Author: editor.udayarashmi@gmail.com

ಕೊಲ್ಹಾರ: ಪಟ್ಟಣದ ದೇಸಾಯಿ ಮನೆತನದವರಿಂದ ೯ ದಿನಗಳ ಕಾಲ ನವರಾತ್ರಿ ಉತ್ಸವ ಅತೀ ವಿಜ್ರಂಭಣೆಯಿಂದ ಜರುಗಿ ಮಂಗಳವಾರ ಮೈಸೂರು ಅರಸರ ಸಂಪ್ರದಾಯದಂತೆ ವಿಜಯನಗರ ಸಾಮ್ರಾಜ್ಯದ ಸಂಕಲ್ಪದಂತೆ ಬನ್ನಿ ಮಹಾಂಕಾಳಿ ಮರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಜರುಗಿತು.ದೇಸಾಯಿಯವರ ಎಲ್ಲ ಆಯುಧಗಳನ್ನು ಖಾಸಗಿ ಹಾಗೂ ಸರಕಾರಿ ಪ್ರತಿನಿಧಿಗಳ, ಊರಿನ ಪ್ರಮುಖರ ಮೂಲಕ ರಾಜ ಬೀದಿಯಲ್ಲಿ ಸಂಚರಿಸಿ ಎರಡು ಕಿ.ಮೀ ದೂರದ ಉದ್ದಕ್ಕೂ ಮುತೈದೆಯರ ಆರತಿಯೊಂದಿಗೆ ಬಾಜಾ ಭಜಂತ್ರಿಯ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಹಣುಮಂತ ದೇವರ ಹತ್ತಿರ ನೂತನವಾಗಿ ಕಟ್ಟಿಸಿರುವ ಬನ್ನಿ ಮಂಟಪಕ್ಕೆ (ಬನ್ನಿ ಕಟ್ಟೆ) ತಲುಪಿ ಬನ್ನಿ ಮರಕ್ಕೆ ಹರಗುರು ಶ್ರೀಗಳ ಹಾಗೂ ರಾಜ ವಂಶಸ್ಥರಾದ ದೇಸಾಯಿಯವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನ ವೇದ ಮಂತ್ರಗಳೊಂದಿಗೆ ನೆರವೇರಿತು.ಪಟ್ಟಣದ ಸಕಲ ಸರ್ವ ಸಮಾಜದ ಗುರು ಹಿರಿಯರು ಮತ್ತು ನೂರಾರು ಜನರು ವಿಜ್ರಂಭಣೆಯ ಬನ್ನಿ ಪೂಜೆಯಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ವೇದ ಮೂರ್ತಿ ಮುರುಘೇಂಧ್ರ ಹಿರೇಮಠ, ಕಲ್ಲಿನಾಥ ದೇವರು ದಿಗಂಬರೇಶ್ವರ ಮಠ, ದೇಸಾಯಿ ಮನೆತನದವರಾದ ವಿನೀತಕುಮಾರ ದೇಸಾಯಿ, ವಿನಾಯಕ…

