ಬಸವನಬಾಗೇವಾಡಿ: ವಿವಿಧೆತೆಯಲ್ಲಿ ಏಕತೆಯನ್ನು ಸಾಧಿಸಿರುವುದು ನಮ್ಮ ದೇಶದ ಹೆಮ್ಮೆ. ನಾಡು-ನುಡಿಯ ಏಕತೆಗಾಗಿ ನಾವು ಒಗ್ಗಟ್ಟಾಗಿರಬೇಕೆಂದು ಡಾ.ಯುವರಾಜ ಮಾದನಶೆಟ್ಟಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕರ್ನಾಟಕ ನಮಗೆ ಎಲ್ಲವನ್ನು ನೀಡಿ ಪೋಷಿಸುತ್ತಿರುವುದರಿಂದ ನಾವು ನಮ್ಮ ನಾಡು-ನುಡಿ, ಗಡಿ,ಜಲ ಸೇರಿದಂತೆ ಅಖಂಡ ಕರ್ನಾಟಕದ ರಕ್ಷಣೆಗೆ ತನು-ಮನ-ಧನದಿಂದ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ನಾವು ಭದ್ರವಾದ ಮತ್ತು ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಕನ್ನಡ ನಾಡಿನ ಸೊಬಗನ್ನು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಕೆಎನ್ಎಸ್ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಲಗಳಿ, ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ ಇದ್ದರು. ಪ್ರೊ.ಡಿ.ಎಸ್.ಲಗಳಿ ನಿರೂಪಿಸಿದರು. ಪ್ರೊ.ಬಿ.ಆರ್.ಮ್ಯಾಗೇರಿ ವಂದಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಗತವೈಭವವನ್ನು ಸಾರುವ ಐದು ಗೀತೆಗಳ ಗಾಯನ ಮಾಡಲಾಯಿತು.
Related Posts
Add A Comment