ಬ್ರಹ್ಮದೇವನಮಡು: ತೀವ್ರ ಬರ ಪರಿಸ್ಥಿತಿ ಇರುವುದರಿಂದ ಜನ- ಜಾನುವಾರು ಕುಡಿಯುವ ನೀರಿನ ಸಮಸ್ಶೆಯಾಗದಂತೆ ಮುಂಜಾಗೃತೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಸಿಂದಗಿ ತಾಪಂ ಇಓ ರಾಮೋಜಿ ಅಗ್ನಿ ಹೇಳಿದರು.
ಸಿಂದಗಿ ತಾಲೂಕು ಹೊನ್ನಳ್ಳಿ ಕೆರೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಹೊನ್ನಳ್ಳಿ ಗ್ರಾಪಂ ವ್ಶಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಪಿಡಿಒಗಳು ನೋಡಿಕೊಳ್ಳಬೇಕು.ನೀರಿನ ಸಮಸ್ಶೆ ಕಂಡು ಬಂದರೆ ಪ್ರಯಾ೯ಯ ವ್ಶವಸ್ಥೆಗೆ ನೀವೇ ಸಲಹೆ ನೀಡಬೇಕು ಎಂದರು.
ಸಿಂದಗಿ ಕುಡಿಯುವ ನೀರು ನೈಮ೯ಲ್ಶ ಇಲಾಖೆ ಎಇಇ ಮಂಜುನಾಥಸ್ವಾಮಿ, ತಾಪಂ ಇಡಿ ನಿತ್ಶಾನಂದ ಯಲಗೋಡ, ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ಹಣಮಂತ್ರಾಯಗೌಡ ಬಿರಾದಾರ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಯಂಕಂಚಿ ಪಿಡಿಒ ಸಂಜೀವಕುಮಾರ ದೊಡ್ಡಮನಿ, ಸಾಹೇಪಟೇಲ ಮುರಡಿ, ಹಣಮಂತ ಯಂಟಮಾನ, ಮಲ್ಲು ಕೆಂಭಾವಿ ಸೇರಿದಂತೆ ಮತ್ತಿತರಿದ್ದರು.
Related Posts
Add A Comment