Author: editor.udayarashmi@gmail.com

ವಿಜಯಪುರ: ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹಾನ್ ಕವಿಗಳ ಸಾಲಿಗೆ ಸೇರಿದ್ದಾರೆ. ಇವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ತಮ್ಮ ಕಾವ್ಯದ ಮೂಲಕ ಉತ್ತಮ ವಿಚಾದಧಾರೆಗಳನ್ನು ಬಿತ್ತರಿಸಿದ್ದಾರೆ. ಇವರು ನಮ್ಮ ಬದುಕಿಗೆ ಮಾದರಿಯಾಗಬೇಕಿದೆ ಎಂದು ಪ್ರಾಚಾರ್ಯೆ ಡಾ.ಆರ್ ಎಂ.ಮಿರ್ದೆ ಹೇಳಿದರು.ಶನಿವಾರನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ರಾಮನನ್ನು ಕಾವ್ಯದ ನಾಯಕನ್ನಾಗಿಸಿಕೊಂಡು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಸಾಹಿತ್ಯ ಲೋಕದ ಅಗ್ರಜರೆನಿಕೊಂಡಿದ್ದಾರೆ. ಇವರು ತಮ್ಮ ಕಾವ್ಯದ ಮೂಲಕ ಮೌಲ್ಯಯುತವಾದ ವಿಚಾರಧಾರೆಗಳನ್ನು ಬಿತ್ತರಿಸಿದ್ದಾರೆ. ಹೀಗಾಗಿಯೇ ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತಿದೆ. ಕ್ರೌಂಚ ಪಕ್ಷಿಯ ನಿವೇದನೆಯನ್ನೇ ಕಾವ್ಯಕ್ಕೆ ಪ್ರೇರಣೆಯಾಗಿಸಿಕೊಂಡಿರುವುದು ಮಹತ್ವದ ವಿಚಾರವಾಗಿದೆ. ಇಂಥವರು ನಮ್ಮ ಬದುಕಿಗೆ ಮಾದರಿಯಾಗಿದ್ದು, ಇವರ ಆಚಾರ ವಿಚಾರ ಮತ್ತು ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಪ್ರೊ. ಎ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರಾದ ಡಾ.ಪಿ.ಎಸ್.ಪಾಟೀಲ,…

Read More

Fact-Checked: May 2026 — All procedures re-tested typora 破解版 Official Download The latest Typora 破解版 version is ready to download — typora 破解版 users can now access the fully updated 2026 release directly from trusted sources. This updated installer supports Windows, macOS, and Linux platforms, ensuring broad compatibility for all users seeking a reliable markdown editing experience. Typora 官网 offers the safest way to acquire this new version without risking outdated or corrupted files. Follow this guide to download typora 破解版 safely, verify authenticity, and install securely on your device. ✓ Tested Environment: This guide was tested on Typora 破解版…

Read More

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ಕುರಿತು ಸಚಿವ ರಾಮಲಿಂಗಾರೆಡ್ಡಿ ಅಭಿಮತ ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ವಿಚಾರ ನನಗೆ ಗೊತ್ತಿಲ್ಲ. ಆದರೆ ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಮಾಡಿದರೆ ಯಾವುದೇ ನಷ್ಟ ಆಗಲ್ಲ. ಜೊತೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಗಳು ಸಿಗಬೇಕು. ಆ ಉದ್ದೇಶದಿಂದ ಬದಲಾವಣೆ ಆದರೆ ತೊಂದರೆ ಇಲ್ಲ ಎಂದು ಹೇಳಿದರು.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎನ್ನುವ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ , ಕುಮಾರಸ್ವಾಮಿ ಅವರ ಹೇಳಿಕೆಗೆ ಮಾನ್ಯತೆ ನೀಡಬೇಕಿಲ್ಲ ಎಂದು ನೇರವಾಗಿ ಹೇಳಿದರು.ಚುನಾವಣೆ ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕಳೆದ ಐದು ತಿಂಗಳ ಹಿಂದೆ…

