ಈವರೆಗೆ ೧೫೯.೯೨ ಕೋಟಿ ರೂ. ರೈತರಿಗೆ ಪಾವತಿ :ಡಿಸಿ ಟಿ.ಭೂಬಾಲನ್
ವಿಜಯಪುರ: ಜಿಲ್ಲೆಯ ೯ ಸಕ್ಕರೆ ಕಾರ್ಖಾನೆಗಳಲ್ಲಿ ೨೦೨೩-೨೪ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿದ್ದು, ಈವರೆಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ೧೧.೭೬ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು, ದಿನಾಂಕ ೨೯-೧೧-೨೦೨೩ ರವರೆಗೆ ೧೫೯.೯೨ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ರೂ ೪.೯೦, ಇಂಡಿಯನ್ ಶುಗರ್ಸ ಹಾವಿನಾಳ ೧೦.೫೮, ಶ್ರೀ ಬಾಲಾಜಿ ಶುಗರ್ಸ ಯರಗಲ್ಲ ೪೯.೦೭, ಕೆಪಿಆರ್ ಶುಗರ್ಸ ಆಲಮೇಲ ೨೫.೧೧, ಜಮಖಂಡಿ ಶುಗರ್ಸ ಯುನಿಟ್-೨ ನಾದ ಕೆಡಿ ೧೪.೯೧, ಸಂಗಮನಾಥ ಶುಗರ್ಸ ಯರಗಲ್ಲ ಬಿಕೆ ೧೮.೧೯, ಭೀಮಾಶಂಕರ ಶುಗರ್ಸ ೧೧.೮೩ ಹಾಗೂ ಶ್ರೀ ಬಸವೇಶ್ವರ ಶುಗರ್ಸ ಕಾರಜೋಳ ೨೫.೩೦ ಕೋಟಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ರೈತರಿಂದ ಪಡೆದುಕೊಂಡು ಕಬ್ಬು ನುರಿಸಿದ ಕೂಡಲೇ ಆಯಾ ರೈತರಿಗೆ ಹಣ ನೀಡಲು ಎಲ್ಲಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

