ದೇವರಹಿಪ್ಪರಗಿ: ಕರ್ನಾಟಕ ರಕ್ಷಣಾ ವೇದಿಕೆ ವೃತ್ತ, ನಿವೃತ್ತ ನೌಕರರ ಸಂಘ ಸೇರಿದಂತೆ ವಿವಿಧೆಡೆಯಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಪಟ್ಟಣದಲ್ಲಿ ಬುಧವಾರ ರಾಜ್ಯೋತ್ಸವ ಅಂಗವಾಗಿ ನಾಡದೇವಿಯ ಭಾವಚಿತ್ರಕ್ಕೆ ಸೋಮಶೇಖರ ಹಿರೇಮಠ ಪೂಜೆ ಸಲ್ಲಿಸಿದರು.
ನಂತರ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್. ಎನ್. ಬಸವರೆಡ್ಡಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ನಾವೆಲ್ಲ ಶ್ರಮಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದ್ದು, ನಾವೆಲ್ಲ ಕನ್ನಡತನ ಉಳಿಸಿ, ಬೆಳೆಸುವಲ್ಲಿ ಮುಂದಿರಬೇಕು ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಕರವೇ ತಾಲ್ಲೂಕು ಅಧ್ಯಕ್ಷ ಮಡುಗೌಡ ಬಿರಾದಾರ, ನಗರ ಅಧ್ಯಕ್ಷ ಮುನ್ನಾ ಮಳಖೇಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ್ ತಳವಾರ, ಯುವಘಟಕದ ಅಧ್ಯಕ್ಷ ಚಂದ್ರಶೇಖರ ದಾನಗೊಂಡ, ಆಕಾಶ ಕೊಕಟನೂರ, ಪ್ರಕಾಶ ಡೋಣೂರಮಠ, ಮಂಜುನಾಥ ಇಂಡಿ, ಚೇತನ ಪಾಟೀಲ, ಸುನೀಲ ಮಣೂರ, ರಿಷಿಕೇಶ ತಳವಾರ, ಆಕಾಶ ತಾಂಬೆ, ಗುರುರಾಜ್ ಬಿರಾದಾರ, ರಾಕೇಶ ದಾನಗೊಂಡ, ಸಚೀನ ಮಾಲಗಾರ, ಸಂತೋಷ ಪಾಟೀಲ ಇದ್ದರು.
ಸಂಸ್ಥೆಯ ಅಧ್ಯಕ್ಷ ವ್ಹಿ.ಕೆ. ಪಾಟೀಲ, ಮಹಾಂತೇಶ ಬೀಳಗಿ, ಎ.ಕೆ.ಆನಂದ, ಶ್ರೀಕಾಂತ ತೋಳನೂರ, ಎಮ್.ಎಸ್.ಪಾಟೀಲ, ಕಾಶೀನಾಥ ಯಂಭತ್ನಾಳ ಸೇರಿದಂತೆ ಸಿಬ್ಬಂದಿ ಇದ್ದರು.
ನಿವೃತ್ತ ನೌಕರರ ಸಂಘ: ಸದಯ್ಯನಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ನಿವೃತ್ತ ಉಪನ್ಯಾಸಕ ಎಂ.ಆರ್.ಶಿರಸಂಗಿಮಠ, ಸಂಘದ ಅಧ್ಯಕ್ಷ ಚನ್ನವೀರ ಕುದರಿ ಮಾತನಾಡಿದರು.
ಎಸ್.ವ್ಹಿ.ಆಲಾಳಮಠ, ಕೆ.ಸಿ.ಮಠ, ಎಸ್.ಎಂ.ಯರನಾಳ, ಪಿ.ಜಿ.ಹಿರೇಮಠ, ಜಿ.ಆಯ್.ಒಂಟೆತ್ತೀನ, ಬಿ.ಎಂ.ಕಠಾರಿ, ಪಿ.ಎಸ್.ಮಿಂಚನಾಳ, ಬಿ.ಆರ್.ನಾಗೂರ, ಕೆ.ಕೆ.ಭಾವಿಮನಿ, ಎಸ್.ಎಂ.ಇಂಡಿ, ಜಿ.ಎ.ಪಾಟೀಲ, ಲೋಗಾವಿ, ಎಸ್.ಎನ್.ಸಾಕಳೆ, ಬಾಬುಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

