ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಕಚೇರಿ ಕಾರ್ಯ ನಿಮಿತ್ತ ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ, ಅ.25 ರ ಬುಧವಾರದಂದು, ಸಿಂದಗಿ ರಸ್ತೆಯ ಅವರ ನಿವಾಸದಲ್ಲಿ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಿಲ್ಲ.
ಕಾರಣ ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹಾಗೂ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ದಿ, ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲಿ ಎಂದು ಹಾರೈಸಿದ್ದಾರೆ.
Related Posts
Add A Comment