Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರುದ್ರಮುನಿ ಮಹಾಸ್ವಾಮಿಗಳ ೧೭ನೇ ಪುಣ್ಶರಾಧನೆ | ಡಾ.ವಿಶ್ವರಾಧ್ಶ ಶಿವಾಚಾಯ೯ ಕರೆ ಬ್ರಹ್ಮದೇವನಮಡು: ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ನಡೆ ನುಡಿ ಹಾಗೂ ಭಕ್ತಿಯನ್ನು ಅಪ೯ಣೆ ಮಾಡಿಕೊಂಡವರಾಗಿದ್ದರು.ಅವರ ತತ್ವಾದಶ೯ಗಳು ಅಧ್ಶಾತ್ಮದ ಸಿದ್ಧಾಂತದಿಂದ ಕೂಡಿದ್ದವು ಎಂದು ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಮಾಗಣಗೇರಾದ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಮೀಪದ ಸುಕ್ಷೇತ್ರ ಹಿರೇಅಲ್ಲಾಪೂರ ಗ್ರಾಮದಲ್ಲಿ ಈಚೆಗೆ ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ೧೭ನೇ ಪುಣ್ಶಾರಾಧನೆ ಹಾಗೂ ದ್ವಾರಬಾಗಿಲು ಉದ್ಘಾಟನೆ,ಲಿಂಗೈಕ್ಶ ಶರಣಮ್ಮ ತಾಯಿಯವರ ಮೂತಿ೯ ಪ್ರತಿಷ್ಠಾಪನೆ ಕಾಯ೯ಕ್ರದ ಸಾನ್ನಿಧ್ಶವಹಿಸಿ ಆಶೀವ೯ಚನ ನೀಡಿದರು. ರುದ್ರಮುನಿ ಸ್ವಾಮಿಗಳು ಐಹಿಕ ಸುಖ ಜೀವನಕ್ಕಾಗಿ ಆಸ್ತಿಯನ್ನು ಸಂಪಾದಿಸದೆ ಭಕ್ತರನ್ನೇ ಸಮಾಜದ ಆಸ್ತಿಯನ್ನಾಗಿ ನಿಮಾ೯ಣ ಮಾಡುವ ಶಕ್ತಿಯನ್ನು ಹೊಂದಿದ್ದರು.ಸಮಾಜದಲ್ಲಿ ನಾವು ನಡೆಯುವ ನಡವಳಕೆ ಹಾಗೂ ಆಲೋಚನೆಗಳು ಸೂಕ್ಷ್ಶತೆಯಿಂದ ಕೂಡಿದಾಗ ಮಾತ್ರ ನಮ್ಮನ್ನು ಸಮಾಜ ಒಪ್ಪಿಕೊಳ್ಳಲು ಸಾಧ್ಶ.ತ್ಶಾಗ,ಸಧೃಢತೆ,ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆ ಚಿಟಗುಂಪುದ ಗುರುಲಿಂಗ ಶಿವಾಚಾಯ೯ರು,ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು,ಶ್ರೀಮಠದ ಒಡೆಯ ಮಲ್ಲಯ್ಶ ಸ್ವಾಮಿಜಿ,ಬಿಜೆಪಿ ಮುಖಂಡ…
ಮೋರಟಗಿಯಲ್ಲಿ ಧರ್ಮಸಭೆ | ಶಾಸಕ ಅಶೋಕ ಮನಗೂಳಿ ಅಭಿಮತ ಮೋರಟಗಿ: ಶಿಕ್ಷಣ ಶಾಲೆಯಲ್ಲಿ ಸಿಕ್ಕರೆ, ಸಂಸ್ಕಾರ ಎನ್ನುವುದು ಧರ್ಮಸಭೆಯಲ್ಲಿ ಸಿಗುತ್ತದೆ, ಗುಡಿ ಗೋಪುರ ಮಠಮಾನ್ಯಗಳು ಸಂತರು ಶರಣರು ಮಾನವ ಕುಲಕ್ಕೆ ಕೊಟ್ಟಂತ ಆದರ್ಶ ನಮ್ಮೇಲ್ಲರ ಬದುಕಿಗೆ ದಾರಿದೀಪ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.ಗ್ರಾಮದ ಆರಾದ್ಯದೇವ ಶ್ರೀ ಸಿದ್ದರಾಮೇಶ್ವರ ಜಾತ್ರಾ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಕಂಪ್ಯೂಟರ ಯುಗದಲ್ಲಿ ಯವಕರು ಮುಬೈಲ ಗಿಳಯ ಹಿಂದೆ ಬಿದ್ದು ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದು ನೋಡಿದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಸಂಸಾರಿಕ ಬಯಲಾಟ ನಾಟಕಗಳು ಮರೆತಂತಾಗಿದೆ ಆದರೆ ಮೋರಟಗಿ ಗ್ರಾಮದಲ್ಲಿ ಅಮವಾಸೆ ಹುಣ್ಣಿಗೆಗೊಂದು ದೇವರುಗಳ ಜಾತ್ರೆ ಮಾಡುವುದರ ಜೊತೆಗೆ ಧಾರ್ಮಿಕ ಸಭೆಗಳು ರಸಮಂಜರಿ ಕಾರ್ಯಲ್ರಮಗಳು ಜರುಗುತ್ತಿರುವುದು ಸಂತಸದ ಸಂಗತಿ ಯುವಕರು ಶಿಕ್ಷಣ ಪಡೆಯುದರ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದರ್ಶ ವ್ಯಕ್ತಿಗಳಾಗಿ ಬದುಕಿ ತಮ್ಮ ಪಾಲಕರು ಕಂಡ ಕನಸು ನನಸಾಗಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಡಾ, ರುದ್ರಮುನಿ ಶಿವಾಚಾರ್ಯರು…
ಬಂಜಾರಾ ಪ್ರೌಢ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ ವಿಜಯಪುರ: ಕನಕ ಎಂಬುದು ಅಗಾಧಶಕ್ತಿ, ಅದಮ್ಯ ಚೇತನ. ಅವರು ಭಗವಂತನಿಗೆ ಹತ್ತಿರವಾಗಿದ್ದವರು. ಕನಕದಾಸರು ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟವರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ತ÷್ವವನ್ನು ಸಾರಿದರು. ಸಮಾಜದ ಹಲವು ಲೋಪದೋಷಗಳನ್ನು ನಿವಾರಿಸಿ ಮಾನವೀಯತೆಗೆ ಮಹಾಬೆಳಕು ಹರಿಸಿದ ದಾರ್ಶನಿಕರು ಎಂದು ಬಂಜಾರಾ ಪ್ರೌಢ ಶಾಲೆ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಹೇಳಿದರು.ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ೧೫-೧೬ನೇ ಶತಮಾನದಲ್ಲಿ ಜಾತಿವ್ಯವಸ್ಥೆ ತುಂಬಿ ತುಳುಕುತ್ತಿತ್ತು. ಅದನ್ನು ಹೊಡೆದೊಡಿಸು ಛಲ ಇಟ್ಟುಕೊಂಡು ನಾಡಿನಾದ್ಯಂತ ಸಂಚರಿಸಿ ‘ಕುಲ ಕುಲ ಎಂದು ಹೊಡೆದಾಡದಿರಿ’.. ಎಂಬ ಸಂದೇಶ ಸಾರಿದರು ಎಂದು ಹೇಳಿದರು.ಈ ಸಂದರ್ಭದಲ್ಲಿ ಆರ್.ವ್ಹಿ. ಭುಜಂಗನವರ ಕನಕದಾಸರ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಅಲ್ಲದೇ ವಿದ್ಯಾರ್ಥಿಗಳಾದ ಮಾಂತೇಶ ಕಿತ್ಲಿ ಮತ್ತು ಜಯಶ್ರೀ ರಾಠೋಡ ಕನಕದಾಸರ ಕುರಿತು…
ಇಂಡಿ: ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ದಿನವಿದು ಎಂದು ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂತ ಕವಿ ಕನಕದಾಸ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತಾನಾಡಿದರು.ಕನಕದಾಸರ ಜೀವನ ಕುರಿತು ನೋಡುವುದಾದರೆ, ಅವರು ಗುರುಗಳು ಹೇಳುತ್ತಾರೆ. ಯಾರಿಗೆ ಕಾಣಿಸದಂತೆ ಬಾಳೆ ಹಣ್ಣು ತಿನ್ನಲು ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ಕನಕದಾಸರಿಗೂ ಹೇಳಿರುತ್ತಾರೆ. ಅದರಂತೆ ಕೆಲವು ವಿದ್ಯಾರ್ಥಿಗಳು ಎಲ್ಲೆಲ್ಲೂ ನಿಂತು ಬಾಳೆ ಹಣ್ಣು ತಿಂದು ಬರುತ್ತಾರೆ. ಅದರಂತೆ ಪ್ರತಿಯೊಬ್ಬ ವಿಧ್ಯಾರ್ಥಿಯೂ ಹಣ್ಣು ತಿಂದ ಬಗ್ಗೆ ವಿವರಣೆ ನೀಡುತ್ತಾರೆ. ಆದರೆ ಇದೆ ಸಂದರ್ಭದಲ್ಲಿ ಕನಕದಾಸರಿಗೆ ಪ್ರಶ್ನೆ ಮಾಡಿದಾಗ ಬಾಳೆ ಹಣ್ಣು ತಿನ್ನಲು ಹೋದಾಗ ಎಲ್ಲಾ ಕಡೆಯೂ ಭಗಂವತ ಕಾಣಿಸುವ ಬಗ್ಗೆ ನುಡಿಯುತ್ತಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಒಬ್ಬರಿಲ್ಲ, ಒಬ್ಬರು ಗಮನಿಸುತ್ತಾರೆ. ಆದ್ದರಿಂದ ಸಮಾಜದಲ್ಲಿ ಜಾತಿ ಮತ ಪಂತ ಮರೆತು ಸೌಹಾರ್ದ ಜೀವನ ನಡೆಸಬೇಕು. ಅದಲ್ಲದೇ ಊರಿಯುವ ಜ್ಯೋತಿಗೆ…
ವಿಜಯಪುರ: ವಿಜಯನಗರ ಅರಸರ ಪರವಾಗಿ ಯುದ್ಧದಲ್ಲಿ ಭಾಗವಹಿಸಿ, ಸೋಲನ್ನು ಅನುಭವಿಸಿ, ಅನೇಕ ಸಾವು- ನೋವುಗಳನ್ನು ನೋಡಿದ ದಾಸ ಶ್ರೇಷ್ಠ ಕನಕದಾಸರು ವೈರಾಗ್ಯ ಹೊಂದಿ, ಸಂಸಾರವನ್ನು ತ್ಯಾಗ ಮಾಡಿದರು. ದೇಶ ಸಂಚಾರ ಮಾಡುತ್ತ, ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ, ಅಸಮಾನತೆ, ಅನ್ಯಾಯ, ಮೌಡ್ಯತೆಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದರು. ತಿಮ್ಮಪ್ಪ ನಾಯಕನೆಂದು ಕರೆಸಿಕೊಳ್ಳುತ್ತಿದ್ದ ಇವರು ಗುರುಗಳಾದ ವ್ಯಾಸರಾಯರಿಂದ ಕನಕದಾಸರೆಂದು ಮರುನಾಮಕರಣ ಹೊಂದಿದರು. ತಮ್ಮ ಆರಾಧ್ಯ ದೈವ ‘ಕಾಗಿನೆಲೆ ಆದಿ ಕೇಶವರಾಯ’ ಎಂಬ ಹೆಸರಿನಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಸಮಾಜವನ್ನು ಸುಧಾರಣೆ ಮಾಡಲು ಅವಿರತ ಪ್ರಯತ್ನ ಮಾಡಿದರು ಎಂದು ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ತಮ್ಮ ಉಪನ್ಯಾಸ ನೀಡುತ್ತಾ ಹೇಳಿದರು.ಗುರುವಾರ ಕನಕದಾಸರ ಜಯಂತಿ ಪ್ರಯುಕ್ತ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹಾವೇರಿ ಜಿಲ್ಲೆಯ ಬಾಡ ಎನ್ನುವಂತ ಚಿಕ್ಕ ಗ್ರಾಮದಲ್ಲಿ ಕ್ರಿ.ಶ.೧೫೦೮ ರಲ್ಲಿ ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗಳ ಮಗನಾಗಿ ಕನಕದಾಸರು…
