ವಿಜಯಪುರ: ದೀಪಾವಳಿ ಹಬ್ಬದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರಾ ಮಹೋತ್ಸವ ಜರುಗಲಿದೆ.
ಶನಿವಾರ ದಿ:11 ರಂದು ನೀರು ತುಂಬುವ ಹಬ್ಬ,ಸಂಜೆ ಹೂವಿನ ಹಚ್ಚಡ, ದೀವಟಿಗೆ ಆರತಿ ಕಾರ್ಯಕ್ರಮ ಇರುವದು. ದಿ:10 -11 ರಂದು ಲೋಡೋ ಆಟ, ಟ್ರ್ಯಾಕ್ಟರ್ ರೇಸ್ ನಡೆಯಲಿದೆ.
ರವಿವಾರ ದಿ:12ರಂದು ಬೆಳಿಗ್ಗೆ ಗ್ರಾಮದ ಅಕ್ಕಮಹಾದೇವಿ ಗುಡಿಯಿಂದ 8 ಕಿ ಮೀ ಗುಡ್ಡಗಾಡು ಓಟದ ಸ್ಪರ್ಧೆ(ಮಿನಿ ಮ್ಯಾರಥಾನ್) ಇದೆ. ಈ ಓಟದ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಇದೆ. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಭೀರದೇವರ ದೇವಸ್ಥಾನದಲ್ಲಿ ಕರಜಗಿಯ ಬರಮದೇವರ ಹಾಗೂ ಬಾಬಾನಗರದ ಸಿದ್ದೇಶ್ವರ ಡೊಳ್ಳಿನ ಸಂಘಗಳಿಂದ ಡೊಳ್ಳಿನ ಪದಗಳು ಇವೆ. ಸಂಜೆ ಕಗ್ಗೋಡ ಹಾಗೂ ಗೂಳಪ್ಪ ದೇವರ ಪಲ್ಲಕ್ಕಿ ಆಗಮನವಾಗುವುದು.
ಸೋಮವಾರ ದಿ:13 ರಂದು ನಸುಕಿನ 3 ಗಂಟೆಗೆ ಗೂಗದಡ್ಡಿಯಿಂದ ಶ್ರೀ ಮಹಾಲಕ್ಷ್ಮೀ ಪಲ್ಲಕ್ಕಿ ಆಗಮನ, ಬೆಳಿಗ್ಗೆ 4 ಗಂಟೆಗೆ ಶ್ರೀ ಭೀರದೇವರ ಶೃಂಗಾರ ಚೌಕಿಯೊಂದಿಗೆ ಭಕ್ತರ ಮನೆ ಮನೆಗೆ ದರ್ಶನ ಕೊಡುತ್ತಾ ಗಂಗೆ ಸೀತಾಳಕ್ಕೆ ಹೋಗಿ, ಅಲ್ಲಿ ಪೂಜಾ ಮುಗಿಸಿಕೊಂಡು ಬಜಾರಕ್ಕೆ ಆಗಮನವಾಗಿ ಭಕ್ತರಿಗೆ ದರ್ಶನ ಕೊಡುವದು.ನಂತರ ಸಕಲ ವಾದ್ಯ ಮೇಳದೊಂದಿಗೆ ಗುಡಿಗೆ ಬರುವುದು. ಮಧ್ಯಾನ್ಹ 3 ಗಂಟೆಗೆ ಶಾಲಾ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ ಜರುಗಲಿದೆ. ಅದೇ ದಿನ ಸಂಜೆ 7ಕ್ಕೆ ಪರಮಾನಂದ ಗುಡಿಯಲ್ಲಿ ಗೂಗದಡ್ಡಿಯ ಲಾಯಮ್ಮದೇವಿ ಹಾಗೂ ಹರನಾಳದ ಅಮೋಘಸಿದ್ದೇಶ್ವರ ಸಂಘದಿಂದ ಡೊಳ್ಳಿನ ಪದಗಳು ನಡೆಯುವದು.
ಮಂಗಳವಾರ ದಿ:14 ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಪರಮಾನಂದ ದೇವರ ಶೃಂಗಾರ ಚೌಕಿಯೊಂದಿಗೆ ಸಾರವಾಡ ಗೊಂಬೆ ಕುಣಿತ, ಗೂಗದಡ್ಡಿಯ ಲಾಯಮ್ಮದೇವಿ ಡೊಳ್ಳಿನ ಸಂಘದಿಂದ ವಿಶೇಷ ಡೊಳ್ಳಿನ ವಾಲಗದೊಂದಿಗೆ ಭಕ್ತರ ಮನೆಗೆ ಭೇಟಿ ಕೊಡುತ್ತ ಗಂಗೆ ಸೀತಾಳಕ್ಕೆ ಹೋಗುವುದು. ಅಲ್ಲಿ ಪೂಜಾ ವಿಧಿವಿಧಾನ ಮುಗಿಸಿಕೊಂಡು ಮುತ್ತಪ್ಪದೇವರ ಗುಡಿ ಮುಂದೆ ಹೇಳಿಕೆ ನುಡಿದು, ಬಜಾರಕ್ಕೆ ಆಗಮನವಾಗಿ ಭಕ್ತರಿಗೆ ದರ್ಶನ ಕೊಟ್ಟು, ದೇವಸ್ಥಾನಕ್ಕೆ ಬರುವುದು. ಸಂಜೆ 4 ಗಂಟೆಗೆ 18 ರಿಂದ 40 ವರ್ಷದವರಿಗೆ ಜಂಗಿ ಕುಸ್ತಿಗಳು ನಡೆಯುವುದು. ಅಂದು ರಾತ್ರಿ 9 ಕ್ಕೆ ಶ್ರೀ ವಿಜಯಲಕ್ಷ್ಮೀ ನಾಟ್ಯ ಸಂಘದಿಂದ ದುಡ್ಡು ದಾರಿ ಬಿಡಿಸಿತು ಎಂಬ ಸಾಮಾಜಿಕ ನಾಟಕ ನಡೆಯಲಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಾತ್ರಾ ಕಮೀಟಿ ಅಧ್ಯಕ್ಷ ಪ್ರಭುಲಿಂಗ ಹಂಡಿ ತಿಳಿಸಿದ್ದಾರೆ.
Related Posts
Add A Comment