ಸಿಂದಗಿ: ಸುಮಾರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಪ್ರೋತ್ಸಾಹ ಧನ ವಿತರಣೆ ಮಾಡುವಲ್ಲಿ ಜರುಗಿದ ಲಕ್ಷಾಂತರ ಹಣ ಹಂಚಿಕೆಯ ತಾರತಮ್ಯ ಮತ್ತು ಅವ್ಯವಹಾರ ಮಾಡಿದವರ ಮೇಲೆ ಕಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಮಾಡಿಸುವಂತೆ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜರುಗಿದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಧಿಕಾರವನ್ನು ವಹಿಸಿಕೊಂಡ ಡಾ.ಎ.ಎ ಮಾಗಿ ಅವರಿಗಿಂತಲೂ ಹಿಂದಿನ ತಾಲೂಕಾಸ್ಪತ್ರೆಯ ಸಿಎಂಒ ಅವರ ಅಧಿಕಾರವಧಿಯಲ್ಲಿ ಆಗಿರುವ ಸಿಬ್ಬಂದಿಗಳಿಗೆ ವಿತರಣೆ ಮಾಡುವ ಪ್ರೋತ್ಸಾಹ ಧನದಲ್ಲಿ ಮಾಡಿರುವ ಅವ್ಯವಹಾರ ಹಾಗೂ ಅವರ ಆಡಳಿತದಲ್ಲಿ ಆಗಿರುವ ಅವ್ಯವಸ್ಥೆ ಹಾಗೂ ಅದರಲ್ಲಿ ಶಾಮಿಲಾಗಿರುವವರನ್ನು ಅಮಾನತ್ತು ಮಾಡಿ. ತನಿಖೆ ಪೂರ್ಣಗೊಳ್ಳುವವರೆಗೂ ಅವರನ್ನು ಹೋರಗಿಟ್ಟು ತನಿಖೆ ನಡೆಸುವಂತೆ ಎಸಿ ಅಬೀದ್ ಗದ್ಯಾಳ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಹಾಗೂ ಸಿಎಂಒ ಡಾ.ಎ.ಎ ಮಾಗಿ ಅವರಿಗೆ ಸೂಚನೆ ನೀಡಿದರು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿ.ಆರ್ ಹೊಟಗಿಕರ ಅವರನ್ನು ಶಾಸಕರು, ಸಿಬ್ಬಂದಿಗೆ ನೀಡುವ ವಾರ್ಷೀಕ ಪ್ರೋತ್ಸಾಹ ಧನವನ್ನು ಸಮಾನವಾಗಿ ಹಂಚಿಕೆ ಮಾಡದ್ದಕ್ಕೆ ತರಾಟೆಗೆ ತೆಗೆದುಕೊಂಡರು.
ಕೆಲ ಸಿಬ್ಬಂದಿ ಶಾಸಕರ ಎದುರಿಗೆ ನಾವು ಕಳೆದ ೫-೬ ವರ್ಷಗಳಿಂದ ಪ್ರೋತ್ಸಾಹ ಧನವೇ ತೆಗೆದುಕೊಂಡಿಲ್ಲ ಎಂದು ದೂರಿದರು.
ಆಸ್ಪತ್ರೆಯ ಆಪರೇಷನ್ ಥೇಟರ್‌ನಲ್ಲಿ ವಿದ್ಯುತ್ ಬಲ್ಬ್ಗಳನ್ನು ಅಳವಡಿಸಿ, ಆಸ್ಪತ್ರೆಯ ಮೇಲ್ಚಾವಣಿ, ಒಳಚರಂಡಿ, ವಿದ್ಯುತ್ ಸಮಸ್ಯೆ, ಶೌಚಾಲಯ ಮತ್ತು ಸ್ನಾನದ ಕೋಣೆಗಳನ್ನು ನಿರ್ಮಾಣ ಮಾಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ಪಿಎಸ್‌ಐ ಭೀಮಪ್ಪ ರಬಕವಿ ಡಾ.ಎಸ್.ಎನ್.ದೇಶಮುಖ, ಡಾ.ಎಸ್.ಎಂ.ಗುಣಕಿ ಎಮ್.ಆರ್.ಬಡಿಗೇರ, ರಾಜಶೇಖರ ನರಗೋದಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