ವಿಜಯಪುರ: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಖಾತೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಡಿಸೆಂಬರ್ ೦೧ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ಬೆಳಿಗ್ಗೆ ೧೧-೩೦ಕ್ಕೆ ಮುಧೋಳದಿಂದ ವಿಜಯಪುರಕ್ಕೆ ಆಗಮಿಸಿ, ಮಧ್ಯಾಹ್ನ ೧ ಗಂಟೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ ೩ ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ೬ ಗಂಟೆಗೆ ವಿಜಯಪುರದಿಮದ ಮುಧೋಳಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈವರೆಗೆ ೧೫೯.೯೨ ಕೋಟಿ ರೂ. ರೈತರಿಗೆ ಪಾವತಿ :ಡಿಸಿ ಟಿ.ಭೂಬಾಲನ್ ವಿಜಯಪುರ: ಜಿಲ್ಲೆಯ ೯ ಸಕ್ಕರೆ ಕಾರ್ಖಾನೆಗಳಲ್ಲಿ ೨೦೨೩-೨೪ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿದ್ದು, ಈವರೆಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ೧೧.೭೬ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು, ದಿನಾಂಕ ೨೯-೧೧-೨೦೨೩ ರವರೆಗೆ ೧೫೯.೯೨ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ರೂ ೪.೯೦, ಇಂಡಿಯನ್ ಶುಗರ್ಸ ಹಾವಿನಾಳ ೧೦.೫೮, ಶ್ರೀ ಬಾಲಾಜಿ ಶುಗರ್ಸ ಯರಗಲ್ಲ ೪೯.೦೭, ಕೆಪಿಆರ್ ಶುಗರ್ಸ ಆಲಮೇಲ ೨೫.೧೧, ಜಮಖಂಡಿ ಶುಗರ್ಸ ಯುನಿಟ್-೨ ನಾದ ಕೆಡಿ ೧೪.೯೧, ಸಂಗಮನಾಥ ಶುಗರ್ಸ ಯರಗಲ್ಲ ಬಿಕೆ ೧೮.೧೯, ಭೀಮಾಶಂಕರ ಶುಗರ್ಸ ೧೧.೮೩ ಹಾಗೂ ಶ್ರೀ ಬಸವೇಶ್ವರ ಶುಗರ್ಸ ಕಾರಜೋಳ ೨೫.೩೦ ಕೋಟಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ರೈತರಿಂದ ಪಡೆದುಕೊಂಡು ಕಬ್ಬು ನುರಿಸಿದ ಕೂಡಲೇ ಆಯಾ ರೈತರಿಗೆ ಹಣ ನೀಡಲು ಎಲ್ಲಾ ಸಕ್ಕರೆ…
ಸಂತ ಕನಕದಾಸ ಜಯಂತಿಗೆ ಚಾಲನೆ | ಸಚಿವ ಡಾ.ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ದಾಸ ಸಾಹಿತ್ಯಕ್ಕೆ ವೈಚಾರಿಕೆ ನೆಲೆಗಟ್ಟನ್ನು ಒದಗಿಸಿದ ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಕ್ಲಿಷ್ಟಕರ ಹಾಗೂ ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಚಾರಿಕೆ ಪ್ರಜ್ಞೆ ಬೆಳೆಸಿದ ಕನಕದಾಸರ ತತ್ವಾದರ್ಶಗಳು ದಾರಿದೀಪವಾಗಿವೆ. ದೇಶದ ಭವ್ಯವಾದ ಸಂಸ್ಕೃತಿ, ಪರಂಪರೆ ಇಲ್ಲಿನ ದಾರ್ಶನಿಕರ ವಿಚಾರಧಾರೆಗಳನ್ನು ಅವರ ಚಿಂತನೆಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದ್ದೆ. ಇಂತಹ ಶ್ರೇಷ್ಠ…
