Author: editor.udayarashmi@gmail.com

ವಿಜಯಪುರ: ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿ ಟಿಎಸ್‌ಎಸ್ ಸಂಘಟನೆಯ ವತಿಯಿಂದ ಮೈಸೂರು ಹುಲಿ ಟಿಪ್ಪುಸುಲ್ತಾನ ಅವರ ಜಯಂತಿ ಕಾರ್ಯಕ್ರಮ ನ.೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಈ ನಿಮಿತ್ಯ ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗುವುದು.ಈ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡ ಹಮೀದ್ ಮುಶ್ರೀಫ್, ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಟಿಎಸ್‌ಎಸ್ ಇರಫಾನ ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

✍️ಅರ್ಚನಾ. ಕೆ ಕನಸಿನರಮನೆಯಲ್ಲಿ ನಿನ್ನದೇ ಕನವರಿಕೆತಿಳಿಸಲಿ ಹೇಗೆ ಹೃದಯದ ಚಡಪಡಿಕೆ ಹೃದಯ ಮಂದಿರದಿ ನಿನ್ನದೇ ಪ್ರೇಮಪೂಜೆಎಂದಿಗೂ ನೀಡದಿರು ನಿನ್ನಗಲಿಕೆಯ ಸಜೆ ಹೃದಯ ಮಿಡಿಯುವುದೇ ನಿನ್ನೊಲವಿಗಾಗಿಅನುಗಾಲವು ಜತೆಯಿರು ಒಲವೇ ಉಸಿರಾಗಿ ಉಸಿರು ನಿಂತರು ನಿನ್ನೆಸಿರಿನ ಮಿಡಿತ ನಿಲ್ಲದುಸಾವಿನಾಚೆಗೂ ಸಾಗುವ ಭಾವಬಂಧನವಿದು

Read More

ನವೆಂಬರ್ ಒಂದರಂದು ಕರ್ನಾಟಕದ, ಕನ್ನಡ ಜನರ ಪಾಲಿಗೆ ಒಂದು ವಿಶೇಷವಾದ ದಿನ. ಅಂದು ರಾಜ್ಯದ ಎಲ್ಲೆಡೆ ತುಂಬಾ ವಿಜೃಂಭಣೆಯಿಂದ , ಸಡಗರದಿಂದ ನಾಡ ಹಬ್ಬವನ್ನು ಆಚರಿಸಲಾಗುತ್ತದೆ. ಕನ್ನಡನಾಡಹಬ್ಬ , ಕನ್ನಡಮ್ಮನ ಆಚರಣೆ ಎಂಬುದಾಗಿ ಸಹಾ ಆಚರಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಹಬ್ಬವನ್ನು ನವಂಬರ್ ಮಾಸ ಪೂರ್ತಿ ಆಚರಣೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಕವಿ ನಿಸ್ಸಾರ್ ಅಹಮದ್ ರವರು ಹೇಳಿರುವ ಹಾಗೆ, ಕನ್ನಡ ತಾಯಿಯ ಉತ್ಸವ ನಿತ್ಯವೂ ನಡೆಯಬೇಕು.” ನಿತ್ಯೋತ್ಸವ ತಾಯಿ ನಿತ್ಯೋತ್ಸವ” ಎಂಬ ಪ್ರತಿಧ್ವನಿ ಎಲ್ಲಾ ಕಡೆ ಮೊಳಗ ಬೇಕು. ನಮ್ಮ ನೆಚ್ಚಿನ ವಿಶ್ವಕವಿ ಕುವೆಂಪುರವರು ಹೇಳಿರುವ ಹಾಗೆ “ಕನ್ನಡವೆ ಸತ್ಯ ಕನ್ನಡವೇ ನಿತ್ಯ”. ನಿತ್ಯವೂ ಆಕೆಯ ಉಪಾಸನೆ, ಅರ್ಚನೆ ನಡೆಯಲೇ ಬೇಕು. ಆಕೆ ನಿತ್ಯ ಸುಮಂಗಲಿ. ಅದಕ್ಕಾಗಿಯೇ ಎಂಬಂತೆ ನಮ್ಮ ಕನ್ನಡ ಧ್ವಜವನ್ನು ಕೆಂಪು ಹಳದಿ ಬಣ್ಣದಿಂದ ಮಾಡಲಾಗಿದೆ. ಅದು ಅರಿಶಿನ ಕುಂಕುಮದ ಸಂಕೇತವಾಗಿದೆ. ಅಷ್ಟೆ ಅಲ್ಲ ಕೆಂಪು ನಮ್ಮ ಪರಾಕ್ರಮವನ್ನು ಮತ್ತು ಹಳದಿ ನಮ್ಮ ಶಾಂತಿ ಮತ್ತು…

