ಕೊಲ್ಹಾರ: ಪಟ್ಟಣದ ದೇಸಾಯಿ ಮನೆತನದವರಿಂದ ೯ ದಿನಗಳ ಕಾಲ ನವರಾತ್ರಿ ಉತ್ಸವ ಅತೀ ವಿಜ್ರಂಭಣೆಯಿಂದ ಜರುಗಿ ಮಂಗಳವಾರ ಮೈಸೂರು ಅರಸರ ಸಂಪ್ರದಾಯದಂತೆ ವಿಜಯನಗರ ಸಾಮ್ರಾಜ್ಯದ ಸಂಕಲ್ಪದಂತೆ ಬನ್ನಿ ಮಹಾಂಕಾಳಿ ಮರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಜರುಗಿತು.
ದೇಸಾಯಿಯವರ ಎಲ್ಲ ಆಯುಧಗಳನ್ನು ಖಾಸಗಿ ಹಾಗೂ ಸರಕಾರಿ ಪ್ರತಿನಿಧಿಗಳ, ಊರಿನ ಪ್ರಮುಖರ ಮೂಲಕ ರಾಜ ಬೀದಿಯಲ್ಲಿ ಸಂಚರಿಸಿ ಎರಡು ಕಿ.ಮೀ ದೂರದ ಉದ್ದಕ್ಕೂ ಮುತೈದೆಯರ ಆರತಿಯೊಂದಿಗೆ ಬಾಜಾ ಭಜಂತ್ರಿಯ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಹಣುಮಂತ ದೇವರ ಹತ್ತಿರ ನೂತನವಾಗಿ ಕಟ್ಟಿಸಿರುವ ಬನ್ನಿ ಮಂಟಪಕ್ಕೆ (ಬನ್ನಿ ಕಟ್ಟೆ) ತಲುಪಿ ಬನ್ನಿ ಮರಕ್ಕೆ ಹರಗುರು ಶ್ರೀಗಳ ಹಾಗೂ ರಾಜ ವಂಶಸ್ಥರಾದ ದೇಸಾಯಿಯವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನ ವೇದ ಮಂತ್ರಗಳೊಂದಿಗೆ ನೆರವೇರಿತು.
ಪಟ್ಟಣದ ಸಕಲ ಸರ್ವ ಸಮಾಜದ ಗುರು ಹಿರಿಯರು ಮತ್ತು ನೂರಾರು ಜನರು ವಿಜ್ರಂಭಣೆಯ ಬನ್ನಿ ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ವೇದ ಮೂರ್ತಿ ಮುರುಘೇಂಧ್ರ ಹಿರೇಮಠ, ಕಲ್ಲಿನಾಥ ದೇವರು ದಿಗಂಬರೇಶ್ವರ ಮಠ, ದೇಸಾಯಿ ಮನೆತನದವರಾದ ವಿನೀತಕುಮಾರ ದೇಸಾಯಿ, ವಿನಾಯಕ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಶಂಕ್ರೆಪ್ಪ ದೇಸಾಯಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಗಣಕುಮಾರ, ಬಸವರಾಜ ಹುಲ್ಯಾಳ, ಈರಣ್ಣ ಔರಸಂಗ, ಸಂಗಪ್ಪ ಯ ಗಣಿ, ಯಮನಪ್ಪ ಮಾಕಾಳಿ, ಭಿಮಸಿ ಬೀಳಗಿ, ರಾಜು ಚೌಡಪ್ಪನವರ, ಈರಯ್ಯ ಮಠಪತಿ, ಅನೇಕ ಪ್ರಮುಖರು ಭಾಗವಹಿಸಿದ್ದರು.
ಬಳಿಕ ಪರಸ್ಪರ ಒಬ್ಬರಿಗೊಬ್ಬರು ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
Related Posts
Add A Comment