ಚಿಮ್ಮಡ: ಕನಕದಾಸರು ಕನ್ನಡ ಭಾಷೆಯ ಪ್ರಸಿದ್ದ ಕೀರ್ತನಕಾರರು, ಹರಿದಾಸರಾಗಿದ್ದರು. ಅವರ ತತ್ವ ಆದರ್ಶಗಳು ಪ್ರತಿಯೊಬ್ಬರಿಗೆ ಮಾದರಿಯಾಗಿದೆ ಎಂದು ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಹೇಳಿದರು.ಗ್ರಾಮದ ಕನಕದಾಸ ವೃತ್ತದಲ್ಲಿ ಹಾಲುಮತ ಸಮಾಜ ಬಾಂಧವರಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಂತರು, ಮಹಾಪುರುಷರ ಆದರ್ಷಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕನಕದಾಸರು ನಮ್ಮ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದಾರೆ. ಅವರ ಅಚಲ ಭಕ್ತಿ ಮತ್ತು ವೈರಾಗ್ಯ ಮನೋಭಾವನೆಯು ಸರ್ವಕಾಲಕ್ಕೂ ಮಾದರಿಯಾಗಿದೆ. ಪ್ರತಿವರ್ಷಕೊಮ್ಮೆ ಅವರ ಜಯಂತಿ ಆಚರಣೆಗೆ ಮಾತ್ರ ಸಿಮಿತ ಗೊಳಿಸದೆ, ಕನಕದಾಸರ ಜೀವನದ ತತ್ವ-ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳು ಸಾರ್ಥಕವಾಗುತ್ತವೆ ಎಂದರು.ಗ್ರಾಮದ ಕನಕದಾಸ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಜನಾರ್ಧನ ಮಹಾರಾಜರನ್ನು ಸಮಾಜ ಬಾಂಧವರಿಂದ ಸತ್ಕರಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ಹಾಲುಮತ ಸಮಾಜದ ಪರಪ್ಪ ಮುಂದಿನಮನಿ, ಅಶೋಕ…
ತಾಳಿಕೋಟಿ: ಸಂತ ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಎಲ್ಲಾ ಮತ -ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠವಾದದ್ದು ಎಂದು ಸಾರಿದರು ತಾರತಮ್ಯ ಭೇದಭಾವ ಮಾನವ ಕುಲಕ್ಕೆ ಮಾರಕ ಎಂಬುದನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿ ಹೇಳಿದರು ಅವರ ಆದರ್ಶ ವಿಚಾರಧಾರೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ತಹಸಿಲ್ದಾರ್ ಕೀರ್ತಿ ಚಾಲಕ್ ಹೇಳಿದರು.ಗುರುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ ಸಂತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಹಾಲುಮತ ಸಮಾಜದ ಮುಖಂಡ ಶಿವರಾಜ್ ತಂಗಡಗಿ ಮಾತನಾಡಿ ಜಾತ್ಯಾತೀತ ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ದುಡಿದ ಸಂತ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಅವರು ಇಡೀ ಮಾನವ ಸಮಾಜದ ಒಳಿತನ್ನು ಬಯಸಿದವರು ಇಂತಹ ಮಹಾನ್ ಸಂತನ ಜಯಂತಿಯನ್ನು ಎಲ್ಲ ಸಮಾಜದವರು ಕೂಡಿ ಕೊಂಡು ಆಚರಿಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಒ ಬಿ. ಆರ್. ಬಿರಾದರ. ಹಾಲುಮತ ಸಮಾಜ ತಾಳಿಕೋಟಿ ಅಧ್ಯಕ್ಷ ಸಾಹೇಬ್ ಗೌಡ ಆಲ್ಯಾಳ. ಉಪಾಧ್ಯಕ್ಷ ಮಲ್ಲಣ್ಣ ಕುರುಬರ.…