Read More

ರಾಮನಗರ: ಬರ ಪ್ರದೇಶ ಪರಿಶೀಲನೆಯ ಸಮಯದಲ್ಲಿ ಬಿಜೆಪಿ ನಾಯಕರು ಪರಸ್ಪರ ಬಡಿದಾಡಿಕೊಂಡಿರ ಘಟನೆ ರೇಷ್ಮೆನಾಡು ರಾಮನಗರದಲ್ಲಿ ನಡೆದಿದೆ.ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಇಂದು ರಾಮನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಕೈಗೊಂಡಿದ್ದ ಸಮಯದಲ್ಲಿ‌ ವಿಧಾನಪರಿಷತ್ ಸದಸ್ಯ ದೇವೇಗೌಡ ಹಾಗೂ ಚನ್ನಪಟ್ಟಣ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರ ನಡುವೆ ಗಲಾಟೆ ನಡೆದಿದೆ.ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ ಬಹಿರಂಗವಾಗಿಯೇ ತಮ್ಮ ಪಕ್ಷದ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.ರಾಮನಗರದ ವಿಭೂತಿ ಕೆರೆ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ವಿಭೂತಿಕೆರೆ ಗ್ರಾಮಕ್ಕೆ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ತಾಲೂಕು ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರ ಒಳಗೊಂಡ ತಂಡ ಭೇಟಿ ನೀಡಿದರು. ರೈತ ಜಮೀನಿಗೆ ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಹಾನಿಗೀಡಾದ ರಾಗಿ ಬೆಳೆಯನ್ನು ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದುಕೊಂಡರು.ನೊಂದ ರೈತರೊಂದಿಗೆ ಸಂವಾದ ನಂತರ ಮಾಧ್ಯಗಳೊಂದಿಗೆ ಮಾಹಿತಿ ಹಂಚಿಕೊಂಡ ನಂತರ ಸ್ಥಳೀಯ…

Read More

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಸಮೀಪ ಆಟೋ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.ವಾಡಿಯಿಂದ ನಾಲವಾರ ಕಡೆ ತೆರಳುತ್ತಿದ್ದ ಆಟೋಗೆ ಹಲಕರ್ಟಾ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತಪಟ್ಟವರೆಲ್ಲೂ ನಾಲವಾರ ಗ್ರಾಮದ ಒಂದೇ ಕುಟುಂಬದವರಾಗಿದ್ದಾರೆ. ಮೃತರನ್ನು ನಾಜ್ಮಿನ್ ಬೇಗಂ(28), ಬೀಬಿ ಫಾತಿಮಾ(12), ಅಬೂಬಕರ್(4), ಬೀಬಿ ಮರಿಯಮ್(3 ತಿಂಗಳು), ಮೊಹಮ್ಮದ್ ಪಾಷಾ(20) ಹಾಗೂ ಆಟೋ ಚಾಲಕ ಬಾಬಾ(35) ಎಂದು ಗುರುತಿಸಲಾಗಿದೆ ಮತ್ತು 10 ವರ್ಷದ ಬಾಲಕ ಮುಹಮ್ಮದ್ ಹುಸೇನ್ ಗಾಯಗೊಂಡಿದ್ದಾನೆ.ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ಚಿತ್ತಾಪುರಕ್ಕೆ ಹೋಗಿ ಮರಳಿ ನಾಲವಾರ ಗ್ರಾಮಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.ಅಪಘಾತ ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಡಿ.15ರ ವರೆಗೆ 10 ದಿನ ಅಧಿವೇಶನ ನಡೆಸಲು ತಿರ್ಮಾನ | ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ ಹೇಳಿಕೆ ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ.ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್ ಅವರು, ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ ಡಿಸೆಂಬರ್ 15ರ ವರೆಗೆ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ ಎಂದರು.ಸಚಿವ ಸಂಪುಟ ಸಭೆಯಲ್ಲಿ ಬರಗಾಲದ ಬಗ್ಗೆಯೂ ವಿಸ್ತೃತ ವಾಗಿ ಚರ್ಚೆ ಮಾಡಿದ್ದೇವೆ. ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ, ಆದರೆ ಇದುವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಇವತ್ತಿನ ಸಭೆಯಲ್ಲಿ ಕೇಂದ್ರ ಸರ್ಕಾರದ ನಡೆ…

