ರಾಮನಗರ: ಬರ ಪ್ರದೇಶ ಪರಿಶೀಲನೆಯ ಸಮಯದಲ್ಲಿ ಬಿಜೆಪಿ ನಾಯಕರು ಪರಸ್ಪರ ಬಡಿದಾಡಿಕೊಂಡಿರ ಘಟನೆ ರೇಷ್ಮೆನಾಡು ರಾಮನಗರದಲ್ಲಿ ನಡೆದಿದೆ.
ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಇಂದು ರಾಮನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಕೈಗೊಂಡಿದ್ದ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ದೇವೇಗೌಡ ಹಾಗೂ ಚನ್ನಪಟ್ಟಣ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರ ನಡುವೆ ಗಲಾಟೆ ನಡೆದಿದೆ.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಬಹಿರಂಗವಾಗಿಯೇ ತಮ್ಮ ಪಕ್ಷದ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ರಾಮನಗರದ ವಿಭೂತಿ ಕೆರೆ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ವಿಭೂತಿಕೆರೆ ಗ್ರಾಮಕ್ಕೆ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ತಾಲೂಕು ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರ ಒಳಗೊಂಡ ತಂಡ ಭೇಟಿ ನೀಡಿದರು. ರೈತ ಜಮೀನಿಗೆ ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಹಾನಿಗೀಡಾದ ರಾಗಿ ಬೆಳೆಯನ್ನು ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದುಕೊಂಡರು.
ನೊಂದ ರೈತರೊಂದಿಗೆ ಸಂವಾದ ನಂತರ ಮಾಧ್ಯಗಳೊಂದಿಗೆ ಮಾಹಿತಿ ಹಂಚಿಕೊಂಡ ನಂತರ ಸ್ಥಳೀಯ ಬಿಜೆಪಿ ಮುಖಂಡರ ಮನೆಗೆ ತೆರಳಿದರು. ಸ್ಥಳೀಯ ಮುಖಂಡರ ಮನೆಯಿಂದ ಹೊರ ಬರುವ ಸಮಯದಲ್ಲಿ ಮುಂಬರುವ ಪದವೀಧರ ಚುನಾವಣೆ ವಿಚಾರವಾಗಿ ದೇವೇಗೌಡ ಹಾಗೂ ಜಯರಾಮ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತಮ್ಮ ಪಕ್ಷದ ಮುಖಂಡ ಜಯರಾಮ್ ಕಪಾಳಕ್ಕೆ ಬಾರಿಸಿದ್ದಾರೆ. ಅಲ್ಲದೇ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಇಬ್ಬರನ್ನು ಸ್ಥಳೀಯ ನಾಯಕರು ಸಮಾಧಾನಪಡಿಸಿದ್ದಾರೆ.
ಆ.ದೇವೇಗೌಡರ ವಿರುದ್ಧ ಪಕ್ಷಕ್ಕೆ ದೂರು ಕೊಡಲು ನಿರ್ಧಾರ
ಚನ್ನಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ಕೆಲಗೆರೆ ಜಯರಾಮ್ ತಮ್ಮ ಮೇಲೆ ಆ.ದೇವೇಗೌಡ ಹಲ್ಲೆ ಮಾಡಿದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅ.ದೇವೇಗೌಡ ಪರ ವರಿಗಾಗಿ ದುಡಿಮೆ ಮಾಡಿದ್ದೇನೆ. ಅವರ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರಿಗೆ ಮತಹಾಕಿಸಿದ್ದೇನೆ. ನಾನು ಅವರಿಗಾಗಿ ದುಡಿದ ಪ್ತತಿಫಲವಾಗಿ ಇಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Related Posts
Add A Comment