ಸಿಂದಗಿ: ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿದ ಈ ದೇವಸ್ಥಾನ ಜೀರ್ಣೋದ್ದಾರ ಮಾಡಬೇಕು ಎಂಬುದು ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ಬಂದಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕೆಇಬಿ ಆವರಣದಲ್ಲಿ ಹಮ್ಮಿಕೊಂಡ ಆಂಜನೇಯ ದೇವಸ್ಥಾನದ ಕಟ್ಟಡ ಭೂಮಿ ಪೂಜಾ ಸಮಾರಂಭದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದ ಅವರು, ಗುಡಿ, ಗುಂಡಾರ ಮಠ ಮಾನ್ಯಗಳನ್ನು ಕಟ್ಟುವುದರಿಂದ ಮಾನವನ ಧಾರ್ಮಿಕ ನೆಲೆಗಟ್ಟಿನ ಮೇಲೆ ನಾವು ಹೇಗೆ ಬದುಕಬೇಕು, ಸಮಾಜದಲ್ಲಿ ನಾವು ಒಗ್ಗಟ್ಟಾಗಿರಬೇಕು ಎಂಬುದು ತಿಳಿಯುತ್ತೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಅಭಿಮಾನವಿಟ್ಟು ಕಾರ್ಯ ಮಾಡಬೇಕು. ಈಗಾಗಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ೫-೧೦ಲಕ್ಷ ರೂ. ಹಣವನ್ನು ಮಂದಿರ ಕಟ್ಟಡಕ್ಕೆ ಸಂಗ್ರಹಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣವನ್ನು ೫ಲಕ್ಷ ಶಾಸಕರ ಅನುದಾನದಲ್ಲಿ ಮಂಜೂರು ಮಾಡಿಸುವೆ ಮತ್ತು ನನ್ನ ವೈಯಕ್ತಿಕವಾಗಿ ೫೧ ಸಾವಿರ ರೂ. ಗಳನ್ನು ಕಟ್ಟಡಕ್ಕಾಗಿ ನೀಡುವೆ ಎಂದರು.
ಇದೇ ವೇಳೆ ಎಸ್‌ಇ ಸಿದ್ದಪ್ಪ ಬೆಂಜಗೇರಿ, ಇಇ ಎಸ್.ಎ. ಬಿರಾದಾರ, ಎಇಇ ಚಂದ್ರಕಾಂತ ನಾಯಕ್, ಎಸ್‌ಒ ಶಾಂತೂ ಬಿರಾದಾರ, ಸತೀಶ ಗುಮಶೆಟ್ಟಿ, ಕಿರಣ ಶಿವಶಿಂಪಿಗೇರ, ಸುರೇಶ ಗುಡಗಂಟಿ, ಜಿ.ಬಿ ಪಾಟೀಲ, ಅಶೋಕ ವಾಋದ, ಸೋಮನಗೌಡ ಬಿರಾದಾರ, ಎಮ್.ಜಿ. ಬಿರಾದಾರ, ಸಿದ್ದಲಿಂಗ ಕಣಮೇಶ್ವರ, ಕಕ್ಕಳಮೇಲಿ, ರಾಜು ಚೋರಗಸ್ತಿ, ಪಿ.ಎಂ ಮೂಲಿಮನಿ, ನಾಗಪ್ಪ ನೂಲಾನವರ ಸೇರಿದಂತೆ ಅನೇಕರು ಇದ್ದರು.
ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ರೂ.೫ಲಕ್ಷ ಮಂಜೂರು :ಶಾಸಕ ಮನಗೂಳಿ
Related Posts
Add A Comment