ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡದಲ್ಲಿ ಭೀಮಪ್ಪ ಬಾಳಪ್ಪ ಬಗಲಿಯವರ ಅತ್ಯಾಧುನಿಕ ಡಿಜಿಟಲ್ ನೂತನ ಮನಸ್ಸು ಗ್ರಂಥಾಲಯದ ಉದ್ಘಾಟನೆ ಹಾಗೂ ಇಷ್ಟಲಿಂಗ ಮಹಾಪೂಜೆ ನಡೆಯಿತು.
ಈ ಸಂದರ್ಭ ಶ್ರೀಶೈಲ ಜಗದ್ಗುರು ಶ್ರೀಮದ್ ಗಿರಿರಾಜ್ ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿ ಧಾರ್ಮಿಕ ಆಚರಣೆಗಳು ಆದರ್ಶಪ್ರಾಯವಾಗಿವೆ. ಸಮುದಾಯದವರಿಗೆ ಶಿವದೀಕ್ಷಾ ಸಂಸ್ಕಾರ ನೀಡಿದರೆ ಉತ್ತಮ ಬದುಕು ರೂಪಿಸಿಕೊಳ್ಳುವ ಜೊತೆಗೆ ಸಂಸ್ಕಾರಯುತವಾಗಿ ಬದುಕುತ್ತಾರೆ ಎಂದರು.
ಆಧುನಿಕತೆಯಲ್ಲಿ ಧರ್ಮದ ಉಳಿವಿಗೆ ಪ್ರತಿಯೊಬ್ಬರೂ ಯತ್ನಿಸಬೇಕು. ಕುಟುಂಬದಲ್ಲಿ ಆಚಾರ-ವಿಚಾರ, ದೈವ ಭಕ್ತಿ, ಗುರು-ಹಿರಿಯರಿಗೆ ಗೌರವ ನೀಡುವ ಬೋಧನೆಯ ಅಗತ್ಯ ಇದೆ. ಧರ್ಮದ ದಿಕ್ಸೂಚಿ ಇಲ್ಲದೆ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಪ್ರಪಂಚದ ಹೊರಗೆ ಬಿಸಿಲಿರಲಿ, ನೆರಳಿರಲಿ ಆದರೆ ಮನುಷ್ಯನ ಮನದಲ್ಲಿ ಪ್ರಶಾಂತಿ ನೆಲಸಿರಲಿ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಡವಲಗಾ ವಹಿಸಿದ್ದರು. ಶಿವಬಸವ ಶಿವಾಚಾರ್ಯರು ಹಿರೇಮಠ ತಿಕೋಟಾ, ರೇಣುಕ ಶಿವಾಚಾರ್ಯರು ಹಿರೇಮಠ ಅರ್ಜುಣಗಿ ಜೈನಾಪುರ,
ಸಮ್ಮುಖ ವಹಿಸಿದ್ದರು.
ವಿಜಯಕುಮಾರ ಹಿರೇಮಠ, ಎಸ್ ಎನ್ ಮಂಗೊಂಡ ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆ ಭೀಮಪ್ಪ ಬಗಲಿ, ವಿಜಯಕುಮಾರ ಬಗಲಿ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು.
ಹೊನವಾಡದ ಸಮಸ್ತ ಗುರು ಹಿರಿಯರು, ನಾಗರಿಕರು ಇದ್ದರು.
Subscribe to Updates
Get the latest creative news from FooBar about art, design and business.
ಧರ್ಮದ ದಿಕ್ಸೂಚಿ ಇಲ್ಲದಿದ್ರೆ ಬದುಕಿಗೆ ಅರ್ಥವಿಲ್ಲ :ಶ್ರೀಶೈಲ ಶ್ರೀ
Related Posts
Add A Comment

