Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹಡಪದ ಅಪ್ಪಣ್ಣ ಕಂಚಿನ ಮೂರ್ತಿ ಉದ್ಘಾಟನೆ | ಹಡಪದ ಸಮಾಜದ ಜನಜಾಗೃತಿ ಸಮಾವೇಶ ಇಂಡಿ: ೧೨ ನೆಯ ಶತಮಾನದ ಸಾಮಾಜಿಕ ಅಂದೋಲನದ ನಾಯಕನಾಗಿದ್ದ ವಚನಕಾರರಲ್ಲಿ ಪ್ರಭಲರಾಗಿದ್ದ ಅಪ್ಪಣ್ಣರನ್ನು ಅಂದು ಪ್ರಮುಖವಾಗಿ ಕಾಣಿಸಿಕೊಂಡರೆ ಇಂದು ಇಂಡಿಯಲ್ಲಿ ಕಂಚಿನ ಮೂರ್ತಿಯ ಮೂಲಕ ಹಡಪದ ಅಪ್ಪಣ್ಣ ಮರು ಸ್ಥಾಪನೆಗೊಂಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಬಣ್ಣಿಸಿದರು.ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವೃತ್ತದ ಕಂಚಿನ ಮೂರ್ತಿ ಉದ್ಘಾಟನೆ ಮತ್ತು ಪೋಲಿಸ್ ಮೈದಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.ಹಡಪದ ಅಪ್ಪಣ್ಣನವರು ಸಮಾಜಕ್ಕೆ ಸಂಸ್ಕಾರ ನೀಡಿದ್ದು ಸರ್ವರನ್ನು ಪ್ರೀತಿಸುವ ಸಮಾಜದ ನಿರ್ಮಾಣದ ಕಲ್ಪನೆ ನೀಡಿದ್ದಾರೆ. ಸಮಾಜ ಬಾಂಧವರು ಶಿಕ್ಷಣ, ಸಂಘಟನೆ ಹೋರಾಟದ ಪರಿಕಲ್ಪನೆಯಲ್ಲಿ ಸಮಾಜವನ್ನು ಮುನ್ನಡೆಸಬೇಕಾಗಿದೆ. ಈಗಾಗಲೇ ಈ ಸಮಾಜ ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಪ್ರಗತೀಶೀಲ ಬ್ಯಾಂಕು ಹೊಂದಿದೆ. ಅದಲ್ಲದೆ ರಾಜ್ಯದಲ್ಲಿಯೇ ಕಂಚಿನ ಮೂರ್ತಿ ಮೂರ್ತಿ ಸ್ಥಾಪಿಸಿದ್ದು ಇಂಡಿಯಲ್ಲಿ ಮಾತ್ರ ಎಂದರು.ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಮಾತನಾಡಿದರು.ಗುರುದೇವ…
ಆರ್ಗಾನೋ ಪಾಸ್ಪರಸ್ ಕಂಪೌಂಡ್‌ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು ವಿಜಯಪುರ: “ಇನ್ನೇನು ನನ್ನ ಮಗನ ಬದುಕು ಇಲ್ಲಿಗೆ ಮುಗಿಯಿತು ಎಂದುಕೊಂಡು ಕಣ್ಣೀರು ಹಾಕುತ್ತ ಈ ಆಸ್ಪತ್ರೆಗೆ ಬಂದಾಗ “ಕಾಯುವುದು ಕೊಲ್ಲುವುದು ಅದು ಮೇಲಿನವನ ಕೈಯಲ್ಲಿದೆ. ಬದುಕುತ್ತಾನೆ ಎನ್ನುವ ಭರವಸೆಯಿಂದ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಮುಂದಿನ ಭಗವಂತನ ಮೇಲೆ ಬಿಡೋಣ” ಎಂದು ಹೇಳಿದಾಗ ನನ್ನ ಮಗ ಉಳಿಯಬಹುದು ಎನ್ನುವ ಒಂದು ಸಣ್ಣ ಭರವಸೆಯಲ್ಲಿ ಈ ದಾಖಲು ಮಾಡಿದೆ. ನಡೆದಾಡುವ ದೇವರ ಹೆಸರಲ್ಲಿ ನಿರ್ಮಾಣ ಮಾಡಿದ ಈ ಆಸ್ಪತ್ರೆಯು ನನ್ನ ಮಗನಿಗೆ ಪುನರ್ಜನ್ಮ ನೀಡಿದೆ. ಸಾವಿನ ಮನೆಯ ಬಾಗಿಲಿನ ಮುಂದೆ ನಿಂತು ಕದ ತಟ್ಟುತ್ತಲಿದ್ದವನನ್ನು ಬದುಕಿನ ಅಂಗಳಕ್ಕೆ ತಂದು ಬಿಟ್ಟ ಆಸ್ಪತ್ರೆಯ ವೈದ್ಯರಿಗೆ ಹಾಗೂ ಇಲ್ಲಿನ ಸಿಬ್ಬಂಧಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ. ಬಹುತೇಕ ಸತ್ತೇ ಹೋದವನನ್ನು ಬದುಕಿಸುವ ಶಕ್ತಿ ಈ ಆಸ್ಪತ್ರೆಗಿದೆ. ಪೂಜ್ಯರ ಆಶೀರ್ವಾದಕ್ಕಿದೆ” ಎಂದು ಕಣ್ಣಂಚಿಂದ ಜಿನುಗುತ್ತಲಿದ್ದ ಹನಿಯನ್ನು ಒರೆಸಿಕೊಳ್ಳುತ್ತ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆಯ ಕುರಿತು ರೋಗಿಯ ತಂದೆ…
ವಿಜಯಪುರ: ದೀಪಾವಳಿ ಹಬ್ಬದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರಾ ಮಹೋತ್ಸವ ಜರುಗಲಿದೆ.ಶನಿವಾರ ದಿ:11 ರಂದು ನೀರು ತುಂಬುವ ಹಬ್ಬ,ಸಂಜೆ ಹೂವಿನ ಹಚ್ಚಡ, ದೀವಟಿಗೆ ಆರತಿ ಕಾರ್ಯಕ್ರಮ ಇರುವದು. ದಿ:10 -11 ರಂದು ಲೋಡೋ ಆಟ, ಟ್ರ್ಯಾಕ್ಟರ್ ರೇಸ್ ನಡೆಯಲಿದೆ.ರವಿವಾರ ದಿ:12ರಂದು ಬೆಳಿಗ್ಗೆ ಗ್ರಾಮದ ಅಕ್ಕಮಹಾದೇವಿ ಗುಡಿಯಿಂದ 8 ಕಿ ಮೀ ಗುಡ್ಡಗಾಡು ಓಟದ ಸ್ಪರ್ಧೆ(ಮಿನಿ ಮ್ಯಾರಥಾನ್) ಇದೆ. ಈ ಓಟದ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಇದೆ. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಭೀರದೇವರ ದೇವಸ್ಥಾನದಲ್ಲಿ ಕರಜಗಿಯ ಬರಮದೇವರ ಹಾಗೂ ಬಾಬಾನಗರದ ಸಿದ್ದೇಶ್ವರ ಡೊಳ್ಳಿನ ಸಂಘಗಳಿಂದ ಡೊಳ್ಳಿನ ಪದಗಳು ಇವೆ. ಸಂಜೆ ಕಗ್ಗೋಡ ಹಾಗೂ ಗೂಳಪ್ಪ ದೇವರ ಪಲ್ಲಕ್ಕಿ ಆಗಮನವಾಗುವುದು.ಸೋಮವಾರ ದಿ:13 ರಂದು ನಸುಕಿನ 3 ಗಂಟೆಗೆ ಗೂಗದಡ್ಡಿಯಿಂದ ಶ್ರೀ ಮಹಾಲಕ್ಷ್ಮೀ ಪಲ್ಲಕ್ಕಿ ಆಗಮನ, ಬೆಳಿಗ್ಗೆ 4 ಗಂಟೆಗೆ ಶ್ರೀ ಭೀರದೇವರ ಶೃಂಗಾರ ಚೌಕಿಯೊಂದಿಗೆ ಭಕ್ತರ ಮನೆ ಮನೆಗೆ ದರ್ಶನ ಕೊಡುತ್ತಾ…
ವಿಜಯಪುರ: ಬಿ.ಎಲ್.ಡಿ.ಈ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ವಿಶ್ವ ಆಹಾರ ದಿನಾಚರಣೆಯ ಆಂಗವಾಗಿ ನಗರದ ಸರಕಾರಿ ಮರಾಠಿ ಗಂಡು ಮಕ್ಕಳ ಶಾಲೆ ಸಂಖ್ಯೆ 1 ಮತ್ತು ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 11 ರಂದು ಬುಧವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಸಂಹಿತಾ ಸಿದ್ದಾಂತ ವಿಭಾಗದ ಮುಖ್ಯಸ್ಥೆ ಪ್ರೊ. ರೇಣುಕಾ ತೆನಹಳ್ಳಿ, ಪ್ರತಿನಿತ್ಯ ಪೌಷ್ಠಿಕ ಆಹಾರ ಸೇವನೆ ವಿಧಾನ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.