ಮೋರಟಗಿ: ರಕ್ತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಮಿಗಿಲು ಎಂದು ಜೇರಟಗಿ ವಿರಕ್ತ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಮೋರಟಗಿ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಆವರಣದಲ್ಲಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗೆ ಕೂಡಿ ಆಡಿ ನಲಿದು ಕುಪ್ಪಳಿಸಿ ಸ್ನೇಹದ ಗಟ್ಟಿತನ ಉಳಿಸಿಕೊಂಡು ತಮಗೆ ವಿದ್ಯಾಜ್ಞಾನ ಉಣಬಡಿಸಿದ ಶಿಕ್ಷಕ ವೃಂದಕೆ ಗೌರವ ಸಮರ್ಪಿಸಲು ಸೇರಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಗಮ ನೋಡಲು ಆನಂದ ತಂದಿದೆ ಎಂದ ಅವರು, ಬಾಲ್ಯದ ಆಟ ಪಾಠಗಳನ್ನು ಮೆಲುಕು ಹಾಕಿ ಇಂದು ಬೆಳೆದು ದೊಡ್ಡವರಾಗಿ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಂಡು ಸಮಯದ ಅಭಾವದಲ್ಲಿ ಬಿಡುವು ಮಾಡಿಕೊಂಡು, ಸ್ನೇಹಿತರು ಸೇರಿ ಶಿಕ್ಷಕರಿಗೆ ಗೌರವ ನೀಡುವ ಭಾವ ಮೆಚ್ಚುವಂತದು ಎಂದರು.
ನಂತರ ಮಾತನಾಡಿದ ಗ್ರಾಮದ ಹಿರಿಯರಾದ ಎನ್.ಎನ್.ಪಾಟೀಲ, ಈ ಸಂಸ್ಥೆಯಲ್ಲಿ ನಾನು ಕೂಡಾ ಸೇವೆ ಸಲ್ಲಿಸಿರುವೆ. ಹಿಂದಿನ ದಿನ ಮಾನಗಳಲ್ಲಿ ತಾವು ಚಿಕ್ಕ ಪ್ರಾಯದ ವಿದ್ಯಾರ್ಥಿಗಳು ಇಂದು ಬೆಳೆದು ದೊಡ್ಡವರಾಗಿ ಸಮಾಜದ ಸಂಸಾರಿಕ ಪರಂಪರೆಯಲ್ಲಿ ಮುನ್ನಡೆಯಲ್ಲಿ ಸಾಗಿರುವಿರಿ ಎಂದ ಅವರು ವಿದ್ಯಾರ್ಥಿ ಜೀವನ ಬಂಗಾರದ ಜೀವನ, ತಂದೆ ತಾಯಿ ಪಾಲಕರ ದುಡಿಮೆ ಹಣದಲ್ಲಿ ವಿದ್ಯೆ ಕಲಿತು ಜಾಣರಾಗಿರುವಿರಿ. ಸಹಪಾಠಿಗಳ ಸಮ್ಮಿಲನದ ಈ ಕಾರ್ಯಕ್ರಮ ಆಯೋಜಿಸಿರುವುದು ಕಂಡು ಹರ್ಷವಾಗಿದೆ. ತಂದೆ ತಾಯಿ ಶಿಕ್ಷಕ ಹಿರಿಯರನ್ನು ಗೌರವ ಪೂರ್ವಕ ಸನ್ಮಾನಿಸುವ ಕಾರ್ಯ ಅರ್ಥಪೂರ್ಣ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಬಿ.ಆಯ್.ಮಸಳಿ, ಹಿರಿಯರಾದ ಶ್ರೀಶೈಲಪ್ಪಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಬಿ.ಎಸ್.ಪಾಟೀಲ, ಶಿವಪ್ಪ ಸಿಂಗಾಡಿ, ಸಿದ್ಧನಗೌಡ ಪಾಟೀಲ, ಬಿ.ಆರ್.ಬಿರಾದಾರ, ಶ್ರೀಮತಿ ಶೈಲಾ ಕೋಲಾರ, ಸಿದ್ಧಲಿಂಗ ಕೆರಿಗೊಂಡ, ರಮೇಶ ನಾಟೀಕಾರ, ಪ್ರಕಾಶ ನೆಲ್ಲಗಿ, ಶಿವಾನಂದ ಹಡಪದ, ಸೇರಿದಂತೆ ಹಲವರು ಇದ್ದರು.
Related Posts
Add A Comment