Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ನವೆಂಬರ 6 ರಂದು ಸೋಮವಾರ ನಡೆಯಲಿದೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಾಧಕ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ಶ್ರೀ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಅಥಣೇಶ ಅವರು ಸಾನಿಧ್ಯ ವಹಿಸಲಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮ- ಕುಲಾಧಿಪತಿ ಪ್ರೊ. ವೈ. ಎಂ. ಜಯರಾಜ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ, ಎ. ಎಸ್. ಪಾಟೀಲ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಎಸ್. ಬೆಳಗಲಿ, ಸಂಸ್ಥೆಯ ಎಲ್ಲ ನಿರ್ದೇಶಕರು, ನಾನಾ ಕಾಲೇಜುಗಳ ಪ್ರಾಚಾರ್ಯರು…
ವಿಜಯಪುರ: ಥೈರಾಯ್ಡ್ ಗ್ರಂಥಿ ರೋಗ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಥೈರಾಯ್ಡ್ ಪರೀಕ್ಷೆ ಶಿಬಿರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಎಸ್. ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು.ಬುಧವಾರ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಈ ಶಿಬಿರ ನಡೆದಯಿತು.ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ಗಿರೀಶ ಕುಲ್ಲೊಳ್ಳಿ ಮಾತನಾಡಿ, ಕಾಯಿಲೆಯ ಮುನ್ಸೂಚನೆಗಳು, ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವದ ಕುರಿತು ಅವರು ಮಾಹಿತಿ ನೀಡಿದರು. ಅಲ್ಲದೇ, ಈ ಕಾಯಿಲೆಗೆ ಸೂಕ್ತ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದರೆ ಶೀಘ್ರವಾಗಿ ಗುಣಮುಖರಾಗಬಹುದು ಎಂದು ಹೇಳಿದರು.ಡಾ. ಶೃತಿ ಶಿಳ್ಳಿನ ಮಾತನಾಡಿ, ಗಳಗಂಡ, ಹೈಪೋಥೈರಾಯ್ಡಿಸಂ ಮತ್ತು ಹೈಪರ್ ಥೈರಾಯೀಡಿಸಮ್ ರೋಗ ಲಕ್ಷಣಗಳು ಮತ್ತು ಅಯೋಡಿನ್ ಕೊರತೆಯನ್ನು ನೀಗಿಸುವ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.ಈ ಶಿಬಿರದಲ್ಲಿ ಒಟ್ಟು 128 ವಿದ್ಯಾರ್ಥಿನಿಯರಿಗೆ ಥೈರಾಯ್ಡ್ ಪರೀಕ್ಷೆ ನಡೆಸಲಾಯಿತು.ಶಸ್ತ್ರ ಚಿಕಿತ್ಸೆ ವಿಭಾಗದ ವೈದ್ಯರಾದ ಡಾ. ಶಿವರಾಜ ಮಂಗ್ಯಾಳ, ಶಾಲೆಯ ಮುಖ್ಯ ಶಿಕ್ಷಕಿ ವಿ.…
ಚೌಡೇಶ್ವರಿ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟನೆ | ಸಂಸದ ರಮೇಶ ಜಿಗಜಿಣಗಿ ಅಭಿಮತ ವಿಜಯಪುರ: ಕುಂಬಾರ ಒಂದು ಸಣ್ಣ ಸಮಾಜವಾಗಿದ್ದು, ಈ ಸಮಾಜ ಬಾಂಧವರು ಒಳ್ಳೆಯ ಜನ, ಸಂಸ್ಕಾರವಂತರು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಶುಕ್ರವಾರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಿಂದಗಿಯ ಚೌಡೇಶ್ವರಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಿಜಯಪುರ ಶಾಖೆ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಂಬಾರಿಕೆ ಜತೆಗೆ ಒಕ್ಕಲುತನ ಮಾಡಿ ಜೀವನ ಸಾಗಿಸುತ್ತಿರುವ ಸಣ್ಣ ಸಮಾಜವಾದರೂ ಎಲ್ಲರೂ ಒಗ್ಗಟ್ಟಾಗಿದ್ದೀರಿ. ಸಮಾಜದ ಬಡವರ ಏಳ್ಗೆಗಾಗಿ ಸಹಕಾರಿ ಬ್ಯಾಂಕ್ ಆರಂಭಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಸಮಾಜದ ಬಡಜನರು ಬ್ಯಾಂಕ್ ಸದುಪಯೋಗ ಪಡೆದು ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್ ಬೆಳವಣಿಗೆಗೆ ಸಹಕರಿಸಬೇಕು ಎಂದರು.ಈಗ ರಾಜಕೀಯದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿದೆ. ಒಂದು ಸಮಾಜದಿಂದ ಗೆದ್ದು ಬರುತ್ತೇವೆ, ರಾಜಕೀಯ ಮಾಡುತ್ತೇವೆ ಎಂದು ಕೆಲವರು ತಿಳಿದಿದ್ದಾರೆ. ಆದರೆ, ಎಲ್ಲ ಸಮಾಜದವರಿಂದ ರಾಜಕೀಯ ಸಾಧ್ಯ. ಅದಕ್ಕೆ ನಾನೇ ಉದಾಹರಣೆ ಎಂದರು.ಮಾಜಿ ಶಾಸಕ…
Udayarashmi kannada daily newspaper
ಕರುನಾಡು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ | ಕವಿಗೋಷ್ಠಿ | ಪದಗ್ರಹಣ ಬಸವನಬಾಗೇವಾಡಿ: ಕನ್ನಡ ಸಾಹಿತ್ಯ, ಕನ್ನಡ ಭಾಷೆ ಸಂರಕ್ಷಣೆ ಕುರಿತು ಪುಂಖಾನುಪುಂಕವಾಗಿ ಮಾತನಾಡುವವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಇಂತಹವರಿಂದ ಕನ್ನಡ ಭಾಷೆ ಬೆಳೆಸುವ ಕಾರ್ಯ ಹೇಗೆ ಆಗುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರುನಾಡು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ರಾಜ್ಯಮಟ್ಟದ ಕರುನಾಡು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಟೀಕೆ ಮಾಡುವುದರಿಂದ ಕನ್ನಡ ಭಾಷೆ ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಕೂಡಿಕೊಂಡು ಕನ್ನಡ ಭಾಷೆ ನಿರಂತರವಾಗಿ ಬೆಳೆಯುವಂತೆ ಕೈಜೋಡಿಸಬೇಕು. ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.೭೫ ರಷ್ಟು ಉದ್ಯೋಗ ಸಿಗಬೇಕೆಂದು ಸರೋಜಿನಿ ಮಹಿಷಿ ವರದಿ ಇನ್ನೂ ಅನುಷ್ಠಾನ…
ಬಸವನಬಾಗೇವಾಡಿ: ವಿವಿಧೆತೆಯಲ್ಲಿ ಏಕತೆಯನ್ನು ಸಾಧಿಸಿರುವುದು ನಮ್ಮ ದೇಶದ ಹೆಮ್ಮೆ. ನಾಡು-ನುಡಿಯ ಏಕತೆಗಾಗಿ ನಾವು ಒಗ್ಗಟ್ಟಾಗಿರಬೇಕೆಂದು ಡಾ.ಯುವರಾಜ ಮಾದನಶೆಟ್ಟಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕರ್ನಾಟಕ ನಮಗೆ ಎಲ್ಲವನ್ನು ನೀಡಿ ಪೋಷಿಸುತ್ತಿರುವುದರಿಂದ ನಾವು ನಮ್ಮ ನಾಡು-ನುಡಿ, ಗಡಿ,ಜಲ ಸೇರಿದಂತೆ ಅಖಂಡ ಕರ್ನಾಟಕದ ರಕ್ಷಣೆಗೆ ತನು-ಮನ-ಧನದಿಂದ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ನಾವು ಭದ್ರವಾದ ಮತ್ತು ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಕನ್ನಡ ನಾಡಿನ ಸೊಬಗನ್ನು ಕುರಿತು ಮಾತನಾಡಿದರು.ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಕೆಎನ್ಎಸ್ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಲಗಳಿ, ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ ಇದ್ದರು. ಪ್ರೊ.ಡಿ.ಎಸ್.ಲಗಳಿ ನಿರೂಪಿಸಿದರು. ಪ್ರೊ.ಬಿ.ಆರ್.ಮ್ಯಾಗೇರಿ ವಂದಿಸಿದರು.ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಗತವೈಭವವನ್ನು ಸಾರುವ ಐದು ಗೀತೆಗಳ ಗಾಯನ ಮಾಡಲಾಯಿತು.
