ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದಿಂದ 25 ಜನ ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ
ವಿಜಯಪುರ: ನಮ್ಮ ದೇಶಿಯ ಭವ್ಯ ಪರಂಪರೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ರಕಲೆ ಅಭೂತಮಯ ಸಾಧನವಾಗಿದೆ. ಮಕ್ಕಳಲ್ಲಿ ನವಿರೋತ್ಸವದ ರಸದೌತಣ ನೀಡಿ ಕಲಿಕೋತ್ಸವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಆರ್ಟ ಗ್ಯಾಲರಿ ಸಭಾಭವನದಲ್ಲಿ ಕನಾ೯ಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಕೇಂದ್ರ ಕಚೇರಿ ವಿಜಯಪುರ ಆಶ್ರಯದಲ್ಲಿ ನಡೆದ ಜಿಲ್ಲೆಯ ನಿವೃತ್ತ 25 ಚಿತ್ರಕಲಾ ಶಿಕ್ಷಕರ ಹಾಗೂ ಮೂವರು ವಿಶೇಷ ಸಾಧಕರ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಚಿತ್ರಕಲಾ ಶಿಕ್ಷಣ ಮಗುವಿನ ಸವ೯ತೋಮುಖ ಬೆಳವಣಿಗೆಯಲ್ಲಿ ಬಹಳಷ್ಟು ಅದಮ್ಯ ಪಾತ್ರ ವಹಿಸುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಇಲಕಲ್ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಸಂಸ್ಥಾಪಕ, ಪ್ರಾಂಶುಪಾಲ ಡಾ,ಬಸವರಾಜ್ ಗವಿಮಠ, ಇಂದಿನ ಕಲಾ ಶಿಕ್ಷಣ ಕ್ಷೇತ್ರದ ಡಿಜಿಟಲ್ ಯುಗದಲ್ಲಿ ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಕಲಾಭಿರುಚಿ ಅಗತ್ಯತೆಯಿದೆ. ಹೊಸತನದ ಭೋದನೆಯೊಂದಿಗೆ ಶಿಕ್ಷಕರು ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳನ್ನು ಅಧ್ಯಯನ ಕಡೆಗೆ ಸೆಳೆಯಬಹುದು. ಉನ್ನತ ಶಿಕ್ಷಣದ ವೈದ್ಯಕೀಯ, ಇಂಜಿನಿಯರಿಂಗ್, ಟೆಕ್ನೋಲೋಜಿ ಸೇರಬಯಸುವ ವಿದ್ಯಾರ್ಥಿಗಳಿಗೆ ಆಟ್೯ ಫೀಲ್ಡ್ ತುಂಬಾ ಸಹಕಾರಿಯಾಗಿದೆ.ಪ್ರೌಢ ಹಂತದ ಶಿಕ್ಷಣದಲ್ಲಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಚಿತ್ರಕಲಾ ಪಠ್ಯಪುಸ್ತಕ ಹೊರತರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕನಾ೯ಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ ಮಾತನಾಡಿದರು.
ಅತಿಥಿಗಳಾಗಿ ಬಾಲಕರ ಸರಕಾರಿ ಪ.ಪೂ.ಕಾಲೇಜು ಪ್ರಾಚಾರ್ಯ ಬಿ.ಬಿ.ಗಂಗನಳ್ಳಿ ಮಾತನಾಡಿ, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಒಳ್ಳೆಯ ಶಿಸ್ತು, ಆರೋಗ್ಯವಂತ ವಿದ್ಯಾರ್ಥಿಗಳನ್ನು ನಿಮಾ೯ಣ ಮಾಡಿದರೆ, ಚಿತ್ರಕಲಾ ಶಿಕ್ಷಕರು ಸಂಸ್ಕೃತಿ ಹೊಂದಿದ ವಿದ್ಯಾರ್ಥಿಗಳನ್ನು ಸೃಜನಶೀಲವಾಗಿ ಸೃಷ್ಟಿಸುತ್ತಾರೆ.ಈ ವಿಶೇಷ ಶಿಕ್ಷಕರು ಉತ್ತಮ ಶಾಲಾ ಪರಿಸರಕ್ಕೆ ಎರಡು ಕಣ್ಣುಗಳಿದ್ದಂತೆ. ರಚನಾತ್ಮಕ ಪ್ರಜ್ಞೆಗೆ ಚಿತ್ರಕಲೆ ಜ್ಞಾನ ಬೇಕು.ಆ ಕಾರಣ ಚಿತ್ರಕಲೆ ಶಿಕ್ಷಣ ಕಡ್ಡಾಯವಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಗಂಗಾಧರ ಪಾಟೀಲ ಮಾತನಾಡಿದರು.
ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಕಲಾ ಸೇವೆ ಸಲ್ಲಿಸಿ ನಿವೃತ್ತರಾದ 25 ಜನ ಶಿಕ್ಷಕರಿಗೆ ಹಾಗೂ 3 ಜನ ಚಿತ್ರಕಲಾ ಸಾಧಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಚಿಶಿ ಸಂಘದ ಜಿಲ್ವಾಧ್ಯಕ್ಷ ವಿಶ್ವೇಶ್ವರಯ್ಯ ಮಠಪತಿ, ಕಾರ್ಯದರ್ಶಿ ಆನಂದ ಝಂಡೇ, ಸಲಹಾ ಸಮಿತಿಯ ಹಿರಿಯ,ಮಾಜಿ ಕನಾ೯ಟಕ ಲಲಿತ ಕಲಾ ಆಕಾಡಮಿ ಸದಸ್ಯ ಡಾ,ಜಿ.ಎಸ್.ಭೂಸಗೊಂಡ, ಖ್ಯಾತ ಕಲಾವಿದ ರಮೇಶ ಚವ್ಹಾಣ, ಬಿ.ಎಸ್.ಪಾಟೀಲ, ಹೆಚ್.ಎಸ್.ರಾಜನಾಳ,ಡಿ.ಜಿ.ಇಮನದ ಇತರರಿದ್ದರು. ಜಿಲ್ಲೆಯ ಅನೇಕ ಚಿತ್ರಕಲಾ ಶಿಕ್ಷಕರು, ಸಾಹಿತಿಗಳು, ಅಭಿಮಾನಿಗಳು ಆಗಮಿಸಿದ್ದರು.
ಮಾಮು ಮುಲ್ಲಾ ಸ್ವಾಗತಿಸಿದರು.ಕಮಲೇಶ ಭಜಂತ್ರಿ ಸನ್ಮಾನದ ನಿರೂಪಣೆ ಮಾಡಿದರು. ಸಂಜೀವ ಬಡಿಗೇರ ನಿರೂಪಿಸಿದರು.ಸುಜಾತಾ ಮೊಗಲಿ ವಂದಿಸಿದರು.