✍️ಅರ್ಚನಾ. ಕೆ
ಕನಸಿನರಮನೆಯಲ್ಲಿ ನಿನ್ನದೇ ಕನವರಿಕೆ
ತಿಳಿಸಲಿ ಹೇಗೆ ಹೃದಯದ ಚಡಪಡಿಕೆ
ಹೃದಯ ಮಂದಿರದಿ ನಿನ್ನದೇ ಪ್ರೇಮಪೂಜೆ
ಎಂದಿಗೂ ನೀಡದಿರು ನಿನ್ನಗಲಿಕೆಯ ಸಜೆ
ಹೃದಯ ಮಿಡಿಯುವುದೇ ನಿನ್ನೊಲವಿಗಾಗಿ
ಅನುಗಾಲವು ಜತೆಯಿರು ಒಲವೇ ಉಸಿರಾಗಿ
ಉಸಿರು ನಿಂತರು ನಿನ್ನೆಸಿರಿನ ಮಿಡಿತ ನಿಲ್ಲದು
ಸಾವಿನಾಚೆಗೂ ಸಾಗುವ ಭಾವಬಂಧನವಿದು