ವಿಜಯಪುರ: ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿ ಟಿಎಸ್‌ಎಸ್ ಸಂಘಟನೆಯ ವತಿಯಿಂದ ಮೈಸೂರು ಹುಲಿ ಟಿಪ್ಪುಸುಲ್ತಾನ ಅವರ ಜಯಂತಿ ಕಾರ್ಯಕ್ರಮ ನ.೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ನಿಮಿತ್ಯ ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡ ಹಮೀದ್ ಮುಶ್ರೀಫ್, ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಟಿಎಸ್‌ಎಸ್ ಇರಫಾನ ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment