ಚಡಚಣ: ನಾವು ಪ್ರತಿನಿತ್ಯ ಅಥವಾ ನಮ್ಮ ಜೀವನದಲ್ಲಿ ಬಳಸುವ ಅಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞತೆ ತಿಳಿಸುವ ದಿನವೇ ಈ ಆಯುಧ ಪೂಜೆಯಾಗಿದೆ ಎಂದು ರೇವತಗಾಂವ ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿ ಹೇಳಿದರು.
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅಂದರೆ ಶಾರದೀಯ ನವರಾತ್ರಿಯ ಕೊನೆಯ ದಿನದಂದು ಭಾರತದ ವಿವಿಧ ರಾಜ್ಯಗಳಲ್ಲಿ ಅನೇಕ ಸಂಪ್ರದಾಯಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ಒಂದು ಆಯುಧ ಪೂಜೆ, ಇದು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ದಸರಾದ ಒಂದು ದಿನ ಮೊದಲು ಆಚರಿಸುವ ಈ ಆಯುಧ ಪೂಜೆಯನ್ನು ಸೋಮವಾರದಂದು ತಮ್ಮ ಮನೆಯಲ್ಲಿ ಆಚರಣೆ ಮಾಡಿ ವರದಿಗಾರರೊಂದಿಗೆ ಮಾತನಾಡಿದ ಅವರು. ಆಯುಧ ಪೂಜೆಯು ದುರ್ಗಾ ದೇವಿಗೆ ಸಂಬAಧಿಸಿದ ಪೂಜೆಯಾಗಿದೆ. ಇದನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ದಸರಾದ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಹೇಳಿದರು.
ಆಯುಧ ಪೂಜೆಯ ದಿನವಾದ ಸೋಮವಾರದಂದು ಮುಂಜಾನೆ ಬೇಗನೆ ಎದ್ದು ಜಳಕ ಮಾಡಿ ಉತ್ತಮವಾದ ಬಟ್ಟೆಗಳನ್ನು ತೊಟ್ಟು, ಆಯುಧ ಪೂಜೆಗೆ ಸಿದ್ಧತೆ ಮಾಡಿಕೊಂಡು, ಪೂಜೆಗೆ ಮುನ್ನ ಆಯುಧಗಳನ್ನು ಸ್ವಚ್ಛಗೊಳಿಸಿ, ನಂತರ ಅವುಗಳ ಮೇಲೆ ಗಂಗಾಜಲವನ್ನು ಸಿಂಪಡಿಸಿ, ಮಹಾಕಾಳಿ ಸ್ತೋತ್ರವನ್ನು ಪಠಿಸಿ, ಆಯುಧಗಳ ಮೇಲೆ ಕುಂಕುಮ ಮತ್ತು ಅರಿಶಿಣದ ತಿಲಕವನ್ನು ಹಚ್ಚಿ ಹೂವುಗಳನ್ನು ಅರ್ಪಿಸಿ ನಂತರ ಆಯುಧಕ್ಕೆ ಧೂಪವನ್ನು ತೊರಿಸಿ ಸಿಹಿಯನ್ನು ಅರ್ಪಿಸಿ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳಲಾಯಿತು.
Related Posts
Add A Comment