ಮುದ್ದೇಬಿಹಾಳ: ದೇಶದ ಉಜ್ವಲ ಭವಿಷ್ಯದ ಹಿತದೃಷ್ಠಿಯಿಂದ ಹಿಂದೆ ಏನು ಅಭಿವೃದ್ಧಿ ಮಾಡಿದ್ದೇವೆ, ಮುಂದೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಿ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೆಜ್ಜೆಗಳನ್ನು ಇಟ್ಟಲ್ಲಿ ಜಗತ್ತಿನಲ್ಲಿಯೇ ತಲೆ ಎತ್ತಿ ನಿಲ್ಲುವ ರಾಜ್ಯ ಕರ್ನಾಟಕ ವಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಬರಗಾಲ ಘೋಷಣೆಯಾಗಿದೆ. ಮಳೆಯಾಗದೇ ಬೆಳೆ ಇಲ್ಲದೇ ರೈತರು ಪರದಾಡುವಂತಾಗಿದೆ. ಸರ್ಕಾರಕ್ಕೆ ಏನು ತೊಂದರೆ ಇದೆ ಅಂತಾರೆ. ಆದರೆ ತೊಂದರೆ ಬಗ್ಗೆ ನಮಗೆ ಮಾತ್ರ ಗೊತ್ತು. ಹಿಂದಿನ ಸರ್ಕಾರಗಳು ಅಶಿಸ್ತಿನಿಂದ ಮಾಡಿದ ಕಾರ್ಯಗಳನ್ನು ನಾವು ಸರಿಪಡಿಸಬೇಕು ಎಂದರು.
ತಹಶೀಲ್ದಾರ ಬಲರಾಮ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕೃಷಿ ಅಧಿಕಾರಿ ಎಸ್.ಆರ್.ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯ ಚನ್ನಪ್ಪ ಕಂಠಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕನ್ನಡಪರ ಸಂಘಟನೆಗಳ ಹೋರಾಟಗಾರರಾದ ಮಂಜುನಾಥ ಕೊಪ್ಪ, ಮಲ್ಲು ಗಂಗನಗೌಡರ, ಹುಸೇನ ಮುಲ್ಲಾ, ರಾಜುಗೌಡ ತುಂಬಗಿ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಮತ್ತೀತರರು ಇದ್ದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ಸ್ವಾಗತಿಸಿದರು. ಗುಂಡು ಚೌವ್ಹಾಣ ನಿರ್ವಹಿಸಿದರು.
ನಾಡಧ್ವಜ ಪ್ರದರ್ಶನ.
ಸ್ಥಬ್ಧ ಚಿತ್ರ ಮೆರವಣಿಗೆಯ ವೇಳೆ ಕನ್ನಡಾಭಿಮಾನಿ ವಿನೋದ ಪಟಗಾರ ನೇತೃತ್ವದ ತಂಡ ೨೦೦ಮೀ ಉದ್ದದ ಕನ್ನಡ ನಾಡ ಧ್ವಜ ಪ್ರದರ್ಶಿಸಿ ಗಮನ ಸೆಳೆದರು.
Subscribe to Updates
Get the latest creative news from FooBar about art, design and business.
Related Posts
Add A Comment

