ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಮತ
ವನ್ಯಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಬಳಸಿದವರ ಮೇಲೆ ಕ್ರಮ
ಚಿತ್ರದುರ್ಗ: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಬೆನ್ನಲ್ಲೇ ಕೆಲವೊಂದು ಮನೆಯಲ್ಲಿ ಆನೆ ದಂತದಿಂದ ಕುರ್ಚಿ ಮತ್ತು ಟೇಬಲ್ ಮಾಡಿಸಿದ್ದಾರೆ. ಅವುಗಳನ್ನು ಸಹ ಸೀಜ್ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಯಾಷನ್ ಗಾಗಿ ಹುಲಿ ಉಗುರು, ಕೂದಲು ಕಟ್ಟಿಕೊಳ್ಳೋದು ತಪ್ಪು ಎಂದು ಕಾನೂನು ರಕ್ಷಣೆ ಮಾಡೋರು ಕಾನೂನು ಮೀರಿ ವೈಭವೀಕರಿಸಿದರೆ ಕ್ರಮ ಆಗುತ್ತದೆ. ಅದು ಯಾರೇ ಎಷ್ಟೇ ದೊಡ್ಡವರು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಹುಲಿ ಸಂರಕ್ಷಣೆ ಮಾಡಿ ಅಂತ ಪ್ರಪಂಚದಲ್ಲಿ ಓಡಾಡ್ತಾ ಇದ್ದಾರೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತೀವಿ. ನೀವು ಅದರ ಉಗುರು ಧರಿಸಿ ಹುಲಿ ಸಿಂಹಗಳಿಗೆ ಅಣುಕಿಸುವ ಕೆಲಸ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.
ವನ್ಯ ಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಹಾಕುವವರ ವಿರುದ್ಧ ಕ್ರಮ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಸೀದಿಗಳಲ್ಲಿ ನವಿಲು ಗರಿ ಉಪಯೋಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ಅವರು ಸಹ ನವಿಲು ಸಾಕಿದ್ದರು. ನವಿಲು ಗರಿ ಹಾಕೊಂಡು ಕೆಲವೊಂದು ಕಡೆ ಕಾಣಿಸಿಕೊಂಡಿದ್ದಾರೆ. ಗರಿಗು, ಪ್ರಾಣ ತೆಗೆಯೋಕೂ ವ್ಯತ್ಯಾಸವಿದೆ ಎಂದಿದ್ದಾರೆ.
ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯವಾಗಿ ಆಡಳಿತಾತ್ಮಕವಾಗಿ ಅನುಕೂಲ ನೋಡಿ ಜಿಲ್ಲೆ ಮಾಡಲಿದ್ದಾರೆ. ಬೆಂಗಳೂರು ನಗರ ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಕೇವಲ ರಾಮನಗರಕ್ಕೆ ಮಾತ್ರ ಸೀಮಿತ ಆಗಿಲ್ಲ, ಜಿಲ್ಲೆ ಸೇರ್ಪಡೆ ಮಾಡೋದು ದೊಡ್ಡ ವಿಚಾರವೇ ಅಲ್ಲ. ರಾಜಕೀಯವಾಗಿ, ಆಡಳಿತಾತ್ಮಕವಾಗಿ ಹೇಗೆ ಅನುಕೂಲ ಆಗುತ್ತೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.