ಬಸವನಬಾಗೇವಾಡಿ: ಅಂಚೆ ಇಲಾಖೆಯ ಮೂಲಕ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿಜಯಪುರ ಪೂರ್ವ ವಿಭಾಗದ ಅಂಚೆ ನಿರೀಕ್ಷಕ ಎಸ್.ಸಿ.ವಾಲಿಕಾರ ಹೇಳಿದರು.ತಾಲೂಕಿನ ಹೂವಿಹಿಪ್ಪರಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಮಂಗಳವಾರ ಅಂಚೆ ಇಲಾಖೆಯ ಆಶ್ರಯದಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಗ್ರಾಹಕರ ಅಪೇಕ್ಷೆಗನುಗುಣವಾಗಿ ಆಧುನಿಕ ತಂತ್ರಜ್ಞಾನವನ್ನು ಭಾರತೀಯ ಅಂಚೆ ಇಲಾಖೆ ಅಳವಡಿಸಿಕೊಂಡಿದೆ. ಉಳಿತಾಯ ಖಾತೆ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ, ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಸೇವೆಗಳನ್ನು ಅಂಚೆ ಇಲಾಖೆ ನೀಡುತ್ತಿದೆ. ಎಂದರು.ಭಾರತದಾದ್ಯಂತ ಪ್ರತಿ ಗ್ರಾಮದಲ್ಲಿ, ಪಟ್ಟಣ ನಗರಗಳಲ್ಲಿ ಅಂಚೆ ಸಿಬ್ಬಂದಿ ಇದ್ದು. ನಿತ್ಯ ಮನೆ ಬಾಗಿಲಿಗೆ ಹೋಗಿ ಅಂಚೆ ಸೇವೆಗಳನ್ನು ತಲುಪಿಸುತ್ತಿದ್ದಾರೆ. ಈಚೆಗೆ ಸರ್ಕಾರ ತಂದಿರುವ ಹತ್ತು ಹಲವು ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಮುಟ್ಟಿಸಲಾಗುತ್ತಿದೆ ಎಂದರು.ಗ್ರಾಮ ಪಂಚಾಯತಿ ಸದಸ್ಯ ಸಿದ್ದು ಹಾದಿಮನಿ ಮಾತನಾಡಿದರು.ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ…
ವಿಜಯಪುರ: ಜಿಲ್ಲೆಯ ಅಟಲಜೀ ಜನಸ್ನೇಹಿ ಕೇಂದ್ರಗಳಿಗೆ ಅವಶ್ಯಕವಿರುವ ೮೦ ಜಿಎಸ್‌ಎಂ ಎ೪ ಅಳತೆಯ ಪೇಪರ್‌ಗಳನ್ನು ಒದಗಿಸಲು ಆಸಕ್ತ ಏಜೆನ್ಸಿದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.ಜಿಲ್ಲೆಯ ಅವಶ್ಯಕವಿರುವ ೮೦ ಜಿಎಸ್‌ಎಂ ಎ೪ ಅಳತೆಯ ಅಂದಾಜು ೧೫೪೨ ರೀಮ್‌ಗಳ ಅವಶ್ಯಕತೆ ಇದ್ದು, ದರಗಳು ಎಲ್ಲ ತೆರಿಗಳನ್ನು ಸೇರಿ ಒಳಗೊಂಡಿರಬೇಕು. ಆಸಕ್ತರು ದಿನಾಂಕ : ೦೭-೧೧-೨೦೨೩ರೊಳಗಾಗಿ ದರಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೇವರಹಿಪ್ಪರಗಿ: ಕರ್ನಾಟಕ ರಕ್ಷಣಾ ವೇದಿಕೆ ವೃತ್ತ, ನಿವೃತ್ತ ನೌಕರರ ಸಂಘ ಸೇರಿದಂತೆ ವಿವಿಧೆಡೆಯಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.