Read More

ಮುದ್ದೇಬಿಹಾಳ ಪ್ರೀಮಿಯರ್ ಲೀಗ್-೬ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಮುದ್ದೇಬಿಹಾಳ: ಮೊಬೈಲ್ ಹಾವಳಿಯಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಣ್ಣುಗಳನ್ನು ಹಾಳು ಮಾಡಿಕೊಂಡು ಆಟವಾಡುವ ಬದಲು ದೈಹಿಕವಾಗಿ ಸಧೃಢರಾಗುವ ಆಟಗಳನ್ನು ಆಡಲು ಈಗಿನ ಯುವಕರು ಮುಂದಾಗಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಸೀಸನ್-೬ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮೊಬೈಲ್ ಬಳಕೆಯಿಂದ ಅದೆಷ್ಟೋ ಯುವಕರು ಬೇರೆ ಹಾದಿ ಹಿಡಿಯುತ್ತಿದ್ದಾರೆ. ಜೂಜಾಟದಂತಹ ಆಟಗಳನ್ನಾಡಿ ತಮ್ಮ ಆಸ್ತಿ-ಅಂತಸ್ತನ್ನು ಹಾಳು ಮಾಡಿಕೊಳ್ಳುತ್ತಿರುವ ಉದಾಹರಣೆಗಳನ್ನು ದಿನಂಪ್ರತಿ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಇವರ ಮಧ್ಯೆ ಪಟ್ಟಣದ ಯುವಕರ ತಂಡ ಕಳೆದ ೬ ವರ್ಷಗಳಿಂದ ಕ್ರಿಕೇಟ್ ಟೂರ್ನಾಮೆಂಟ್ ನ್ನು ಹಮ್ಮಿಕೊಳ್ಳುತ್ತ ಮಾದರಿಯಾಗಿದ್ದಾರೆ. ಮೇಲಿಂದ ಮೇಲೆ ಅಲ್ಲಲ್ಲಿ ಇಂತಹ ಟೂರ್ನಾಮೆಂಟಗಳು ನಡೆಯುತ್ತಿದ್ದರೆ ಯುವಕರು ದುಶ್ಚಟಗಳತ್ತ ಸಾಗುವದನ್ನು ತಪ್ಪಿಸಬಹುದು ಎಂದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು.ಕಾಂಗ್ರೇಸ್ ಮುಖಂಡ ಶಾಂತಗೌಡ…

Read More

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಬನ್ನಿಮಂಟಪದಲ್ಲಿ ಎಲ್ಲ ಬಾಂಧವರು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸಲಾಯಿತು. ಆಯುಧಪೂಜೆಯ ಅಂಗವಾಗಿ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಚಂಡು ಹೂವು ಸೇರಿಂದತೆ ಮತ್ತೀತರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.ಮಂಗಳವಾರ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ಉತ್ಸಾಹ ಭರಿತರಾಗಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಜಾತಿ. ಮತ. ಪಂಥ ಎನ್ನದೇ ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಎಲ್ಲ ಸಮಾಜಗಳ ಮುಖಂಡರು ಕೂಡಿ ಚಾಮುಂಡಿ ತಾಯಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸರಾಫ್ ಬಜಾರ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ವಿಬಿಸಿ ಹೌಸ್ಕೂಲ್ ಮೈದಾನದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಊರಿನ ಗೌಡರಾದ ರಾಯನಗೌಡ್ರು ಮತ್ತು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಬನ್ನಿ ಮುಡಿಯುವಿಕೆಯನ್ನು ನೆರವೇರಿಸಿ, ಬನ್ನಿ ಮಹಾಂಕಾಳಿಗೆ ವಿಶೇಶ ಪೂಜೆ ಸಲ್ಲಿಸಿದರು. ನಾವು ನೀವು ಬಂಗಾರದಂಗ ಇರೋಣ ಎನ್ನುತ್ತ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು…

Read More

ಮುದ್ದೇಬಿಹಾಳ: ಪಟ್ಟಣದ ಬಸವ ನಗರದ ಮಕ್ಕಳು ದಸರಾ ಹಬ್ಬದ ಪ್ರಯುಕ್ತ ದೇವಿಯರ ವಿಶೇಷ ಉಡುಪುಗಳನ್ನು ತೊಟ್ಟು ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಈ ವೇಳೆ ಬೇನಿ ಇರಕಲ್, ಕಾವ್ಯ ಹೂಲಗೇರಿ, ಸಂಗೀತಾ ರಾಠೋಡ, ಲಕ್ಷ್ಮೀ ಬಡಿಗೇರ, ಜ್ಯೋತಿ ದುದಾನಿ, ಶಕುಂತಲಾ ಹಿರೇಮಠ ಸೇರಿದಂತೆ ಮತ್ತೀತರರು ಇದ್ದರು.