ಕೌಮಾರಭೃತ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಬೆನಕಟ್ಟಿ ಅವರು ಮಕ್ಕಳ ಬೆಳವಣಿಗೆ ಬಗ್ಗೆ ಪೂರಕವಾದ ಪೌಷ್ಠಿಕಾಂಶಯುಕ್ತ ಆಹಾರ ಮಹತ್ವದ ಕುರಿತು ಮಾತನಾಡಿದರು.ಸಂಹಿತಾ ಸಿದ್ದಾಂತ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಯೋಜನಾಧಿಕಾರಿ ಡಾ. ರಾವಸಾಹೇಬ ದೇಶಮುಖ ಅವರು ವಿಶ್ವ ಆಹಾರ ದಿನದ ಅಂಗವಾಗಿ ಪೌಷ್ಠಿಕ ಆಹಾರ ಮತ್ತು ಸ್ವಚ್ಚ ಪರಿಸರ ಹಾಗೂ ಮಕ್ಕಳ ಬೆಳವಣಿಗೆಯ ವಿಷಯದ ಕುರಿತು ನೀರೇ ಜೀವನ…
Udayarashmi kannada daily newspaper
ಪ್ರಯಾಣಿಕರಿಗೆ ಆಸನಗಳ ಕೊರತೆ | ಗಬ್ಬೆದ್ದ ಶೌಚಾಲಯ | ಕುಡಿಯಲು ನೀರಿಲ್ಲ | ಸ್ವಚ್ಛತೆ ಇಲ್ಲಿ ಮರೀಚಿಕೆ – ರಶ್ಮಿ ನೂಲಾನವರಸಿಂದಗಿ: ಪಟ್ಟಣದಲ್ಲಿರುವ ಹೈಟೆಕ್ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು ಪ್ರಯಾಣಿಕರು ಅಗತ್ಯ ಸೌಲಭ್ಯಗಳಿಲ್ಲದೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಹೆಸರಿಗೆ ಮಾತ್ರ ಹೈಟೆಕ್ ಆಗಿರುವ ಈ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂಡಲು ಆಸನಗಳ ಕೊರತೆಯಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ನಿತ್ಯವೂ ನೆಲದಲ್ಲಿನ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸಿಂದಗಿ ಬಸ್ ನಿಲ್ದಾಣದಲ್ಲಿ ಬಳಗಾನೂರ, ಹರನಾಳ ಮಾರ್ಗವಾಗಿ ಸಂಚರಿಸುವ ಬಸ್ ನಿಲ್ಲುವ ಸ್ಥಳದೆಡೆಗೆ ಮೊದಲು ಇದ್ದ ಕೆಲವು ಆಸನಗಳು ಕಿತ್ತುಹೋಗಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ನಿಲ್ದಾಣದ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಅನೇಕರು ನಿಂತುಕೊಂಡಿರುತ್ತಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಆಸನಗಳ ವ್ಯವಸ್ಥೆ ಮಾಡಿಸುತ್ತಿಲ್ಲ ಎಂದು ಮಹಿಳೆಯರು, ಹಿರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯ: ನಿಲ್ದಾಣದಲ್ಲಿ ಕೇವಲ ಶಹಾಪೂರ, ಗುತ್ತರಗಿ ಕಡೆ ಬಸ್ ನಿಲ್ಲುವ ಸ್ಥಳದಲ್ಲಿ ಮಾತ್ರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ದಿನದಿಂದ ದಿನಕ್ಕೆ…