ಪಟ್ಟಣದಲ್ಲಿ ಬುಧವಾರ ರಾಜ್ಯೋತ್ಸವ ಅಂಗವಾಗಿ ನಾಡದೇವಿಯ ಭಾವಚಿತ್ರಕ್ಕೆ ಸೋಮಶೇಖರ ಹಿರೇಮಠ ಪೂಜೆ ಸಲ್ಲಿಸಿದರು.ನಂತರ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್. ಎನ್. ಬಸವರೆಡ್ಡಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ನಾವೆಲ್ಲ ಶ್ರಮಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದ್ದು, ನಾವೆಲ್ಲ ಕನ್ನಡತನ ಉಳಿಸಿ, ಬೆಳೆಸುವಲ್ಲಿ ಮುಂದಿರಬೇಕು ಎಂದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಕರವೇ ತಾಲ್ಲೂಕು ಅಧ್ಯಕ್ಷ ಮಡುಗೌಡ ಬಿರಾದಾರ, ನಗರ ಅಧ್ಯಕ್ಷ ಮುನ್ನಾ ಮಳಖೇಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ್ ತಳವಾರ, ಯುವಘಟಕದ ಅಧ್ಯಕ್ಷ ಚಂದ್ರಶೇಖರ ದಾನಗೊಂಡ, ಆಕಾಶ ಕೊಕಟನೂರ, ಪ್ರಕಾಶ ಡೋಣೂರಮಠ, ಮಂಜುನಾಥ ಇಂಡಿ, ಚೇತನ ಪಾಟೀಲ, ಸುನೀಲ ಮಣೂರ, ರಿಷಿಕೇಶ ತಳವಾರ, ಆಕಾಶ ತಾಂಬೆ, ಗುರುರಾಜ್ ಬಿರಾದಾರ, ರಾಕೇಶ ದಾನಗೊಂಡ, ಸಚೀನ ಮಾಲಗಾರ, ಸಂತೋಷ ಪಾಟೀಲ ಇದ್ದರು.ಸಂಸ್ಥೆಯ ಅಧ್ಯಕ್ಷ ವ್ಹಿ.ಕೆ. ಪಾಟೀಲ, ಮಹಾಂತೇಶ ಬೀಳಗಿ, ಎ.ಕೆ.ಆನಂದ, ಶ್ರೀಕಾಂತ ತೋಳನೂರ,…
ಮುದ್ದೇಬಿಹಾಳ: ದೇಶದ ಉಜ್ವಲ ಭವಿಷ್ಯದ ಹಿತದೃಷ್ಠಿಯಿಂದ ಹಿಂದೆ ಏನು ಅಭಿವೃದ್ಧಿ ಮಾಡಿದ್ದೇವೆ, ಮುಂದೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಿ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೆಜ್ಜೆಗಳನ್ನು ಇಟ್ಟಲ್ಲಿ ಜಗತ್ತಿನಲ್ಲಿಯೇ ತಲೆ ಎತ್ತಿ ನಿಲ್ಲುವ ರಾಜ್ಯ ಕರ್ನಾಟಕ ವಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಬಾರಿ ಬರಗಾಲ ಘೋಷಣೆಯಾಗಿದೆ. ಮಳೆಯಾಗದೇ ಬೆಳೆ ಇಲ್ಲದೇ ರೈತರು ಪರದಾಡುವಂತಾಗಿದೆ. ಸರ್ಕಾರಕ್ಕೆ ಏನು ತೊಂದರೆ ಇದೆ ಅಂತಾರೆ. ಆದರೆ ತೊಂದರೆ ಬಗ್ಗೆ ನಮಗೆ ಮಾತ್ರ ಗೊತ್ತು. ಹಿಂದಿನ ಸರ್ಕಾರಗಳು ಅಶಿಸ್ತಿನಿಂದ ಮಾಡಿದ ಕಾರ್ಯಗಳನ್ನು ನಾವು ಸರಿಪಡಿಸಬೇಕು ಎಂದರು.ತಹಶೀಲ್ದಾರ ಬಲರಾಮ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕೃಷಿ ಅಧಿಕಾರಿ ಎಸ್.ಆರ್.ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯ ಚನ್ನಪ್ಪ…
