ಮುದ್ದೇಬಿಹಾಳ ಪ್ರೀಮಿಯರ್ ಲೀಗ್-೬ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಮುದ್ದೇಬಿಹಾಳ: ಮೊಬೈಲ್ ಹಾವಳಿಯಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಣ್ಣುಗಳನ್ನು ಹಾಳು ಮಾಡಿಕೊಂಡು ಆಟವಾಡುವ ಬದಲು ದೈಹಿಕವಾಗಿ ಸಧೃಢರಾಗುವ ಆಟಗಳನ್ನು ಆಡಲು ಈಗಿನ ಯುವಕರು ಮುಂದಾಗಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಸೀಸನ್-೬ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯಿಂದ ಅದೆಷ್ಟೋ ಯುವಕರು ಬೇರೆ ಹಾದಿ ಹಿಡಿಯುತ್ತಿದ್ದಾರೆ. ಜೂಜಾಟದಂತಹ ಆಟಗಳನ್ನಾಡಿ ತಮ್ಮ ಆಸ್ತಿ-ಅಂತಸ್ತನ್ನು ಹಾಳು ಮಾಡಿಕೊಳ್ಳುತ್ತಿರುವ ಉದಾಹರಣೆಗಳನ್ನು ದಿನಂಪ್ರತಿ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಇವರ ಮಧ್ಯೆ ಪಟ್ಟಣದ ಯುವಕರ ತಂಡ ಕಳೆದ ೬ ವರ್ಷಗಳಿಂದ ಕ್ರಿಕೇಟ್ ಟೂರ್ನಾಮೆಂಟ್ ನ್ನು ಹಮ್ಮಿಕೊಳ್ಳುತ್ತ ಮಾದರಿಯಾಗಿದ್ದಾರೆ. ಮೇಲಿಂದ ಮೇಲೆ ಅಲ್ಲಲ್ಲಿ ಇಂತಹ ಟೂರ್ನಾಮೆಂಟಗಳು ನಡೆಯುತ್ತಿದ್ದರೆ ಯುವಕರು ದುಶ್ಚಟಗಳತ್ತ ಸಾಗುವದನ್ನು ತಪ್ಪಿಸಬಹುದು ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು.
ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು.
ಪಿಎಸ್‌ಐ ಸಂಜೀವ ತಿಪರೆಡ್ಡಿ ಮಾತನಾಡಿ, ದೇಹವನ್ನು ದಂಡಿಸುವ ಆಟಗಳನ್ನಾಡುವದರಿಂದ ಶರೀರಕ್ಕೂ ಉತ್ತಮ ಮತ್ತು ಮಾನಸಿಕವಾಗಿಯೂ ನೆಮ್ಮದಿಯಿಂದಿರಬಹುದು. ಇಂತಹ ಆಟಗಳಿಗೆ ಪೊಲೀಸ್ ಇಲಾಖೆ ಸದಾ ಸಹಕರಿಸುವದಾಗಿ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಜ್ಯೋತಿ ಬೆಳಗಿಸುವ ಮೂಲಕ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಮೌಲಾನಾ ಅಲ್ಲಾಭಕ್ಷ ಖಾಜಿ ದಿವ್ಯ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು.
ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿದರು.
ಅತಿಥಿಗಳೆಲ್ಲರೂ ಸ್ಪರ್ದಾಳುಗಳನ್ನು ಪರಿಚಯಿಸಿಕೊಂಡು ಶುಭ ಕೋರಿ, ತಾವೂ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಮೂಲಕ ರಂಜಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯ ಮಹೆಬೂಬ ಗೊಳಸಂಗಿ, ಮುತ್ತು ಗಣಾಚಾರಿ, ಅಮರೇಶ ಗೂಳಿ, ಎನ್‌ಎಸ್‌ಯುಐ ನ ಸದ್ದಾಂ ಕುಂಟೋಜಿ, ಸಮಾಜ ಸೇವಕ ಅಫ್ತಾಬ ಮನಿಯಾರ, ನದಾಫ್, ದಾವಲ ಗೊಳಸಂಗಿ, ಸಿಕಂದರ ಜಾನ್ವೇಜಕರ, ಟಿ.ಭಾಸ್ಕರ, ಅಶೋಕ ಚಟ್ಟೇರ, ರಾಯನಗೌಡ ತಾತರೆಡ್ಡಿ, ಸಂಗೀತಾ ನಾಡಗೌಡ ಸೇರಿದಂತೆ ಮತ್ತೀತರರು ಇದ್ದರು. ಹುಸೇನ ಮುಲ್ಲಾ ಕಾಳಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.