರಲು ಒಂದು ದಿನ ಆ ಮರದ ಕೆಳಗಿನ ಹುತ್ತದೊಳಗೆ ದೂರದ ಕಾಡಿನಿಂದ ಬಂದಂತಹ ಕರಿನಾಗರ ಆಶ್ರಯ ಪಡೆದಿತ್ತು. ಹೀಗೆ ಸೇರಿಕೊಂಡ ಹಾವು ಆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ ಜನರಿಗೆ ಕಚ್ಚಿ ಉಪಟಳ ಕೊಡುತ್ತಿತ್ತು. ಹೀಗೆ ಕಚ್ಚಿ ಹಲವಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದರು . ಹೀಗಾಗಿ ಮಾವಿನ ಮರದ ಕೆಳಗೆ ಹೋಗಲು ಜನ ಭಯಪಡಬೇಕಾದಂತಹ ವಾತಾವರಣ ನಿರ್ಮಾಣವಾಯಿತು. ಈ ಹಾವಿನ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆ ಮರದ ಹತ್ತಿರ ಬರುವುದನ್ನು ನಿಲ್ಲಿಸಿಬಿಟ್ಟರು.ಕಾಲ ಕಳೆಯುತ್ತಿರಲು ಒಂದು ದಿನ ಆ ಮರದ…
ಆಲಮಟ್ಟಿ: ದಸರೆ ಸುಕ್ಷಣದ ನವೋಲ್ಲಾಸದಲ್ಲಿ ತೇಲಿಸುವಂಥ ಅಪರೂಪದ ಕ್ಷಣದಲ್ಲಿ ನವರಾತ್ರಿ ಹಬ್ಬದ ಒಂಬತ್ತೂ ವಿಶೇಷ ಬಣ್ಣದ ಉಡುಪು ಧರಿಸಿ ಸಂಭ್ರಮ ಹಂಚಿಕೊಳ್ಳುವ ಸುಯೋಗ.ಈ ಅವಿಸ್ಮರಣೀಯ ಭಾವ ಅಭಿವ್ಯಕ್ತಗೊಳಿಸುವಲ್ಲಿ ಇಲ್ಲೊಂದು ಕುಟುಂಬ,ಪರಿವಾರದ ಸರ್ವ ಸದಸ್ಯರು ಏಕತಾಭಾವದಿಂದ ಭಕ್ತಿ ಮೆರೆದು ನವರಾತ್ರಿ ನವೋಲ್ಲಾಸದ ಸವಿಗಂಧದಲ್ಲಿ ಸಂತಸ ನವೀರೋತ್ಸಾಹದಿಂದ ಮೆರೆದರು.ಇಲ್ಲಿನ ಸಂತೋಷ, ಅರುಣಕುಮಾರ ಮರಡಿ ಹಾಗೂ ಶಿವಕುಮಾರ್ ಜೋಳದ ದಂಪತಿ ಕುಟುಂಬ ಪರಿವಾರದಲ್ಲಿ ಈ ಬಾರಿಯ ನವರಾತ್ರಿ ಹಬ್ಬದ ರಮೋತ್ಸವ ಒಂಬತ್ತೂ ದಿನಗಳ ಕಾಲ ನಿತ್ಯ ವಿವಿಧ ಬಣ್ಣದ ವಿಶೇಷ ಉಡುಗೆ,ತೋಡುಗೆ ಮೂಲಕ ದೇವಿ ಭಕ್ತಿ ಪ್ರಸನ್ನೋತ್ಸದಿಂದ ಸಾಂಗವಾಗಿ ನೆರವೇರಿತು. ಒಂಬತ್ತನೇ ದಿನದಂದು ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಮಿನುಗಿದ ದೃಶ್ಯ ವೈಭವ ಹೀಗಿತ್ತು!
