ದೇವರಹಿಪ್ಪರಗಿ: ಭಾರಿ ಸದ್ದಿನೊಂದಿಗೆ ಭೂಮಿ ಅದುರಿದ ಪರಿಣಾಮ ಸಾರ್ವಜನಿಕರು ಆತಂಕಕ್ಕೆ ಒಳಗಾದ ಘಟನೆ ಶನಿವಾರ ಜರುಗಿದೆ.
ಪಟ್ಟಣದ ಇಂಡಿ ರಸ್ತೆ, ಬಸವನಗರ, ಕಲ್ಮೇಶ್ವರ ನಗರಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ೮ ಗಂಟೆಗೆ ಭಾರಿ ಸಪ್ಪಳದೊಂದಿಗೆ ೨ ಸೆಕೆಂಡ್‌ನಷ್ಟು ಕಾಲ ಭೂಮಿ ಅದುರಿದ ಕಾರಣ ಕೆಲವು ಮನೆಗಳ ಕಿಟಕಿ, ಬಾಗಿಲುಗಳಿಂದ ಸದ್ದು ಬಂದ ಅನುಭವವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ ಕಚೇರಿಗೂ ಸಹ ಮಾಹಿತಿ ರವಾನೆಯಾಗಿ ಸಾರ್ವಜನಿಕರಲ್ಲಿ ಚರ್ಚೆಗಳಾದವು. ನಂತರ ಇದು ಸಮೀಪದ ಕಲ್ಲಿನ ಕ್ರಶರ್‌ಗಳಿಂದ ಬಂದ ಶಬ್ದ ಎಂದು ಸಾರ್ವಜನಿಕರು ಹಾಗೂ ರೈತರಿಂದ ತಿಳಿದು ಬಂದಿತು.
ಕಳೆದ ೩ ವರ್ಷಗಳ ಹಿಂದೆ ಇದೇ ತೆರನಾದ ಘಟನೆಗಳು ಜರುಗಿದ್ದು, ಆಗ ಸಾರ್ವಜನಿಕರು ಖುದ್ದಾಗಿ ಕಲ್ಲಿನ ಗಣಿ ಪ್ರದೇಶ ಹಾಗೂ ಕ್ರಶರ್‌ಗಳಿಗೆ ತೆರಳಿ ಸ್ಪೋಟಕ ಬಳಸದಂತೆ ವಿನಂತಿ ಮಾಡಿದ್ದರು. ಈಗ ಪುನಃ ಶನಿವಾರ ಇಂಥದೇ ಘಟನೆ ಆಗಿದೆ. ಅದೃಷ್ಟವಶಾತ್ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment
