Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿದ ಎಡಿಸಿ ಮಹಾದೇವ ಮುರಗಿ ಅಭಿಮತ ವಿಜಯಪುರ: ನಮ್ಮ ಕಲೆ ಹಾಗೂ ಸಂಸ್ಕೃತಿ ಇವುಗಳನ್ನು ಸ್ಪರ್ಧೆಗೆ ಮಾತ್ರ ಸೀಮಿತಗೊಳಿಸದೆ ನಮ್ಮ ಬದುಕಿನ ದೈನಂದಿನ ಭಾಗವಾಗಿಸಿಕೊಳ್ಳಬೇಕು. ಅಂದಾಗ ಮಾತ್ರ ನಾಡಿನ, ದೇಶದ ಸಂಸ್ಕೃತಿ ಸದೃಢವಾಗಬಲ್ಲದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಬಿ.ಎಲ್.ಡಿ.ಇ. ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಆಯುರ್ವೇದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಇಂದಿನ ಯುವಕರು ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಕಲೆ ಹಾಗೂ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಹೆಮ್ಮರವಾಗಿ ಬೆಳೆಸುವಂತಾಗಬೇಕೆಂದು ಹೇಳಿದರು.ಭಾರತ ಸರಕಾರದ ರಾಷ್ಟ್ರೀಯ ಯುವಜನೋತ್ಸವ ಸಮಿತಿ ಸದಸ್ಯ ಡಾ. ಜಾವಿದ್ ಜಮಾದಾರ ಮಾತನಾಡಿ, ಭಾರತದ ಶ್ರೀಮಂತ ಸಂಸ್ಕೃತಿ ಪೋಷಿಸುತ್ತ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸುತ್ತಿದೆ. ಅಂತಹ ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ…
ವಿಜಯಪುರ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ ೨೦ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ನವೆಂಬರ್ ೨೦ರಂದು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೧೧-೪೦ಕ್ಕೆ ವಿಜಯಪುರ ಸೈನಿಕ ಶಾಲೆ ಆವರಣ ಹೆಲಿಪ್ಯಾಡ್‌ಗೆ ಆಗಮಿಸಿ, ವಿಜಯಪುರ ನಗರದ ಸೋಲಾಪುರ ರಸ್ತೆಯ ಕಿತ್ತೂರು ಚನ್ನಮ್ಮ ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಭವನ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ೩-೩೦ಕ್ಕೆ ವಿಜಯಪುರ ಸೈನಿಕ ಶಾಲೆ ಹೆಲಿಪ್ಯಾಡ್‌ದಿಂದ ಹೆಲಿಕ್ಯಾಪ್ಟರ್ ಮೂಲಕ ಮರು ಪ್ರಯಾಣ ಬೆಳೆಸಲಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಜೈನ್ ಪ್ಲಾಟ್‌ನಲ್ಲಿ ನಿರ್ಮಾಣಗೊಂಡಿರುವ ಪುರಸಭೆ ಕಾರ್ಯಾಲಯದ ನೂತನ ಕಟ್ಟಡದಲ್ಲಿ ಶನಿವಾರ ಸತ್ಯನಾರಾಯಣ ಪೂಜೆಯೊಂದಿಗೆ ಕಚೇರಿ ಕಾರ್ಯಾರಂಭಗೊಂಡಿತು.ಪಟ್ಟಣದ ತೆಲಗಿ ರಸ್ತೆಯಲ್ಲಿ ಇದುವರೆಗೂ ಪುರಸಭೆ ಕಚೇರಿ ಕಟ್ಟಡದಲ್ಲಿ ಸಾರ್ವಜನಿಕರಿಗೆ ಪುರಸಭೆ ಸೇವೆ ಒದಗಿಸುತ್ತಿದೆ. ಇದೀಗ ವಿಶಾಲವಾದ ಪ್ರದೇಶದಲ್ಲಿ ಅಂದಾಜು ರೂ. ೨ ಕೋಟಿಕ್ಕೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯವಾದ ಪುರಸಭೆ ಕಚೇರಿಯ ನೂತನ ಕಟ್ಟಡದಲ್ಲಿ ಇಂದಿನಿಂದ ಜನರಿಗೆ ಸೇವೆ ಲಭ್ಯವಾಗಲಿದೆ.ಬೆಳಗ್ಗೆ ೯ ಗಂಟೆಗೆ ಸತ್ಯನಾರಾಯಣ ಪೂಜೆಯು ಧಾರ್ಮಿಕ ವಿಧಿ ವಿಧಾನದೊಂದಿಗೆ ಪುರಸಭೆಯ ಎಲ್ಲ ಅಧಿಕಾರಿ ವರ್ಗ,ಸಿಬ್ಬಂದಿ, ಪುರಸಭೆ ಸದಸ್ಯರು, ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಪೂಜೆ ನೆರವೇರಿದ ನಂತರ ಸ್ಥಳೀಯ ಪೂಜ್ಯರಾದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪುರಸಭೆ ಕಚೇರಿಯ ನೂತನ ಕಟ್ಟಡದಲ್ಲಿ ಹಿಂದೆ ಒಮ್ಮೆ ಪೂಜೆ ನೆರೇವರಿದೆ. ಇದೀಗ ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಉಪವಿಭಾಗಾಧಿಕಾರಿ, ಪುರಸಭೆ ಸದಸ್ಯರ ಸರ್ವರ ಸಹಮತದೊಂದಿಗೆ…
ಬಸವನಬಾಗೇವಾಡಿ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಎಸ್‌ಸಿ,ಎಸ್‌ಟಿ ಘಟಕದಲ್ಲಿ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಿದ್ದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್‌ಸಿ, ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ರಮೇಶ ಬಿಜೆಪಿ ಪಕ್ಷ ದಲಿತ ವಿರೋಧ ಪಕ್ಷವಾಗಿದೆ. ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಬಾಂಧವರಿಗೆ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಮಾನ ನೀಡಿದೆ. ಬಿಜೆಪಿ ಪಕ್ಷ ದಲಿತ ವಿರೋಧ ಪಕ್ಷವಾಗಿದೆ. ಅದಕ್ಕಾಗಿಯೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಹೆಚ್ಚು ಸ್ಥಾನಗಳು ಬರುವಂತೆ ಮಾಡಿದ್ದಾರೆ. ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಇದೀಗ ಬಿಜೆಪಿಯು ಒಡೆದ ಮನೆಯಂತೆ ಆಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬರುವದು ನಿಶ್ಚಿತ ಎಂದರು.ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಬಹುದಿತ್ತಲ್ಲವೇ ಎಂಬ ಸುದ್ದಿಗಾರರ…
ದೇವರಹಿಪ್ಪರಗಿ: ಭಾರಿ ಸದ್ದಿನೊಂದಿಗೆ ಭೂಮಿ ಅದುರಿದ ಪರಿಣಾಮ ಸಾರ್ವಜನಿಕರು ಆತಂಕಕ್ಕೆ ಒಳಗಾದ ಘಟನೆ ಶನಿವಾರ ಜರುಗಿದೆ.ಪಟ್ಟಣದ ಇಂಡಿ ರಸ್ತೆ, ಬಸವನಗರ, ಕಲ್ಮೇಶ್ವರ ನಗರಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ೮ ಗಂಟೆಗೆ ಭಾರಿ ಸಪ್ಪಳದೊಂದಿಗೆ ೨ ಸೆಕೆಂಡ್‌ನಷ್ಟು ಕಾಲ ಭೂಮಿ ಅದುರಿದ ಕಾರಣ ಕೆಲವು ಮನೆಗಳ ಕಿಟಕಿ, ಬಾಗಿಲುಗಳಿಂದ ಸದ್ದು ಬಂದ ಅನುಭವವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ ಕಚೇರಿಗೂ ಸಹ ಮಾಹಿತಿ ರವಾನೆಯಾಗಿ ಸಾರ್ವಜನಿಕರಲ್ಲಿ ಚರ್ಚೆಗಳಾದವು. ನಂತರ ಇದು ಸಮೀಪದ ಕಲ್ಲಿನ ಕ್ರಶರ್‌ಗಳಿಂದ ಬಂದ ಶಬ್ದ ಎಂದು ಸಾರ್ವಜನಿಕರು ಹಾಗೂ ರೈತರಿಂದ ತಿಳಿದು ಬಂದಿತು.ಕಳೆದ ೩ ವರ್ಷಗಳ ಹಿಂದೆ ಇದೇ ತೆರನಾದ ಘಟನೆಗಳು ಜರುಗಿದ್ದು, ಆಗ ಸಾರ್ವಜನಿಕರು ಖುದ್ದಾಗಿ ಕಲ್ಲಿನ ಗಣಿ ಪ್ರದೇಶ ಹಾಗೂ ಕ್ರಶರ್‌ಗಳಿಗೆ ತೆರಳಿ ಸ್ಪೋಟಕ ಬಳಸದಂತೆ ವಿನಂತಿ ಮಾಡಿದ್ದರು. ಈಗ ಪುನಃ ಶನಿವಾರ ಇಂಥದೇ ಘಟನೆ ಆಗಿದೆ. ಅದೃಷ್ಟವಶಾತ್ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.
ಸಿಂದಗಿ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ತುಂಬಾ ದೊಡ್ಡದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು.ತಾಲೂಕಿನ ಚಟ್ಟರಕಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಮಕ್ಕಳ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನಿಜವಾಗಲೂ ತಂದೆ ತಾಯಿಯ ಪ್ರೀತಿ, ಆರೈಕೆ ತುಂಬಾ ಅವಶ್ಯಕತೆಯಾಗಿರುತ್ತದೆ. ಅಂಗನವಾಡಿಯಲ್ಲಿ ಮಕ್ಕಳ ಯಾವೆಲ್ಲ ಬೆಳವಣಿಗೆಯಾಗುತ್ತೆ. ಮತ್ತು ಮಕ್ಕಳಿಂದ ಹಾಡು ಕತೆಗಳನ್ನು ಹೇಳಿಸಲಾಯಿತು. ಕಾನ್ವೆಂಟ್ ಗೆ ಹೋಗುವ ಮಕ್ಕಳು ಮತ್ತೆ ನಮ್ಮ ಅಂಗನವಾಡಿಗಿ ಬರುವ ಮಕ್ಕಳಲ್ಲಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿದರು.ಈ ವೇಳೆ ವಲಯದ ಮೇಲ್ವಿಚಾರಕಿಯರು, ಗ್ರಾಮ ಪಂಚಾಯತ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು ಮತ್ತು ಅಂಗನವಾಡಿ ರ‍್ಯರ‍್ತೆಯರು, ಸಹಾಯಕಿಯರು, ಪಾಲಕರು ಉಪಸ್ಥಿತರಿದ್ದರು.
ಸಿಂದಗಿ: ಭಾರತದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ನಗರದ ಸಾತವಿರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನವು ಪುಸ್ತಕ ಮತ್ತು ಲ್ಯಾಬ್‌ಗಳಿಗೆ ಸೀಮಿತವಾಗದೆ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಲೆಸಿಕೊಳ್ಳಬೇಕು. ಎಲ್ಲ ರಂಗಗಳಲ್ಲಿ ಮಹಿಳೆಯರು ಪುರುಷರಿಗಿಂತ ಪ್ರಗತಿಯನ್ನು ಸಾಧಿಸುತ್ತಿರುವುದು ಸಂತಸದ ಸಂಗತಿ. ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಕಾರ್ಯವಾಗಬೇಕಾಗಿದೆ. ಆ ದಿಸೆಯಲ್ಲಿ ಸಾರಂಗಮಠದ ಪೂಜ್ಯರು ಈ ಕಾರ್ಯ ಮಾಡುತ್ತಿರುವುದು ಒಂದು ಸುವರ್ಣ ಘಟ್ಟವಾಗಿದೆ ಎಂದರು.ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಟ…
ದೇವರಹಿಪ್ಪರಗಿ: ಮಹಿಳೆಯರು ಮಕ್ಕಳ ಪಾಲನೆ ಜೊತೆಗೆ ರಾಜ್ಯ, ದೇಶದ ವಿದ್ಯಮಾನಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಲಯ ಮೇಲ್ವಿಚಾರಕಿ ಶಾಂತಾ ನಾಯಿಕ ಹೇಳಿದರು.ತಾಲ್ಲೂಕಿನ ನಿವಾಳಖೇಡ ಗ್ರಾಮದ ಅಂಗನವಾಡಿ ಕೇಂದ್ರ-೨ರಲ್ಲಿ ಶನಿವಾರ ಜರುಗಿದ ಪಾಲಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಗಂಡ,ಮಕ್ಕಳು ಸಂಸಾರದೊಂದಿಗೆ ಬದಲಾಗುತ್ತಿರುವ ಜಗತ್ತನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳಿಗೆ ನೀಡಿರುವ ಸಮವಸ್ತ್ರ ಆಹಾರ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ತಿಳಿದುಕೊಳ್ಳಬೇಕು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಹಣ ಪಡೆಯದೇ ಇದ್ದಲ್ಲಿ ಇ-ಕೆವೈಸಿ ಮಾಡಿ ಹಣ ಜಮೆಯಾಗುವಂತೆ ಕ್ರಮ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ಎಂದರು.ಕಾರ್ಯಕರ್ತೆ ಪ್ರಭಾವತಿ ಕೊಣ್ಣೂರ, ಶರಣಮ್ಮ ಗದ್ದಿಗೆಮಠ, ತಾರಾ ಸುತಾರ್, ಸಾವಿತ್ರಿ ಸುಂಗಠಾಣ, ಚನ್ನಮ್ಮ ಸಿಂದಗಿ, ಲಕ್ಷ್ಮೀಬಾಯಿ ಇಂಡಿ, ಮಲ್ಲಮ್ಮ ನಿಡಗುಂದಿ, ಸಂಗೀತಾ ಭಂಟನೂರ, ಕಾಶೀಬಾಯಿ ಲೋಣಿ, ಲಕ್ಷ್ಮೀಬಾಯಿ ಮೆಟಗಾರ, ನೀಲಮ್ಮ ಹಿರೇಮಠ ಸೇರಿದಂತೆ ಮಕ್ಕಳು ಇದ್ದರು.
ವಿಜಯಪುರ: ಮಧುಮೇಹಿಗಳು ಮುಖದಷ್ಟೇ ಪಾದಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ.ಕೋಟೆಣ್ಣವರ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಇಂದು ಶನಿವಾರ ಆಯೋಜಿಸಲಾಗಿದ್ದ ಉಚಿತ ಮಧುಮೇಹ ಪಾದರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಹೆಚ್ಚು ಮಧುಮೇಹಿಗಳು ದೇವಾಲಯ ದರ್ಶನಕ್ಕೆ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಾರೆ. ಆಗ ಪಾದದ ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಮಧುಮೇಹಿಗಳು ಮನೆಯೇ ದೇವಾಲಯವೆಂದು ತಿಳಿದು ಆದಷ್ಟು ಜಾಗೃತೆ ವಹಿಸಬೇಕು ಎಂದು ಹೇಳಿದ ಅವರು, ಮಧುಮೇಹಿಗಳು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾತನಾಡಿ, ಭಾರತವು ಮಧುಮೇಹದಲ್ಲಿ ವಿಶ್ವದ ರಾಜಧಾನಿಯಾಗುತ್ತಿದೆ. ಮಧುಮೇಹಿಗಳು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ದೀರ್ಘಕಾಲೀನ ತೊಂದರೆಗಳು ಉಂಟಾಗುತ್ತವೆ. ದ್ರಷ್ಟಿಹೀನತೆ(ರೆಟಿನೊಪತಿ), ಕಿಡ್ನಿ ವೈಫಲ್ಯ(ನೆಫ್ರೊಪತಿ) ಮತ್ತು ನರಗಳ ದೌರ್ಬಲ್ಯತೆಯಿಂದ (ನ್ಯೂರೊಪತಿ) ಪಾದದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಬಿ.ಎಲ್.ಡಿ.ಇ…
– ಮಂಡ್ಯ ಮ.ನಾ.ಉಡುಪ ವಾಲ್ಮೀಕಿ ರಾಮಾಯಣದಲ್ಲಿ ರಾವಣ ವಧೆಯ ನಂತರನಡೆಯುವ ಪ್ರಸಂಗವಿದು. ರಾಮ, ಲಕ್ಷ್ಮಣ, ಸೀತೆ,ಹನುಮಂತ ಎಲ್ಲರೂ ಅಯೋಧ್ಯೆಗೆ ಬರುತ್ತಾರೆ. ಭರತಮತ್ತು ಶತೃಘ್ನರು ಪ್ರೀತಿಯಿಂದ ಎಲ್ಲರನ್ನೂ ಸ್ವಾಗತಿಸುತ್ತಾರೆ.ಹೀಗೆ ಎಲ್ಲರೂ ಆನಂದದಿಂದ ಇರುವಾಗ ಲಕ್ಷ್ಮಣನುತನ್ನೊಳಗೆ ತಾನೇ ನಗುತ್ತಾನೆ. ಆ ಸಮಯದಲ್ಲಿ ಅಲ್ಲಿದ್ದ ಕೈಕೇಯಿ ತನ್ನ ಮನದಲ್ಲಿ ಅಂದುಕೊಳ್ಳುತ್ತಾಳೆ.” ಅಂದು ರಾಮನನ್ನು ವನವಾಸಕ್ಕೆ ಕಳುಹಿಸಿ ಪತಿಯ ಸಾವಿಗೆ ಕಾರಣಳಾದ ನೀನು ಈ ದಿವಸ ನೀನು ರಾಮನನ್ನು ಸ್ವಾಗತಿಸುತ್ತೀಯಾ? “ಎಂದು ಪರಿಹಾಸ್ಯಮಾಡಿ ನಗುತ್ತಿದ್ದಾನೆ ಎಂದುಕೊಂಡಳು. ವಿಭೀಷಣ ತನ್ನ ಮನಸ್ಸಿನಲ್ಲಿ” ಮನೆಯ ಗುಟ್ಟನ್ನು ರಾಮನಿಗೆ ಹೇಳಿ ಲಂಕೆಗೆ ಕೇಡುಬಯಸಿ ಅಣ್ಣನನ್ನು ಕೊಲ್ಲಿಸಿ ಲಂಕಾಧಿಪತಿಯಾದೆನೆಂದು ?’ “ನಗುತ್ತಿರಬಹುದು ಎಂದುಕೊಂಡನು.ಸುಗ್ರೀವ ತನ್ನ ಮನಸ್ಸಿನಲ್ಲಿ“ ಅಣ್ಣನನ್ನು ಮೋಸದಿಂದ ಕೊಂದು ರಾಜ್ಯ ಸಂಪಾದಿಸಿರಾಮನ ಜೊತೆಯಲ್ಲಿ ಅನಂದದಿಂದ ಇರುವೆಯಾ “‘ಎಂದು ಲಕ್ಷ್ಮಣ ಪರಿಹಾಸ್ಯ ಮಾಡಿ ನಗುತ್ತಿರಬಹುದು ಎಂದುಕೊಂಡನು.ಸೀತೆ ತನ್ನ ಮನಸ್ಸಿನಲ್ಲಿ“ ರಾಮ ಚಿನ್ನದ ಜಿಂಕೆ ತರಲು ಹೋದಾಗ ಮೂರುಗೆರೆಗಳನ್ನು ಎಳೆದು ಹೊರಬರಬೇಡವೆಂದು ಸಾರಿಸಾರಿ ಹೇಳಿದ್ದರೂ ತನ್ನ ದಾಟಿ ಮಾತು ಕೇಳದೇ ಬಂದಿರುವುದಕ್ಕೆ ತಾನೇ ರಾಮ-ರಾವಣ…
