ದೇವರಹಿಪ್ಪರಗಿ: ಮಹಿಳೆಯರು ಮಕ್ಕಳ ಪಾಲನೆ ಜೊತೆಗೆ ರಾಜ್ಯ, ದೇಶದ ವಿದ್ಯಮಾನಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಲಯ ಮೇಲ್ವಿಚಾರಕಿ ಶಾಂತಾ ನಾಯಿಕ ಹೇಳಿದರು.
ತಾಲ್ಲೂಕಿನ ನಿವಾಳಖೇಡ ಗ್ರಾಮದ ಅಂಗನವಾಡಿ ಕೇಂದ್ರ-೨ರಲ್ಲಿ ಶನಿವಾರ ಜರುಗಿದ ಪಾಲಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಗಂಡ,ಮಕ್ಕಳು ಸಂಸಾರದೊಂದಿಗೆ ಬದಲಾಗುತ್ತಿರುವ ಜಗತ್ತನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳಿಗೆ ನೀಡಿರುವ ಸಮವಸ್ತ್ರ ಆಹಾರ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ತಿಳಿದುಕೊಳ್ಳಬೇಕು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಹಣ ಪಡೆಯದೇ ಇದ್ದಲ್ಲಿ ಇ-ಕೆವೈಸಿ ಮಾಡಿ ಹಣ ಜಮೆಯಾಗುವಂತೆ ಕ್ರಮ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ಎಂದರು.
ಕಾರ್ಯಕರ್ತೆ ಪ್ರಭಾವತಿ ಕೊಣ್ಣೂರ, ಶರಣಮ್ಮ ಗದ್ದಿಗೆಮಠ, ತಾರಾ ಸುತಾರ್, ಸಾವಿತ್ರಿ ಸುಂಗಠಾಣ, ಚನ್ನಮ್ಮ ಸಿಂದಗಿ, ಲಕ್ಷ್ಮೀಬಾಯಿ ಇಂಡಿ, ಮಲ್ಲಮ್ಮ ನಿಡಗುಂದಿ, ಸಂಗೀತಾ ಭಂಟನೂರ, ಕಾಶೀಬಾಯಿ ಲೋಣಿ, ಲಕ್ಷ್ಮೀಬಾಯಿ ಮೆಟಗಾರ, ನೀಲಮ್ಮ ಹಿರೇಮಠ ಸೇರಿದಂತೆ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