ಹೂವಿನ ಹಿಪ್ಪರಗಿ: ಸಮೀಪದ ಕುದರಿ ಸಾಲವಾಡಗಿ ಗ್ರಾಮದಲ್ಲಿ ದಿ. ಸಂಗಮೇಶ ವಂದಾಲ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಟೆನ್ನಿಸ ಬಾಲ ಕ್ರಿಕೆಟ ಪಂದ್ಯಾವಳಿಗೆ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ)ಚಾಲನೆ ನೀಡಿ ಮಾತನಾಡಿದ ಅವರು ಕ್ರಿಕೆಟ್ ಆಟ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಭಾರತದಲ್ಲಿ ಅತಿಹೆಚ್ಚು ಇಷ್ಟಪಟ್ಟು ಆಡುವ ಕ್ರೀಡೆ ಕ್ರಿಕೆಟ ಆಗಿದ್ದು ೨೦೨೩ ರ ಕ್ರಿಕೆಟ್ ವಿಶ್ವಕಪ್ ನ್ನು ನಮ್ಮ ದೇಶದಲ್ಲಿಯೇ ಆಯೋಜನೆ ಮಾಡಲಾಗಿದೆ. ಈ ಬಾರಿಯ ಚಾಂಪಿಯನ್ ಭಾರತ ತಂಡ ಆಗಲಿ ಎಂದು ಆಶಿಸುತ್ತೇನೆ ಎಂದರು.ನಾನು ಕೂಡಾ ಶಾಲಾ ಕಾಲೇಜು ದಿನಗಳಲ್ಲಿ ಲೆದರ ಬಾಲ ಕ್ರಿಕೆಟ ಆಡುತ್ತಿದ್ದೆ ಎಂದು ಕ್ರಿಕೆಟ ಆಟದ ಕ್ಷಣಗಳನ್ನು ನೆನೆದು ಹುಮ್ಮಸಿನಿಂದ ಸಿಕ್ಸರ ಬಾರಿಸಿ ನೆರೆದವರ ಗಮನಸೆಳೆದರು.ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳು ನಮ್ಮೂರಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಮಾಡಿಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ಮೈದಾನ ಮಾಡಿಕೊಡುತ್ತೇನೆ ಎಂದು ಆಟಗಾರರಿಗೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಬಂದೇನವಾಜ ಕತ್ನಳ್ಳಿ, ಮಹಾದೇವಪ್ಪ…
ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ನಮ್ಮೂರಿಗಾಗಿ ನಾವು ಯುವಸೇನಾ ಹಾಗೂ ಯುವ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಸ್ವಚ್ಛತೆ ಕೇವಲ ಗ್ರಾಮ ಪಂಚಾಯತಿಯ ಕೆಲಸವಲ್ಲ. ಅದರಲ್ಲಿ, ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಆರೋಗ್ಯ ಹಾಗೂ ಸುಂದರವಾದ ಸಮಾಜ ನಿರ್ಮಾಣ ಸಾಧ್ಯ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ತುಕಾರಾಮ ದಡಕೆ ತಿಳಿಸಿದರು.ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಯಕ್ರಮ ಒಂದು ಅವಧಿಗೆ ಸೀಮಿತವಾಗಿರದೇ ನಿರಂತರ ಅಭಿಯಾನವಾದಾಗ ಸ್ವಚ್ಛ ಗ್ರಾಮವಾಗಲು ಸಾಧ್ಯ ಎಂದರು.ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ, ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು ಎಂದು ಗ್ರಾಮ ಪಂಚಾಯತಿ ಪಿಡಿಓ ಸುರೇಶ ಕಳ್ಳಿಮನಿ ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ಮುರಗೇಪ್ಪಾ ಕೋಟಿ, ಮಹಾದೇವ ಜಾಧವ, ಶಂಕರ ಕಟೆ, ಚಿದಾನಂದ ಅರಮೋತಿ, ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಅಣ್ಣಪ್ಪ ಬಿದರಿ, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಮತ್ತು ಯುವಸೇನಾ ಪ್ರತಿನಿಧಿಗಳು ಹಾಗೂ…
ಬಾಸ್ಕೇಟ್ ಬಾಲ್ ಕ್ರೀಡಾಕೂಟ:ಬಂಜಾರಾ ಪ್ರೌಢ ಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ ವಿಜಯಪುರ: ವಿದ್ಯಾರ್ಥಿಗಳು ತರಗತಿ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾಭಿರುಚಿ ಅಗತ್ಯ ಎಂದು ವಿಜಯಪುರ ನಗರ ವಲಯ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ.ಬಿರಾದಾರ ಹೇಳಿದರು.ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರು (ಆಡಳಿತ) ಕಾರ್ಯಾಲಯ ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೧೭ ವರ್ಷ ವಯೋಮಾನದೊಳಗಿನ ‘ಬೆಳಗಾವಿ ವಿಭಾಗ ಮಟ್ಟದ ‘ಬಾಸ್ಕೇಟ್ ಬಾಲ್’ ಕ್ರೀಡಾಕೂಟವನ್ನು ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ‘ಬಾಸ್ಕೇಟ್ ಬಾಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.ಈ ವಿದ್ಯಾರ್ಥಿಗಳಿಗೆ ಟ್ರೋಪಿ ವಿತರಣೆ ಮಾಡಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಹೊಂದಿದಾಗ ಮಾತ್ರ ಜೀವನದಲ್ಲಿನ ಗುರಿ ತಲುಪಲು ಸಾಧ್ಯ. ಆ…
