ಆಲಮಟ್ಟಿ: ದಸರೆ ಸುಕ್ಷಣದ ನವೋಲ್ಲಾಸದಲ್ಲಿ ತೇಲಿಸುವಂಥ ಅಪರೂಪದ ಕ್ಷಣದಲ್ಲಿ ನವರಾತ್ರಿ ಹಬ್ಬದ ಒಂಬತ್ತೂ ವಿಶೇಷ ಬಣ್ಣದ ಉಡುಪು ಧರಿಸಿ ಸಂಭ್ರಮ ಹಂಚಿಕೊಳ್ಳುವ ಸುಯೋಗ.ಈ ಅವಿಸ್ಮರಣೀಯ ಭಾವ ಅಭಿವ್ಯಕ್ತಗೊಳಿಸುವಲ್ಲಿ ಇಲ್ಲೊಂದು ಕುಟುಂಬ,ಪರಿವಾರದ ಸರ್ವ ಸದಸ್ಯರು ಏಕತಾಭಾವದಿಂದ ಭಕ್ತಿ ಮೆರೆದು ನವರಾತ್ರಿ ನವೋಲ್ಲಾಸದ ಸವಿಗಂಧದಲ್ಲಿ ಸಂತಸ ನವೀರೋತ್ಸಾಹದಿಂದ ಮೆರೆದರು.
ಇಲ್ಲಿನ ಸಂತೋಷ, ಅರುಣಕುಮಾರ ಮರಡಿ ಹಾಗೂ ಶಿವಕುಮಾರ್ ಜೋಳದ ದಂಪತಿ ಕುಟುಂಬ ಪರಿವಾರದಲ್ಲಿ ಈ ಬಾರಿಯ ನವರಾತ್ರಿ ಹಬ್ಬದ ರಮೋತ್ಸವ ಒಂಬತ್ತೂ ದಿನಗಳ ಕಾಲ ನಿತ್ಯ ವಿವಿಧ ಬಣ್ಣದ ವಿಶೇಷ ಉಡುಗೆ,ತೋಡುಗೆ ಮೂಲಕ ದೇವಿ ಭಕ್ತಿ ಪ್ರಸನ್ನೋತ್ಸದಿಂದ ಸಾಂಗವಾಗಿ ನೆರವೇರಿತು. ಒಂಬತ್ತನೇ ದಿನದಂದು ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಮಿನುಗಿದ ದೃಶ್ಯ ವೈಭವ ಹೀಗಿತ್ತು!
Related Posts
Add A Comment