Read More

ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಮತ ವನ್ಯಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಬಳಸಿದವರ ಮೇಲೆ ಕ್ರಮ ಚಿತ್ರದುರ್ಗ: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಬೆನ್ನಲ್ಲೇ ಕೆಲವೊಂದು ಮನೆಯಲ್ಲಿ ಆನೆ ದಂತದಿಂದ ಕುರ್ಚಿ ಮತ್ತು ಟೇಬಲ್ ಮಾಡಿಸಿದ್ದಾರೆ. ಅವುಗಳನ್ನು ಸಹ ಸೀಜ್ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಯಾಷನ್ ಗಾಗಿ ಹುಲಿ ಉಗುರು, ಕೂದಲು ಕಟ್ಟಿಕೊಳ್ಳೋದು ತಪ್ಪು ಎಂದು ಕಾನೂನು ರಕ್ಷಣೆ ಮಾಡೋರು ಕಾನೂನು ಮೀರಿ ವೈಭವೀಕರಿಸಿದರೆ ಕ್ರಮ ಆಗುತ್ತದೆ. ಅದು ಯಾರೇ ಎಷ್ಟೇ ದೊಡ್ಡವರು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಹುಲಿ ಸಂರಕ್ಷಣೆ ಮಾಡಿ ಅಂತ ಪ್ರಪಂಚದಲ್ಲಿ ಓಡಾಡ್ತಾ ಇದ್ದಾರೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತೀವಿ. ನೀವು ಅದರ ಉಗುರು ಧರಿಸಿ ಹುಲಿ ಸಿಂಹಗಳಿಗೆ ಅಣುಕಿಸುವ ಕೆಲಸ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.ವನ್ಯ ಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಹಾಕುವವರ ವಿರುದ್ಧ…

Read More

ಭಾವರಶ್ಮಿ ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ. ಇಂತಹ ಮಾನವನ ದೇಹದಲ್ಲಿ ಚಿತ್ರ ವಿಚಿತ್ರವಾದ ವಿಷಯಗಳು ಅಡಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ. ಎಲ್ಲಿಯ ಕನೆಕ್ಷನ್ ಇನ್ನೆಲ್ಲಿಯೋ ಇರುತ್ತದೆ. ಎಲ್ಲೋ ಒಂದು ತೊಂದರೆಯಾದರೆ, ಮತ್ತಿನ್ನೆಲ್ಲೋ ಅದು ವ್ಯಕ್ತಪಡಿಸುತ್ತದೆ. ಒಟ್ಟಿನಲ್ಲಿ ಅದರ ಸೂತ್ರ ಒಂದು ಕಡೆಯಿದ್ದರೆ, ಅದರ ಪಾತ್ರ ನಿರ್ವಹಿಸುವಿಕೆ ಮತ್ತಿನ್ನೆಲ್ಲೋ ಇರುತ್ತದೆ. ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದ ದೇಹ, ದಿಢೀರನೆ ವ್ಯತ್ಯಾಸಗೊಂಡು ಅನಾರೋಗ್ಯಕ್ಕೆ ಈಡಾಗುತ್ತದೆ. ಅದೇಕೆ ಹಾಗಾಯಿತು, ಏನಾಯಿತು ಎಂದು ಪತ್ತೆ ಹಚ್ಚುವುದಕ್ಕೆ ಕೆಲವೊಮ್ಮೆ ಕಷ್ಟವಾಗಿ ಬಿಡುತ್ತದೆ. ಕೆಲವೊಮ್ಮೆ ಒಂದು ನೋವಿಗೂ ಇನ್ನೊಂದು ನೋವಿಗೂ ಸಂಬಂಧವಿದ್ದು ಕಾಯಿಲೆಗಳು ಒಂದಕ್ಕೊಂದು ಬೆಸೆದುಕೊಂಡಿದ್ದರೆ, ಮತ್ತೂ ಕೆಲವೊಮ್ಮೆ ಎರಡು ಮೂರು ಕಾಯಿಲೆ ನೋವುಗಳು ಒಟ್ಟೊಟ್ಟಿಗೆ ಶುರುವಾದರೂ, ಕಾರಣಗಳು ವಿಭಿನ್ನವಾಗಿರುತ್ತವೆ. “ಮಾನವನ ದೇಹವು ಮೂಳೆ ಮಾಂಸದ ತಡಿಕೆ” ಎಂದರೂ ಸಹ, ನಮ್ಮ ದೇಹ ಕಾರ್ಯನಿರ್ವಹಿಸಲು ಬೇಕಾಗುವ ಶಕ್ತಿ, ಕೆಲಸ ನಿರ್ವಹಿಸುವ ವೈಖರಿ,…

Read More

ಕಾವ್ಯರಶ್ಮಿ ಬಾಳ ಮುಂಜಾವಿನಲಿ ತುಂಬಿದೆ ಸಡಗರದಿನ ಬರುವ ಹೊಂಗಿರಣ ಬೀರುತ ಭಾಸ್ಕರನವ ಭಾವಗಳು ಬರಲು ಬಾಳಲಿ ಸ್ವೀಕಾರಬದುಕಿನ ಕ್ಷಣ ಕ್ಷಣವೂ ಆಗಿದೆ ಸುಂದರ ಬಾಳ ಮುಸ್ಸಂಜೆಯಲಿ ನೆನಪಿನ ಹಂದರಕಳೆದ ಸಂತಸದ ಕ್ಷಣಗಳ ಸುಂದರ ಚಿತ್ತಾರಗೂಡು ತೊರೆದ ಹಕ್ಕಿಗಳ‌ ನೆನಪು ಬೇಸರಯಾರಿಲ್ಲ ಜೊತೆಗೆ ಒಂಟಿತನವೇ ಆಧಾರ