Read More

ಬೆಳಗಾವಿ ಅಧಿವೇಶನದಲ್ಲೇ ಸದಾಶಿವ ಆಯೋಗ ವರದಿ ಮಂಡಿಸಲು ಸಿಎಂಗೆ ಮನವಿ ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ಎಜೆ ಸದಾಶಿವ ಆಯೋಗದ ವರದಿ ಮಂಡಿಸಿ ಒಳ ಮೀಸಲಾತಿ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮಂಗಳವಾರ ತಿಳಿಸಿದ್ದಾರೆ.ಒಳ ಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಪರಿಶಿಷ್ಟ ಜಾತಿಗೆ ಸೇರಿದ ಸಚಿವರು ಮತ್ತು ಶಾಸಕರು ನಡೆಸಿದ ಸಭೆ ಬಳಿಕ ಅವರು ಮಾತನಾಡಿದರು.’ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ಕುರಿತು ಚಿತ್ರದುರ್ಗ ನಗರದಲ್ಲಿ ಎಸ್‌ಸಿ-ಎಸ್‌ಟಿ ಸಮಾವೇಶ ನಡೆಸಲಾಗಿತ್ತು. ಆಗ ಹತ್ತು ಹಲವು ಘೋಷಣೆಗಳನ್ನು ಮಾಡಿದ್ದೆವು. ಅದರಲ್ಲಿ ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿಯೇ ಸದನದ ಮುಂದಿಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ’ ಎಂದು ಹೇಳಿದರು.ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಸದನದ ಮುಂದೆ ಮಂಡಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಪರಮೇಶ್ವರ ತಿಳಿಸಿದರು.ಸಮಾಜ ಕಲ್ಯಾಣ ಸಚಿವ…

Read More

ಬ್ರಹ್ಮದೇವನಮಡು: ತೀವ್ರ ಬರ ಪರಿಸ್ಥಿತಿ ಇರುವುದರಿಂದ ಜನ- ಜಾನುವಾರು ಕುಡಿಯುವ ನೀರಿನ ಸಮಸ್ಶೆಯಾಗದಂತೆ ಮುಂಜಾಗೃತೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಸಿಂದಗಿ ತಾಪಂ ಇಓ ರಾಮೋಜಿ ಅಗ್ನಿ ಹೇಳಿದರು.ಸಿಂದಗಿ ತಾಲೂಕು ಹೊನ್ನಳ್ಳಿ ಕೆರೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.ಹೊನ್ನಳ್ಳಿ ಗ್ರಾಪಂ ವ್ಶಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಪಿಡಿಒಗಳು ನೋಡಿಕೊಳ್ಳಬೇಕು.ನೀರಿನ ಸಮಸ್ಶೆ ಕಂಡು ಬಂದರೆ ಪ್ರಯಾ೯ಯ ವ್ಶವಸ್ಥೆಗೆ ನೀವೇ ಸಲಹೆ ನೀಡಬೇಕು ಎಂದರು.ಸಿಂದಗಿ ಕುಡಿಯುವ ನೀರು ನೈಮ೯ಲ್ಶ ಇಲಾಖೆ ಎಇಇ ಮಂಜುನಾಥಸ್ವಾಮಿ, ತಾಪಂ ಇಡಿ ನಿತ್ಶಾನಂದ ಯಲಗೋಡ, ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ಹಣಮಂತ್ರಾಯಗೌಡ ಬಿರಾದಾರ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಯಂಕಂಚಿ ಪಿಡಿಒ ಸಂಜೀವಕುಮಾರ ದೊಡ್ಡಮನಿ, ಸಾಹೇಪಟೇಲ ಮುರಡಿ, ಹಣಮಂತ ಯಂಟಮಾನ, ಮಲ್ಲು ಕೆಂಭಾವಿ ಸೇರಿದಂತೆ ಮತ್ತಿತರಿದ್ದರು.

Read More

ಮುದ್ದೇಬಿಹಾಳ: ಭಾರತದ ಪ್ರತಿಯೊಬ್ಬ ಪ್ರಜೆ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸಿ ದುರ್ಬಲ ವ್ಯಕ್ತಿಗಳಿಗೆ ಪ್ರಾಧಿಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸುವದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರೆ ಎಲ್ಲ ಸರಕಾರಿ ಇಲಾಖೆಗಳ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕುರಿತು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಯಾವುದೇ ವ್ಯಕ್ತಿಗೆ ಕಾನೂನಿನ ಅವಶ್ಯಕತೆ ಇದ್ದಲ್ಲಿ ಹತ್ತಿರದ ಕಾನೂನು ಸೇವಾ ಸಮಿತಿಗೆ ಭೇಟಿ ನೀಡಿ ಉಚಿತವಾಗಿ ಕಾನೂನಿನ ನೆರವು ಪಡೆದುಕೊಳ್ಳಲು ಅವಕಾಶಗಳನ್ನು ಕಲ್ಪಿಸಲಾಗಿದೆ. ನ್ಯಾಯಾಲಯದ ಪ್ರಕರಣಗಳಲ್ಲಿಯೂ ಉಚಿತ ನೆರವು ಪಡೆದುಕೊಳ್ಳಬಹುದಾಗಿದೆ ಎಂದರು.ಕಾನೂನು ಸೇವಗಳ ಕುರಿತು ಹಿರಿಯ ನ್ಯಾಯವಾದಿ ಬಿ.ಆರ್.ನಾಡಗೌಡರ ವಿಶೇಶ ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ…

Read More