Read More

ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಕಚೇರಿ ಕಾರ್ಯ ನಿಮಿತ್ತ ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ, ಅ.25 ರ ಬುಧವಾರದಂದು, ಸಿಂದಗಿ ರಸ್ತೆಯ ಅವರ ನಿವಾಸದಲ್ಲಿ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಿಲ್ಲ.ಕಾರಣ ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹಾಗೂ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ದಿ, ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲಿ ಎಂದು ಹಾರೈಸಿದ್ದಾರೆ.

Read More

ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದಿಂದ 25 ಜನ ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ವಿಜಯಪುರ: ನಮ್ಮ ದೇಶಿಯ ಭವ್ಯ ಪರಂಪರೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ರಕಲೆ ಅಭೂತಮಯ ಸಾಧನವಾಗಿದೆ. ಮಕ್ಕಳಲ್ಲಿ ನವಿರೋತ್ಸವದ ರಸದೌತಣ ನೀಡಿ ಕಲಿಕೋತ್ಸವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಆರ್ಟ ಗ್ಯಾಲರಿ ಸಭಾಭವನದಲ್ಲಿ ಕನಾ೯ಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಕೇಂದ್ರ ಕಚೇರಿ ವಿಜಯಪುರ ಆಶ್ರಯದಲ್ಲಿ ನಡೆದ ಜಿಲ್ಲೆಯ ನಿವೃತ್ತ 25 ಚಿತ್ರಕಲಾ ಶಿಕ್ಷಕರ ಹಾಗೂ ಮೂವರು ವಿಶೇಷ ಸಾಧಕರ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಚಿತ್ರಕಲಾ ಶಿಕ್ಷಣ ಮಗುವಿನ ಸವ೯ತೋಮುಖ ಬೆಳವಣಿಗೆಯಲ್ಲಿ ಬಹಳಷ್ಟು ಅದಮ್ಯ ಪಾತ್ರ ವಹಿಸುತ್ತದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಇಲಕಲ್ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಸಂಸ್ಥಾಪಕ, ಪ್ರಾಂಶುಪಾಲ ಡಾ,ಬಸವರಾಜ್ ಗವಿಮಠ, ಇಂದಿನ ಕಲಾ ಶಿಕ್ಷಣ ಕ್ಷೇತ್ರದ ಡಿಜಿಟಲ್ ಯುಗದಲ್ಲಿ ವಿಪುಲ…

Read More

ವಿಜಯಪುರ: ದಸರಾ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಾದ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಇಂದು ಮಂಗಳವಾರ ಸಂಜೆ ತಮ್ಮ ತಾಯಿಯವರಾದ ಕಮಲಾಬಾಯಿ ಅವರನ್ನು ಭೇಟಿ ಮಾಡಿದರು.ದಸರಾ ಹಿನ್ನೆಲೆಯಲ್ಲಿ ತಾಯಿಗೆ ಬನ್ನಿ ನೀಡಿದ ಸಚಿವರು ಅಶೀರ್ವಾದ ಪಡೆದರು.

Read More

ಸೋಮದೇವರಹಟ್ಟಿ ಎಲ್ಟಿ1ರಲ್ಲಿ ದುರ್ಗಾದೇವಿ ಮಹಾದ್ವಾರ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಬಂಜಾರಾ ಸಮುದಾಯದ ಜನ ಶ್ರಮಜೀವಿಗಳು. ಯಾವುದೇ ಜಲಾಶಯ, ಸೇತುವೆ ಸೇರಿದಂತೆ ಕಟ್ಟಡಗಳ ನಿರ್ಮಾಣದಲ್ಲಿ ಬೆವರ ಹನಿ‌ ಇದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ. 1ರಲ್ಲಿ ದುರ್ಗಾದೇವಿ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.ಬಂಜಾರಾ ಮಹಿಳೆಯರೂ ಕೂಡ ಶ್ರಮಜೀವಿಯಾಗಿ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಭಕ್ತಿ ಮತ್ತು ಶ್ರದ್ಧೆಗೆ ಈ ಸಮುದಾಯ ಹೆಸರುವಾಸಿಯಾಗಿದ್ದು, ದೇವರನ್ನು‌ ನಂಬಿಕೊಂಡು ಕೆಲಸ ಮಾಡುತ್ತಾರೆ. ಈ ಸಮುದಾಯದ ಈ ಹಿಂದೆಯೂ‌ ನಾನಿದ್ದೆ. ಈಗಲೂ ಇದ್ದೇನೆ. ಮುಂದೆಯೂ ಸದಾಕಾಲ ಇರುತ್ತೇನೆ ಎಂದು ಸಚಿವರು ಹೇಳಿದರು.ಬಂಜಾರಾ ಸಮುದಾಯಕ್ಕೆ ಸೇರಿದ ಯಾವ ಜನಪ್ರತಿನಿಧಿಗಳೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಲಂಬಾಣಿ ತಾಂಡಾಗಳಲ್ಲಿ ಮಾಡಿದ್ದೇನೆ. ನಮ್ಮ ಪ್ರತಿಯೊಂದು ತಾಂಡಾದಲ್ಲಿ ಕನಿಷ್ಠ ರೂ. 50 ಲಕ್ಷ ದಿಂದ ಮೂರ್ನಾಲ್ಕು ಕೋಟಿ ರೂಪಾಯಿ…