ಸಿಂದಗಿ: ಸುಮಾರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಪ್ರೋತ್ಸಾಹ ಧನ ವಿತರಣೆ ಮಾಡುವಲ್ಲಿ ಜರುಗಿದ ಲಕ್ಷಾಂತರ ಹಣ ಹಂಚಿಕೆಯ ತಾರತಮ್ಯ ಮತ್ತು ಅವ್ಯವಹಾರ ಮಾಡಿದವರ ಮೇಲೆ ಕಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಮಾಡಿಸುವಂತೆ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜರುಗಿದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಧಿಕಾರವನ್ನು ವಹಿಸಿಕೊಂಡ ಡಾ.ಎ.ಎ ಮಾಗಿ ಅವರಿಗಿಂತಲೂ ಹಿಂದಿನ ತಾಲೂಕಾಸ್ಪತ್ರೆಯ ಸಿಎಂಒ ಅವರ ಅಧಿಕಾರವಧಿಯಲ್ಲಿ ಆಗಿರುವ ಸಿಬ್ಬಂದಿಗಳಿಗೆ ವಿತರಣೆ ಮಾಡುವ ಪ್ರೋತ್ಸಾಹ ಧನದಲ್ಲಿ ಮಾಡಿರುವ ಅವ್ಯವಹಾರ ಹಾಗೂ ಅವರ ಆಡಳಿತದಲ್ಲಿ ಆಗಿರುವ ಅವ್ಯವಸ್ಥೆ ಹಾಗೂ ಅದರಲ್ಲಿ ಶಾಮಿಲಾಗಿರುವವರನ್ನು ಅಮಾನತ್ತು ಮಾಡಿ. ತನಿಖೆ ಪೂರ್ಣಗೊಳ್ಳುವವರೆಗೂ ಅವರನ್ನು ಹೋರಗಿಟ್ಟು ತನಿಖೆ ನಡೆಸುವಂತೆ ಎಸಿ ಅಬೀದ್ ಗದ್ಯಾಳ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಹಾಗೂ ಸಿಎಂಒ ಡಾ.ಎ.ಎ ಮಾಗಿ ಅವರಿಗೆ ಸೂಚನೆ ನೀಡಿದರು.ಈ ವೇಳೆ ಸಭೆಯಲ್ಲಿ ಹಾಜರಿದ್ದ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿ.ಆರ್ ಹೊಟಗಿಕರ…
ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡದಲ್ಲಿ ಭೀಮಪ್ಪ ಬಾಳಪ್ಪ ಬಗಲಿಯವರ ಅತ್ಯಾಧುನಿಕ ಡಿಜಿಟಲ್ ನೂತನ ಮನಸ್ಸು ಗ್ರಂಥಾಲಯದ ಉದ್ಘಾಟನೆ ಹಾಗೂ ಇಷ್ಟಲಿಂಗ ಮಹಾಪೂಜೆ ನಡೆಯಿತು.ಈ ಸಂದರ್ಭ ಶ್ರೀಶೈಲ ಜಗದ್ಗುರು ಶ್ರೀಮದ್ ಗಿರಿರಾಜ್ ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿ ಧಾರ್ಮಿಕ ಆಚರಣೆಗಳು ಆದರ್ಶಪ್ರಾಯವಾಗಿವೆ. ಸಮುದಾಯದವರಿಗೆ ಶಿವದೀಕ್ಷಾ ಸಂಸ್ಕಾರ ನೀಡಿದರೆ ಉತ್ತಮ ಬದುಕು ರೂಪಿಸಿಕೊಳ್ಳುವ ಜೊತೆಗೆ ಸಂಸ್ಕಾರಯುತವಾಗಿ ಬದುಕುತ್ತಾರೆ ಎಂದರು.ಆಧುನಿಕತೆಯಲ್ಲಿ ಧರ್ಮದ ಉಳಿವಿಗೆ ಪ್ರತಿಯೊಬ್ಬರೂ ಯತ್ನಿಸಬೇಕು. ಕುಟುಂಬದಲ್ಲಿ ಆಚಾರ-ವಿಚಾರ, ದೈವ ಭಕ್ತಿ, ಗುರು-ಹಿರಿಯರಿಗೆ ಗೌರವ ನೀಡುವ ಬೋಧನೆಯ ಅಗತ್ಯ ಇದೆ. ಧರ್ಮದ ದಿಕ್ಸೂಚಿ ಇಲ್ಲದೆ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಪ್ರಪಂಚದ ಹೊರಗೆ ಬಿಸಿಲಿರಲಿ, ನೆರಳಿರಲಿ ಆದರೆ ಮನುಷ್ಯನ ಮನದಲ್ಲಿ ಪ್ರಶಾಂತಿ ನೆಲಸಿರಲಿ ಎಂದರು.