ಕಾವ್ಯರಶ್ಮಿ
- ವೇದಾವತಿ ಭಟ್ಟ, ಮುಂಬೈ
ಬಾಳ ಮುಂಜಾವಿನಲಿ ತುಂಬಿದೆ ಸಡಗರ
ದಿನ ಬರುವ ಹೊಂಗಿರಣ ಬೀರುತ ಭಾಸ್ಕರ
ನವ ಭಾವಗಳು ಬರಲು ಬಾಳಲಿ ಸ್ವೀಕಾರ
ಬದುಕಿನ ಕ್ಷಣ ಕ್ಷಣವೂ ಆಗಿದೆ ಸುಂದರ
ಬಾಳ ಮುಸ್ಸಂಜೆಯಲಿ ನೆನಪಿನ ಹಂದರ
ಕಳೆದ ಸಂತಸದ ಕ್ಷಣಗಳ ಸುಂದರ ಚಿತ್ತಾರ
ಗೂಡು ತೊರೆದ ಹಕ್ಕಿಗಳ ನೆನಪು ಬೇಸರ
ಯಾರಿಲ್ಲ ಜೊತೆಗೆ ಒಂಟಿತನವೇ ಆಧಾರ