Read More

ಬೆಂಗಳೂರು: ಬಿಜೆಪಿಯಲ್ಲಿ ರಾಜ್ಯಾಕ್ಷರಾಗಿ ಬಹುತೇಕ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಅವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಬಹಳ ಸಂತೋಷ ಎಂದು ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಬೇರೆ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಬಹುದು. ನಾನು ಮಾತನಾಡಲು ಹೋಗುವುದಿಲ್ಲ. ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಅಧ್ಯಕ್ಷರ ಆಯ್ಕೆ ಪಕ್ಕಕ್ಕಿರಲಿ, ಆದರೆ ಐದು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರು,ಯಾರನ್ನೇ ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ಅವರಿಗೆ ಶುಭವಾಗಲಿ. ಅವರು ನಮ್ಮ ತಪ್ಪುಗಳನ್ನು ಕಂಡುಹಿಡಿಯಲಿ, ಜಾಗೃತಗೊಳಿಸಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಶೋಭ ಕರಂದ್ಲಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜಾತಿ ಮೇಲೆ‌ ಅಲ್ಲ,…

Read More

ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಬಂದಿಲ್ಲ | ಕೇಂದ್ರದಲ್ಲೇ ಖುಷಿಯಾಗಿದ್ದೇನೆ | ಪಕ್ಷದ ಕೆಲಸಕ್ಕೆ ನಾವೆಲ್ಲರೂ ಬದ್ಧ ಬೆಂಗಳೂರು: ಕಳೆದ ಆರು ತಿಂಗಳಿನಿಂದ ಬಿಜೆಪಿ ಪಾಳಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಜೋರಾಗಿ ಚರ್ಚೆಯಾಗುತ್ತಿದ್ದು, ಇದೀಗ ಮುನ್ನಲೇ ಬಂದಿದೆ. ಬಿಜೆಪಿ ಮಹಿಳಾ ನಾಯಕಿ ಹಾಗೂ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್‌ ತಿರ್ಮಾನಿಸಿದೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದೆ.ಹೌದು, ರಾಜ್ಯ ರಾಜಕಾರಣದಲ್ಲಿ ಮಹಿಳೆಯೋರ್ವಳು ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಬಹುದು ಎಂಬ ಮಾತುಗಳು ದಟ್ಟವಾಗಿದ್ದು, ಈ ಕುರಿತು ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೂ ಯಾವುದೇ ಮಾಹಿತಿ ಬಂದಿಲ್ಲ. ಈಗ ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆ ಆಗಿದ್ದೇನೆ. ದೇಶದಾದ್ಯಂತ ಪ್ರವಾಸ ಮಾಡುವ ಸುಯೋಗ ಸಿಕ್ಕಿದೆ. ಕೇಂದ್ರದಲ್ಲೇ ಖುಷಿಯಾಗಿದ್ದೇನೆ, ಪಕ್ಷದ ಕೆಲಸಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.ನನಗೆ…

Read More