ಕಾರ್ಯಕ್ರಮದ ನೇತೃತ್ವವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಡವಲಗಾ ವಹಿಸಿದ್ದರು. ಶಿವಬಸವ ಶಿವಾಚಾರ್ಯರು ಹಿರೇಮಠ ತಿಕೋಟಾ, ರೇಣುಕ ಶಿವಾಚಾರ್ಯರು ಹಿರೇಮಠ ಅರ್ಜುಣಗಿ ಜೈನಾಪುರ,ಸಮ್ಮುಖ ವಹಿಸಿದ್ದರು.ವಿಜಯಕುಮಾರ ಹಿರೇಮಠ, ಎಸ್ ಎನ್ ಮಂಗೊಂಡ ಮುಖ್ಯ ಅತಿಥಿಗಳಾಗಿದ್ದರು.ಇದೇ ವೇಳೆ ಭೀಮಪ್ಪ ಬಗಲಿ,…
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ತಾಪಂ ಇಓ ರಾಮೋಜಿ ಅಗ್ನಿ ಅವರನ್ನು ಗ್ರಾಪಂ ಅಧ್ಶಕ್ಷರ ಪ್ರತಿನಿಧಿ,ಕಾಂಗ್ರೆಸ್ ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ ಸನ್ಮಾನಿಸಿದರು.ಈ ವೇಳೆ ತಾಪಂ ಇಡಿ ನಿತ್ಶಾನಂದ ಯಲಗೋಡ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಯಂಕಂಚಿ ಪಿಡಿಒ ಸಂಜೀವಕುಮಾರ ದೊಡ್ಡಮನಿ,ಸಾಹೇಪಟೇಲ ಮುರಡಿ, ದಲಿತ ಮುಖಂಡ ಹಣಮಂತ ಯಂಟಮಾನ, ಮಲ್ಲು ಕೆಂಭಾವಿ ಇದ್ದರು.
ವಿಜಯಪುರ: ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಬಗ್ಗೆ ಸಾರ್ವಜನಿಕರು ಅರಿತುಕೊಂಡು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೇಳಿದರು.ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ, ವಿಜಯಪುರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವ ಕೇಂದ್ರ, ವಿಜಯಪುರ ಇವರುಗಳ ಸಹಯೋಗದಲ್ಲಿ ನಗರದ ಪಿ ಡಿ ಜೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ, ಏಕ ಭಾರತ ಶ್ರೇಷ್ಠ ಭಾರತ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಕೇಂದ್ರ ಸರ್ಕಾರದ ಯೋಜನೆಗಳು, ಪ್ರಧಾನಮಂತ್ರಿಯವರ ದೂರದರ್ಶಿತ್ವ-೨೦೪೭, ವೋಕಲ್ ಪಾರ್ ಲೋಕಲ್ ಹಾಗೂ ಇತರೆ ಯೋಜನೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ದೇಶ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ. ವಿಜಯಪುರ ಜಿಲ್ಲೆ ಉತ್ತಮ ರಸ್ತೆ ಸೇರಿದಂತೆ ಹೆದ್ದಾರಿಗಳನ್ನು…
