ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಬನ್ನಿಮಂಟಪದಲ್ಲಿ ಎಲ್ಲ ಬಾಂಧವರು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸಲಾಯಿತು. ಆಯುಧಪೂಜೆಯ ಅಂಗವಾಗಿ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಚಂಡು ಹೂವು ಸೇರಿಂದತೆ ಮತ್ತೀತರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಮಂಗಳವಾರ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ಉತ್ಸಾಹ ಭರಿತರಾಗಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಜಾತಿ. ಮತ. ಪಂಥ ಎನ್ನದೇ ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಎಲ್ಲ ಸಮಾಜಗಳ ಮುಖಂಡರು ಕೂಡಿ ಚಾಮುಂಡಿ ತಾಯಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸರಾಫ್ ಬಜಾರ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ವಿಬಿಸಿ ಹೌಸ್ಕೂಲ್ ಮೈದಾನದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಊರಿನ ಗೌಡರಾದ ರಾಯನಗೌಡ್ರು ಮತ್ತು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಬನ್ನಿ ಮುಡಿಯುವಿಕೆಯನ್ನು ನೆರವೇರಿಸಿ, ಬನ್ನಿ ಮಹಾಂಕಾಳಿಗೆ ವಿಶೇಶ ಪೂಜೆ ಸಲ್ಲಿಸಿದರು. ನಾವು ನೀವು ಬಂಗಾರದಂಗ ಇರೋಣ ಎನ್ನುತ್ತ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ನಾಡಿನ ಎಲ್ಲೆಡೆ ಒಳ್ಳೆಯ ಮಳೆ ಬೆಳೆ ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುವದಾಗಿ ತಿಳಿಸಿದರು.
ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪ್ರಮುಖರಾದ ಅಶೋಕ ನಾಡಗೌಡ, ಬಸಯ್ಯ ನಂದಿಕೇಶ್ವರಮಠ, ವಾಸುದೇವ ಶಾಸ್ತ್ರಿ, ರಾಜು ಕರಡ್ಡಿ, ಶರಣು ಸಜ್ಜನ, ಸುಧೀರ ನಾವದಗಿ, ನಾಗೇಂದ್ರ ಶಿವಶಿಂಪಿ, ರಾಜು ಬಳ್ಳೊಳ್ಳಿ, ಜಗದೀಶ ಲಕ್ಷಟ್ರ, ಹರೀಶ ಬೆವೂರ, ರವಿ ಅಮರಣ್ಣವರ, ಸುರೇಶ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment