Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮನೆಯಲ್ಲಿ ವಿಜ್ಞಾನ
ವಿಶೇಷ ಲೇಖನ

ಮನೆಯಲ್ಲಿ ವಿಜ್ಞಾನ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ನಮ್ಮ ಸುತ್ತಲಿನ ಪ್ರಕೃತಿಯನ್ನು ನಾವು ಸದಾ ನೋಡುತ್ತಿದ್ದು ಅದರಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಲೇ ಇರುತ್ತೇವೆ. ಹಾಗೆಯೇ ನಮ್ಮ ಈ ಶರೀರವನ್ನು ಕೂಡ ನಾವು ಗಮನಿಸಲೇಬೇಕು. ನಮ್ಮ ದೇಹದೊಳಗಿರುವ ಅಂಗಗಳ ಕಾರ್ಯನಿರ್ವಹಣೆ, ಶರೀರದಲ್ಲಾಗುವ ಬದಲಾವಣೆಗಳನ್ನು ಕೂಡ ನಾವು ಅರಿಯಲೇಬೇಕು. ದೇಹದ ವೈಜ್ಞಾನಿಕ ಸತ್ಯದ ಅರಿವು ನಮಗೆ ಇರಬೇಕು.
ನಾವು ತಿನ್ನುಣ್ಣುವ ಆಹಾರದ ಹಿಂದೆ ನೂರಾರು ಜನರ ಶ್ರಮವಿದೆ. ನಮ್ಮ ತಟ್ಟೆಗೆ ಬಂದು ಬೀಳುವ ಆಹಾರದ ಹಿಂದೆ ಒಬ್ಬ ರೈತನ ಶ್ರಮವಿದ್ದು ಹದವಾದ ಮಳೆ ಬೀಳುವ ಮುನ್ನವೇ ತನ್ನ ಹೊಲವನ್ನು ತಯಾರಿಸಿ ಇಟ್ಟುಕೊಳ್ಳುವ ರೈತ ಒಂದು ಪುಟ್ಟ ಮಳೆಯಾದೊಡನೆ ಆಯ್ದ ಬೀಜಗಳನ್ನು ಹೊಲದಲ್ಲಿ ಬಿತ್ತುತ್ತಾನೆ. ನೀರು ಹಾಯಿಸುತ್ತಾನೆ, ಕಳೆ ತೆಗೆಯುತ್ತಾನೆ, ಹುಲುಸಾದ ಬೆಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಹಕ್ಕಿ ಪಕ್ಷಿಗಳು ತೆನೆಯನ್ನು ಹಾಳುಗೆಡವದಂತೆ, ಹುಳು ಹುಪ್ಪಟೆಗಳು ಬೀಳದಂತೆ ಗೊಬ್ಬರ, ರಾಸಾಯನಿಕಗಳನ್ನು ಬಳಸಿ ರಕ್ಷಿಸುತ್ತಾನೆ. ನಂತರ ಬೆಳೆದ ಬೆಳೆಯನ್ನು ತೆನೆ ಮುರಿದು ರಾಶಿ ಮಾಡಿ ಚೀಲಗಳಲ್ಲಿ ತುಂಬಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರುವ ಮತ್ತು ನಾವು ಅದನ್ನು ಕೊಳ್ಳುವ ಹಸನು ಮಾಡುವ ಹಿಟ್ಟು ಮಾಡಿ ಜರಡಿಯಾಡಿ ಅದನ್ನು ರೊಟ್ಟಿ ಮಾಡಿ, ಆ ರೊಟ್ಟಿ ನಮ್ಮ ತಟ್ಟೆಗೆ ಬಂದು ಬೀಳುವ ಮಧ್ಯದಲ್ಲಿ ನೂರಾರು ಜನರ ಬೆವರಿನ ಶ್ರಮವಿರುತ್ತದೆ ಆದ್ದರಿಂದ ನಾವು ನಮಗೆ ಕಿಂಚಿತ್ ಸಹಾಯ ಮಾಡಿದ ವ್ಯಕ್ತಿಯ ಕುರಿತು ಕೂಡ ಅಷ್ಟೇ ಕೃತಜ್ಞತಾ ಭಾವವನ್ನು ಯಾವಾಗಲೂ ಹೊಂದಿರಲೇಬೇಕು.
ನಮ್ಮ ಬದುಕಿನಲ್ಲಿ ಸಾಮಾನ್ಯ ಜ್ಞಾನದ ಜೊತೆ ವಿಜ್ಞಾನವು ಬೆರೆತಿದೆ. ನಮಗೆ ಗೊತ್ತಿಲ್ಲದೆ ನಾವು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಕಪ್ ನೀರಿಗೆ ಮೂರು ಚಮಚ ಚಹಾ ಪುಡಿ ಹಾಕಿ ಕುದಿಸಿದಾಗ ಚಹಾ ತುಸು ಒಗರು, ಕಹಿ ಎನಿಸುತ್ತದೆ. ಹಾಗೆಂದು ಚಹಾದಲ್ಲಿರುವ ಕಹಿಯನ್ನು ತೆಗೆಯಲು ಸಾಧ್ಯವೇ ಎಂದರೆ ವೈಜ್ಞಾನಿಕವಾಗಿ ಅದು ಕೂಡ ಸಾಧ್ಯವಿಲ್ಲ. ಕಾರಣ ಚಹಾದ ಎಸರಿನಲ್ಲಿರುವ ಒಗರುತನವನ್ನು ಕಡಿಮೆ ಮಾಡಬೇಕೆಂದರೆ ಅದಕ್ಕೆ ನೀರನ್ನು ಹಾಕಬೇಕು. ಹಾಲನ್ನು ಹಾಕಿದರೆ ಮತ್ತಷ್ಟು ತಟಸ್ಥಗೊಳಿಸಬಹುದು. ಇಲ್ಲಿ ಚಹಾ ಪುಡಿ ಆಸಿಡ್ನಂತೆ( ಆಮ್ಲ) ಕಾರ್ಯನಿರ್ವಹಿಸಿದರೆ ನೀರು( ಪ್ರತ್ಯಾಮ್ಲ) ಬೇಸನಂತೆ ವರ್ತಿಸುತ್ತದೆ ಮತ್ತು ಹಾಲು ತಟಸ್ಥತೆಯನ್ನು ತೋರುತ್ತದೆ.


ಸಾಂಬಾರ್ ನಲ್ಲಿ ಗಟ್ಟಿಯಾದ ಬೇಳೆಯ ಗಸಿ ಮತ್ತು ತರಕಾರಿ ಹೋಳುಗಳು ತಳದಲ್ಲಿ ಇದ್ದರೆ ಮೇಲೆ ತಿಳಿಯಾದ ನೀರು ನಿಂತಿರುತ್ತದೆ.. ಇದರ ಮೂಲಕ ನಾವು ಸ್ಥಿತಿಸ್ಥಾಪಕತ್ವವನ್ನು ಕಲಿಯಬಹುದು.
ಇನ್ನು ಘನಪದಾರ್ಥವಾದ ಸಿಲಿಂಡರ್ ನಲ್ಲಿ ದ್ರವೀಕೃತ ಅನಿಲವನ್ನು ಸೇರಿಸಿದ್ದು ಗ್ಯಾಸ್ ಅನ್ನು ಆನ್ ಮಾಡಿದಾಗ ಅನಿಲವು ಇಂಧನದ ರೂಪದಲ್ಲಿ ಹೊರಹೊಮ್ಮುತ್ತದೆ.. ಇದು ನಮ್ಮ ವಿಜ್ಞಾನದಲ್ಲಿ ಘನ ದ್ರವ ಮತ್ತು ಅನಿಲದ ಸ್ಥಿತಿಗಳನ್ನು ತೋರಲು ಅನುಕೂಲ ಅಲ್ಲವೇ?
ನಮ್ಮ ಆರೋಗ್ಯವನ್ನು ಕಾಯಲು ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ ಮತ್ತು ಹಸಿರು ತರಕಾರಿಗಳು ಅತ್ಯವಶ್ಯಕ.. ನಮ್ಮ ತಟ್ಟೆಯಲ್ಲಿ ಇರುವ ತರಕಾರಿ ಕಾಳು ಬೇಳೆ ಹಸಿರು ತಪ್ಪಲು ಪಲ್ಯಗಳು ನಮ್ಮ ಆಹಾರದ ತಟ್ಟೆಯಲ್ಲಿ ನಮಗೆ ಸಿಗುತ್ತವೆ ಅಲ್ಲವೇ?
ಅಡುಗೆ ಮನೆಯಲ್ಲಿ ನಾವು ಆವಿಯಾಗುವುದು, ಕುದಿಯುವುದು ಕಾಯಿಸುವುದು ಹೀಗೆ ಹತ್ತು ಹಲವು ವೈಜ್ಞಾನಿಕ ಸಂಗತಿಗಳನ್ನು ಕಲಿಯುತ್ತೇವೆ.
ಚಿಕ್ಕಂದಿನಲ್ಲಿ ಮಕ್ಕಳಿಗೆ ಪಾಠಗಳನ್ನು ನಾವು ಕಲಿಸಿಕೊಡಲೇಬೇಕು.. ನಾವು ಆಗ ಕಲಿಸಿಕೊಡದೆ ಇದ್ದರೆ ಮುಂದೆ ಮಕ್ಕಳು ತಮ್ಮ ಟೀಚರ್ ಹೇಳಿರುವುದನ್ನೆ ಸರಿ ಎಂದು ಪಾಲಕರು ಹೇಳುವ ವಿಷಯಗಳು ತಪ್ಪು ಎಂದು ಹೇಳುವ ಸಾಧ್ಯತೆಗಳು ಬಹಳ ಇರುತ್ತದೆ. ಇದಕ್ಕೆ ಕಾರಣ ಪಾಲಕರು! ಎಂದರೆ ತಪ್ಪಿಲ್ಲ. ಚಿಕ್ಕಂದಿನಲ್ಲಿ ಮಕ್ಕಳಿಗೆ ಎಲ್ಲ ವಿಷಯಗಳ ಅರಿವನ್ನು ಮೂಡಿಸಲು ಪಾಲಕರು ಪ್ರಯತ್ನಿಸಲೇಬೇಕು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ

ಸೆ.೨೪ರಂದು ೧೫ ಗ್ರಾಮಗಳಲ್ಲಿ ಪಿಂಚಣಿ ಅದಾಲತ್

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸೆ.೨೪ರಂದು ೧೫ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ: ಕನ್ನಡ ಪುಸ್ತಕಗಳ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಆರೋಗ್ಯ-ಮಕ್ಕಳ ಶಿಕ್ಷಣಕ್ಕೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ಹೊಸನಗರ ಹಳ್ಳದ ಸೇತುವೆ ಮೇಲೆ ಸಂಚಾರಕ್ಕೆ ಸಂಚಕಾರ
    In (ರಾಜ್ಯ ) ಜಿಲ್ಲೆ
  • ಬೇನಾಳ ಗ್ರಾಮಕ್ಕೆ ನುಗ್ಗಿದ ಮೊಸಳೆ ಮರಿ :ಆತಂಕದಲ್ಲಿ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ಅದ್ದೂರಿಯಾಗಿ ಗಣೇಶ ವಿಸರ್ಜನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.