ಸಿಂದಗಿ: ಭಾರತದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ನಗರದ ಸಾತವಿರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನವು ಪುಸ್ತಕ ಮತ್ತು ಲ್ಯಾಬ್‌ಗಳಿಗೆ ಸೀಮಿತವಾಗದೆ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಲೆಸಿಕೊಳ್ಳಬೇಕು. ಎಲ್ಲ ರಂಗಗಳಲ್ಲಿ ಮಹಿಳೆಯರು ಪುರುಷರಿಗಿಂತ ಪ್ರಗತಿಯನ್ನು ಸಾಧಿಸುತ್ತಿರುವುದು ಸಂತಸದ ಸಂಗತಿ. ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಕಾರ್ಯವಾಗಬೇಕಾಗಿದೆ. ಆ ದಿಸೆಯಲ್ಲಿ ಸಾರಂಗಮಠದ ಪೂಜ್ಯರು ಈ ಕಾರ್ಯ ಮಾಡುತ್ತಿರುವುದು ಒಂದು ಸುವರ್ಣ ಘಟ್ಟವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಟ ಮತ್ತು ಪಾಠ ಎರಡನ್ನು ಸಮನಾಗಿ ಕಲಿಯಬೇಕು. ವಿಶ್ವವಿದ್ಯಾನಿಲಯದ ಬ್ಲೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಿ ಅತ್ಯುನ್ನತ ಸ್ಥಾನ ಪಡೆಯಿರಿ ಎಂದು ಶುಭ ಹಾರೈಸಿದರು.
ವೇದಿಕೆಯ ಮೇಲೆ ಕೊಣ್ಣೂರು ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಸಹ ಕಾರ್ಯದರ್ಶಿ ಅಶೋಕ ವಾರದ, ಪ್ರಾಚಾರ್ಯ ಎಸ್.ಎಂ ಪೂಜಾರಿ, ರಾಜಶೇಖರ ಬೆನಕನಹಳ್ಳಿ, ಮಹಾಂತೇಶ ಲಾಯದಗುಂದಿ, ಹನುಮಂತಯ್ಯ ಪೂಜಾರ, ಜಗದೀಶ ಗಸ್ತಿ ಇದ್ದರು.
ಈ ವೇಳೆ ನಿರ್ಣಾಯಕರಾಗಿ ಸಿ.ಕೆ ಸಿಂಪಿ, ಎಸ್.ಎಸ್ ಮಲ್ಲೇದ, ಆರ್.ಆರ್ ನಿಂಬಾಳಕರ, ಮಂಜುನಾಥ್ ತಳವಾರ, ನೀಲಕಂಠ ಗೋಡೆಕರ ಕಾರ್ಯ ನಿರ್ವಹಿಸಿದರು. ಆರ್.ಡಿ. ಪಾಟೀಲ ಕಾಲೇಜಿನ ದೈಹಿಕ ಶಿಕ್ಷಕ ಗವಿಸಿದ್ದಪ್ಪ ಆನೆಗುಂದಿ ಸ್ವಾಗತಿಸಿದರು. ಉಪನ್ಯಾಸಕ ಜಿ.ಎ. ನಂದಿಮಠ ನಿರೂಪಿಸಿ ವಂದಿಸಿದರು.
ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಮಹಿಳಾ ಕಾಲೇಜ್ ಪ್ರಥಮ ಸ್ಥಾನ ಪಡೆದುಕೊಂಡರೆ ಮುದೋಳದ ದಾನಮ್ಮದೇವಿ ಕಲಾ ಮತ್ತು ವಾಣಿಜ್ಯ ಕಾಲೇಜ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಇದೇ ಸಂದರ್ಭದಲ್ಲಿ ಎಂ.ಎಸ್. ಹೈಯ್ಯಾಳಕರ, ಕೆ.ಎಚ್ ಸೋಮಾಪುರ, ದೈಹಿಕ ನಿರ್ದೇಶಕ ರವಿ ಗೋಲಾ, ಎಸ್.ಎಸ್ ಮಲ್ಲೇದ, ಎಸ್.ಎನ್ ಸಂಗಮ, ಮಂಜುನಾಥ್ ತಳವಾರ್, ಎಸ್.ಎ ಜಾಹಗೀರದಾರ್, ಪ್ರವೀಣ ಹಿರೇಕುರಬರ, ಎಮ್.ಎನ್ ನೂಲಾನವರ, ಯು.ಸಿ ಪೂಜೇರಿ, ಜಿ.ಎಸ್. ಕುಲಕರ್ಣಿ, ಎ.ಆರ್.ರಜಪೂತ, ಪಿ.ಎಮ್.ಮಾಲಿಪಾಟೀಲ,ಶಂಕರ ಕುಂಬಾರ ಸೇರಿದಂತೆ ವಿವಿಧ ಜಿಲ್ಲೆಯ ತಂಡಗಳು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

