ವಿಜಯಪುರ: ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹಾನ್ ಕವಿಗಳ ಸಾಲಿಗೆ ಸೇರಿದ್ದಾರೆ. ಇವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ತಮ್ಮ ಕಾವ್ಯದ ಮೂಲಕ ಉತ್ತಮ ವಿಚಾದಧಾರೆಗಳನ್ನು ಬಿತ್ತರಿಸಿದ್ದಾರೆ. ಇವರು ನಮ್ಮ ಬದುಕಿಗೆ ಮಾದರಿಯಾಗಬೇಕಿದೆ ಎಂದು ಪ್ರಾಚಾರ್ಯೆ ಡಾ.ಆರ್ ಎಂ.ಮಿರ್ದೆ ಹೇಳಿದರು.
ಶನಿವಾರನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ರಾಮನನ್ನು ಕಾವ್ಯದ ನಾಯಕನ್ನಾಗಿಸಿಕೊಂಡು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಸಾಹಿತ್ಯ ಲೋಕದ ಅಗ್ರಜರೆನಿಕೊಂಡಿದ್ದಾರೆ. ಇವರು ತಮ್ಮ ಕಾವ್ಯದ ಮೂಲಕ ಮೌಲ್ಯಯುತವಾದ ವಿಚಾರಧಾರೆಗಳನ್ನು ಬಿತ್ತರಿಸಿದ್ದಾರೆ. ಹೀಗಾಗಿಯೇ ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತಿದೆ. ಕ್ರೌಂಚ ಪಕ್ಷಿಯ ನಿವೇದನೆಯನ್ನೇ ಕಾವ್ಯಕ್ಕೆ ಪ್ರೇರಣೆಯಾಗಿಸಿಕೊಂಡಿರುವುದು ಮಹತ್ವದ ವಿಚಾರವಾಗಿದೆ. ಇಂಥವರು ನಮ್ಮ ಬದುಕಿಗೆ ಮಾದರಿಯಾಗಿದ್ದು, ಇವರ ಆಚಾರ ವಿಚಾರ ಮತ್ತು ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಪ್ರೊ. ಎ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರಾದ ಡಾ.ಪಿ.ಎಸ್.ಪಾಟೀಲ, ಡಾ. ಶ್ರೀನಿವಾಸ ದೊಡ್ಡಮನಿ, ಡಾ.ಉಷಾದೇವಿ ಹಿರೇಮಠ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Related Posts
Add A Comment