ಹೂವಿನ ಹಿಪ್ಪರಗಿ: ಸಮೀಪದ ಕುದರಿ ಸಾಲವಾಡಗಿ ಗ್ರಾಮದಲ್ಲಿ ದಿ. ಸಂಗಮೇಶ ವಂದಾಲ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಟೆನ್ನಿಸ ಬಾಲ ಕ್ರಿಕೆಟ ಪಂದ್ಯಾವಳಿಗೆ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ)ಚಾಲನೆ ನೀಡಿ ಮಾತನಾಡಿದ ಅವರು ಕ್ರಿಕೆಟ್ ಆಟ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಭಾರತದಲ್ಲಿ ಅತಿಹೆಚ್ಚು ಇಷ್ಟಪಟ್ಟು ಆಡುವ ಕ್ರೀಡೆ ಕ್ರಿಕೆಟ ಆಗಿದ್ದು ೨೦೨೩ ರ ಕ್ರಿಕೆಟ್ ವಿಶ್ವಕಪ್ ನ್ನು ನಮ್ಮ ದೇಶದಲ್ಲಿಯೇ ಆಯೋಜನೆ ಮಾಡಲಾಗಿದೆ. ಈ ಬಾರಿಯ ಚಾಂಪಿಯನ್ ಭಾರತ ತಂಡ ಆಗಲಿ ಎಂದು ಆಶಿಸುತ್ತೇನೆ ಎಂದರು.
ನಾನು ಕೂಡಾ ಶಾಲಾ ಕಾಲೇಜು ದಿನಗಳಲ್ಲಿ ಲೆದರ ಬಾಲ ಕ್ರಿಕೆಟ ಆಡುತ್ತಿದ್ದೆ ಎಂದು ಕ್ರಿಕೆಟ ಆಟದ ಕ್ಷಣಗಳನ್ನು ನೆನೆದು ಹುಮ್ಮಸಿನಿಂದ ಸಿಕ್ಸರ ಬಾರಿಸಿ ನೆರೆದವರ ಗಮನಸೆಳೆದರು.
ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳು ನಮ್ಮೂರಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಮಾಡಿಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ಮೈದಾನ ಮಾಡಿಕೊಡುತ್ತೇನೆ ಎಂದು ಆಟಗಾರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಂದೇನವಾಜ ಕತ್ನಳ್ಳಿ, ಮಹಾದೇವಪ್ಪ ವಂದಾಲ, ಮಲ್ಲಪ್ಪ ವಂದಾಲ, ಲಕ್ಷ್ಮಣ್ ರಾಗೇರಿ, ಇಸಾಕ ನಾಯ್ಕೊಡಿ, ರಫೀಕ ಹೆಬ್ಬಾಳ, ಅನಿಲ ಹುಣಶ್ಯಾಳ, ಬಸವರಾಜ ಪಾಟೀಲ, ತೌಶಿಪ ಡವಳಗಿ, ಶರತ್ ಶೆಟ್ಟಿ, ಅಶೋಕ್ ಗಂಗುರ, ಅಕ್ಬರ್ ನಾಯ್ಕೋಡಿ, ಚಂದ್ರಶೇಖರ್ ಕೌಲಗಿ, ಮಹೇಶ್ ವಂದಾಲ, ಬಾಬು ಆಲೂರು ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
Related Posts
Add A Comment