ತಾಳಿಕೋಟಿ: ಸಂತ ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಎಲ್ಲಾ ಮತ -ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠವಾದದ್ದು ಎಂದು ಸಾರಿದರು ತಾರತಮ್ಯ ಭೇದಭಾವ ಮಾನವ ಕುಲಕ್ಕೆ ಮಾರಕ ಎಂಬುದನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿ ಹೇಳಿದರು ಅವರ ಆದರ್ಶ ವಿಚಾರಧಾರೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ತಹಸಿಲ್ದಾರ್ ಕೀರ್ತಿ ಚಾಲಕ್ ಹೇಳಿದರು.
ಗುರುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ ಸಂತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಹಾಲುಮತ ಸಮಾಜದ ಮುಖಂಡ ಶಿವರಾಜ್ ತಂಗಡಗಿ ಮಾತನಾಡಿ ಜಾತ್ಯಾತೀತ ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ದುಡಿದ ಸಂತ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಅವರು ಇಡೀ ಮಾನವ ಸಮಾಜದ ಒಳಿತನ್ನು ಬಯಸಿದವರು ಇಂತಹ ಮಹಾನ್ ಸಂತನ ಜಯಂತಿಯನ್ನು ಎಲ್ಲ ಸಮಾಜದವರು ಕೂಡಿ ಕೊಂಡು ಆಚರಿಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಒ ಬಿ. ಆರ್. ಬಿರಾದರ. ಹಾಲುಮತ ಸಮಾಜ ತಾಳಿಕೋಟಿ ಅಧ್ಯಕ್ಷ ಸಾಹೇಬ್ ಗೌಡ ಆಲ್ಯಾಳ. ಉಪಾಧ್ಯಕ್ಷ ಮಲ್ಲಣ್ಣ ಕುರುಬರ. ಬೀರಲಿಂಗೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶಿವರಾಜ್ ಗುಂಡಕನಾಳ. ಶರಣಬಸಪ್ಪ ಪೂಜಾರಿ .ದೊಡ್ಡಮನಿ. ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮುಸ್ತಫಾ ಚೌಧರಿ. ಸಿ ಆರ್ ಪಿ ಗಳಾದ ರಾಜು ವಿಜಾಪುರ. ಬಾಲಾಜಿ ವಿಜಾಪುರ. ಆಯ್ .ಎಲ್ .ಆಲಮೇಲ. ಲಕ್ಷ್ಮಣ್ ಬಾಗೇವಾಡಿ. ಉಪತಹಸಿಲ್ದಾರ್ ಜೈನಾಪುರ್ ತಹಸಿದ್ದಾರ್ ಕಾರ್ಯಾಲಯದ ಸಿಬ್ಬಂದಿ ವರ್ಗ ಮತ್ತಿತರರು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