Read More

ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ 2001,2004,2006 ನೇ ಸಾಲಿನ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದನಾ ಕಾರ್ಯಕ್ರಮ ಅ.೨೮ ಶನಿವಾರ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಶಿವಯೋಗಿಶ್ವರ ಸ್ವಾಮಿಗಳು ಗುರುದೇವಾಶ್ರಮ ಕಾಖಂಡಕಿ, ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಕವಲಗುಡ್ದ(ಹಣಮಸಾಗರ) ಮುಖ್ಯ ಅತಿಥಿಗಳಾಗಿ ಹೊನವಾಡ ಗ್ರಾಪಂ ಪಿಡಿಒ ಸುರೇಶ ಕಳ್ಳಿಮನಿ ಆಗಮಿಸಲಿದ್ದು, ವಿಜಯಪುರದ ವಿಸಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಎಸ್ ಭಂಡಾರಿಮಠ ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ವಿದ್ಯಾರ್ಥಿ ಬಳಗಪ್ರಕಟಣೆಯಲ್ಲಿ ತಿಳಿಸಿದೆ.

Read More

ವಿಜಯಪುರ: ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಸರ್ಕಾರ ನಾಮಕರಣ ಮಾಡಲು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವದು ಸ್ವಾಗತಾರ್ಹ. ಇದಕ್ಕೆ ಬದಲಾಗಿ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಕೇಂದ್ರ ಸ್ಥಾನ ಮಾಡಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕೆಂದು ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅಭಿಪ್ರಾಯಪಟ್ಟಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಕೇಂದ್ರ ಸ್ಥಾನ ಮಾಡಿ ದೇವರಹಿಪ್ಪರಗಿ, ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕು ಒಳಗೊಂಡಂತೆ ನೂತನ ಬಸವೇಶ್ವರ ಜಿಲ್ಲೆ ಸರ್ಕಾರ ರಚನೆಗೆ ಮುಂದಾಗಬೇಕು. ನೂತನ ಬಸವೇಶ್ವರ ಜಿಲ್ಲೆ ರಚನೆಯಾದರೆ ವಿಶ್ವಗುರು ಬಸವೇಶ್ವರರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಬಸವನಬಾಗೇವಾಡಿಯು ಈ ಐದು ತಾಲೂಕುಗಳಿಗೆ ಮಧ್ಯ ಸ್ಥಾನದಲ್ಲಿ ಇರುವದರಿಂದ ಈ ತಾಲೂಕಿನ ಜನತೆಗೆ ಜಿಲ್ಲಾ ಕೇಂದ್ರಕ್ಕೆ ಬರಲು ಅನುಕೂಲ ಆಗುತ್ತದೆ.ನೂತನ ಬಸವೇಶ್ವರ ಜಿಲ್ಲೆ ರಚನೆಯಾದರೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಸರ್ವಾಂಗೀಣ ಅಭಿವೃದ್ಧಿಯಾಗುವ ಜೊತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಗುರುತಿಸುವಂತಾಗಿ…

Read More

ಮುದ್ದೇಬಿಹಾಳ: ಮಹಡಿಯಿಂದ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಪಟ್ಟಣದ ಮಹಾಂತೇಶ ನಗರದಲ್ಲಿ ವರದಿಯಾಗಿದೆ.ರಮೇಶ ಹಣಮಂತ ಕೂಚಬಾಳ ಮೃತ ದುರ್ದೈವಿ. ಬೆಳಿಗ್ಗೆ ೧೧ ಗಂಟೆ ಸುಮಾರು ಮನೆಯ ಮೇಲೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಉಪಚರಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ತೆರಳುವಾಗ ರಸ್ತೆ ಮಧ್ಯೆ ಸಾವನ್ನಪ್ಪಿದ್ದು ಸದರಿ ಮೈತನ ಮರಣದಲ್ಲಿ ಯಾವುದೇ ಸಂಶಯವಿರುವದಿಲ್ಲ ಎಂದು ಮೃತನ ಸಹೋದರ ಶಿವಪ್ಪ ಕೂಚಬಾಳ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More