ಚಡಚಣ: ನಾವು ಪ್ರತಿನಿತ್ಯ ಅಥವಾ ನಮ್ಮ ಜೀವನದಲ್ಲಿ ಬಳಸುವ ಅಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞತೆ ತಿಳಿಸುವ ದಿನವೇ ಈ ಆಯುಧ ಪೂಜೆಯಾಗಿದೆ ಎಂದು ರೇವತಗಾಂವ ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿ ಹೇಳಿದರು.ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅಂದರೆ ಶಾರದೀಯ ನವರಾತ್ರಿಯ ಕೊನೆಯ ದಿನದಂದು ಭಾರತದ ವಿವಿಧ ರಾಜ್ಯಗಳಲ್ಲಿ ಅನೇಕ ಸಂಪ್ರದಾಯಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ಒಂದು ಆಯುಧ ಪೂಜೆ, ಇದು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ದಸರಾದ ಒಂದು ದಿನ ಮೊದಲು ಆಚರಿಸುವ ಈ ಆಯುಧ ಪೂಜೆಯನ್ನು ಸೋಮವಾರದಂದು ತಮ್ಮ ಮನೆಯಲ್ಲಿ ಆಚರಣೆ ಮಾಡಿ ವರದಿಗಾರರೊಂದಿಗೆ ಮಾತನಾಡಿದ ಅವರು. ಆಯುಧ ಪೂಜೆಯು ದುರ್ಗಾ ದೇವಿಗೆ ಸಂಬAಧಿಸಿದ ಪೂಜೆಯಾಗಿದೆ. ಇದನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ದಸರಾದ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಹೇಳಿದರು.ಆಯುಧ ಪೂಜೆಯ ದಿನವಾದ ಸೋಮವಾರದಂದು ಮುಂಜಾನೆ ಬೇಗನೆ…
ಸಿಂದಗಿ: ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿದ ಈ ದೇವಸ್ಥಾನ ಜೀರ್ಣೋದ್ದಾರ ಮಾಡಬೇಕು ಎಂಬುದು ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ಬಂದಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕೆಇಬಿ ಆವರಣದಲ್ಲಿ ಹಮ್ಮಿಕೊಂಡ ಆಂಜನೇಯ ದೇವಸ್ಥಾನದ ಕಟ್ಟಡ ಭೂಮಿ ಪೂಜಾ ಸಮಾರಂಭದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದ ಅವರು, ಗುಡಿ, ಗುಂಡಾರ ಮಠ ಮಾನ್ಯಗಳನ್ನು ಕಟ್ಟುವುದರಿಂದ ಮಾನವನ ಧಾರ್ಮಿಕ ನೆಲೆಗಟ್ಟಿನ ಮೇಲೆ ನಾವು ಹೇಗೆ ಬದುಕಬೇಕು, ಸಮಾಜದಲ್ಲಿ ನಾವು ಒಗ್ಗಟ್ಟಾಗಿರಬೇಕು ಎಂಬುದು ತಿಳಿಯುತ್ತೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಅಭಿಮಾನವಿಟ್ಟು ಕಾರ್ಯ ಮಾಡಬೇಕು. ಈಗಾಗಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ೫-೧೦ಲಕ್ಷ ರೂ. ಹಣವನ್ನು ಮಂದಿರ ಕಟ್ಟಡಕ್ಕೆ ಸಂಗ್ರಹಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣವನ್ನು ೫ಲಕ್ಷ ಶಾಸಕರ ಅನುದಾನದಲ್ಲಿ ಮಂಜೂರು ಮಾಡಿಸುವೆ ಮತ್ತು ನನ್ನ ವೈಯಕ್ತಿಕವಾಗಿ ೫೧ ಸಾವಿರ ರೂ. ಗಳನ್ನು ಕಟ್ಟಡಕ್ಕಾಗಿ ನೀಡುವೆ ಎಂದರು.ಇದೇ ವೇಳೆ ಎಸ್‌ಇ ಸಿದ್ದಪ್ಪ ಬೆಂಜಗೇರಿ, ಇಇ ಎಸ್.ಎ. ಬಿರಾದಾರ, ಎಇಇ ಚಂದ್ರಕಾಂತ ನಾಯಕ್,…
ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತ ನುಡಿ ನಮನ ಸಿಂದಗಿ: ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿ ಸಿಂದಗಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಪುರಸಭೆಯ ಸದಸ್ಯರು ತಮ್ಮ ವೇತನದ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ. ಅದಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ್ ಕೂಚಬಾಳ ಶಾಸಕರಿಗೆ ಮನವಿ ಮಾಡಿಕೊಂಡರು.ಅವರು ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾಲಯದಲ್ಲಿ ಕನ್ನಡ ಬಳಗ ಮತ್ತು ಅವ್ವಾ ಫೌಂಡೇಶನ್ ಸಿಂದಗಿ ವತಿಯಿಂದ ಹಮ್ಮಿಕೊಂಡ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಲಿಂ. ಸಿದ್ದಲಿಂಗ ಮಹಾಸ್ವಾಮಿಗಳು ಸಾಮಾಜಿಕ ಹರಿಕಾರರಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಮುಂದಾದವರು. ಅವರ ಕಾಯಕನಿಷ್ಠೆ ದಾಸೋಹ ಧರ್ಮ ಅದೊಂದು ಇತಿಹಾಸ. ಅವರು ಸಿಂದಗಿಯವರು ಎನ್ನುವುದೇ ನಮ್ಮೆಲ್ಲರ…
ಬಸವನಬಾಗೇವಾಡಿ: ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅವರ ನಿವಾಸದಲ್ಲಿ ಅ.೨೫ ರಂದು ವಿಜಯದಶಮಿ ಹಬ್ಬದಂಗವಾಗಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಗುರು-ಹಿರಿಯರು, ಯುವಕರು, ಜನರು ಭಾಗವಹಿಸಬೇಕೆಂದು ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
