ಬಸವನಬಾಗೇವಾಡಿ: ಅಂಚೆ ಇಲಾಖೆಯ ಮೂಲಕ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿಜಯಪುರ ಪೂರ್ವ ವಿಭಾಗದ ಅಂಚೆ ನಿರೀಕ್ಷಕ ಎಸ್.ಸಿ.ವಾಲಿಕಾರ ಹೇಳಿದರು.
ತಾಲೂಕಿನ ಹೂವಿಹಿಪ್ಪರಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಮಂಗಳವಾರ ಅಂಚೆ ಇಲಾಖೆಯ ಆಶ್ರಯದಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಗ್ರಾಹಕರ ಅಪೇಕ್ಷೆಗನುಗುಣವಾಗಿ ಆಧುನಿಕ ತಂತ್ರಜ್ಞಾನವನ್ನು ಭಾರತೀಯ ಅಂಚೆ ಇಲಾಖೆ ಅಳವಡಿಸಿಕೊಂಡಿದೆ. ಉಳಿತಾಯ ಖಾತೆ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ, ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಸೇವೆಗಳನ್ನು ಅಂಚೆ ಇಲಾಖೆ ನೀಡುತ್ತಿದೆ. ಎಂದರು.
ಭಾರತದಾದ್ಯಂತ ಪ್ರತಿ ಗ್ರಾಮದಲ್ಲಿ, ಪಟ್ಟಣ ನಗರಗಳಲ್ಲಿ ಅಂಚೆ ಸಿಬ್ಬಂದಿ ಇದ್ದು. ನಿತ್ಯ ಮನೆ ಬಾಗಿಲಿಗೆ ಹೋಗಿ ಅಂಚೆ ಸೇವೆಗಳನ್ನು ತಲುಪಿಸುತ್ತಿದ್ದಾರೆ. ಈಚೆಗೆ ಸರ್ಕಾರ ತಂದಿರುವ ಹತ್ತು ಹಲವು ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಮುಟ್ಟಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಸಿದ್ದು ಹಾದಿಮನಿ ಮಾತನಾಡಿದರು.
ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್.ಬಿರಾದಾರ ಮಾತನಾಡಿದರು.
ಹೂವಿನಹಿಪ್ಪರಗಿ ಪೋಸ್ಟ್ ಮಾಸ್ಟರ್ ಮಹಾಬಲೇಶ್ವರ ಗಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಬಾಯಿ ಭೀಮಣ್ಣ ಗಿರಿನಿವಾಸ, ಗಣ್ಯರಾದ ಶಿವಣ್ಣ ಲಗಳಿ, ಸುಭಾಸ ಆಯೆಟ್ಟಿ, ಅಬ್ಬಾಸ ಅಲಿ ಚಪ್ಪರಬಂದ, ಶ್ರೀಶೈಲ ಕನಮಡಿ, ಸಂತೋಷ ತೋಟದ ಇದ್ದರು. ಹೀನಾ ತೊದಲಬಾಗಿ ಪ್ರಾರ್ಥಿಸಿದರು. ಅಕ್ಷಯಕುಮಾರ ಬಿರಾದಾರ ಸ್ವಾಗತಿಸಿದರು. ಶ್ರೀನಿವಾಸ ಪಾಟೀಲ ನಿರೂಪಿಸಿದರು. ಅನಿಲ ದೇಸಾಯಿ ವಂದಿಸಿದರು.
Related Posts
Add A Comment